ಬ್ರಿಟಿಷ್ ರಾಯಭಾರಿ ಅಧಿಕಾರಿ ಡಾ. ಅಲೆಕ್ಸಾಂಡರ್ ಇವಾನ್ಸ್, ಡೊಮಿನಿಕ್ ಮೆಕ್ಅಲಿಸ್ಟರ್ ಮತ್ತು ಅಲೆಕ್ಸ್ ಕ್ಯಾಮರೂನ್ ಅವರೊಂದಿಗೆ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲದೆ ಇದೀಗ ವಿದೇಶಿಗರ ಗಮನವನ್ನು ಸೆಳೆಯಲು ಆರಂಭಿಸಿದೆ.
ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದು, ಕ್ಯಾನ್ಬೆರಾ, ಲಂಡನ್ ಮತ್ತು ಟೊಕಿಯೊ ನಗರಗಳೂ ಕೂಡ ಕರ್ನಾಟಕ ರಾಜ್ಯದಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ರಾಜ್ಯದ ಮುಂದಿನ ಮುಖ್ಯಮಂತ್ರಿಗಳು ಯಾರಾಗುತ್ತಾರೆಂಬುದನ್ನು ಕಾತರದಿಂದ ಕಾದು ನೋಡುತ್ತಿದೆ.
ರಾಜಧಾನಿ ದೆಹಲಿ ಹಾಗೂ ಚೆನ್ನೈ ನಗರಕ್ಕೆ ಆಗಮಿಸುತ್ತಿರುವ ವಿದೇಶಿ ರಾಯಭಾರಿಗಳು, ಚುನಾವಣೆ ಹಿನ್ನಲೆಯಲ್ಲಿ ಇದೀಗ ಬೆಂಗಳೂರು ನಗರ ಹಾಗೂ ರಾಜ್ಯ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ, ರಾಜಕೀಯ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
2019ನೇ ಸಂಸತ್ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತೆ ಸ್ಪರ್ಧೆಗಿಳಿಯುತ್ತಿದ್ದು, ಈ ಹಿನ್ನಲೆಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಮಗೆ ಮುಖ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈನಲ್ಲಿರುವ ಆಸ್ಟ್ರೇಲಿಯಾ ರಾಯಭಾರಿಗಳು ಮಾತನಾಡಿ, 2019ನೇ ಸಂಸದೀಯ ಚುನಾವಣೆಗೆ ಕರ್ನಾಟಕ ವಿಧಾನಸಭಾ ಚುನಾವಣೆ ಸೆಮೆ ಫೈನಲ್ ಇದ್ದಂತೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಜನರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆಂಬುದನ್ನು ನಮ್ಮ ಸರ್ಕಾರ ತಿಳಿದುಕೊಳ್ಳಲು ಇಚ್ಛಿಸುತ್ತದೆ ಎಂದಿದ್ದಾರೆ.
ಆಹ್ವಾನದ ಮೇಲೆಗೆ ನಿನ್ನೆಯಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ಬೆಳಗಿನ ಉಪಹಾರಕ್ಕಾಗಿ ಬ್ರಿಟನ್'ನ ಭಾರತದ ರಾಯಭಾರಿ ಡಾ. ಅಲೆಕ್ಸಾಂಡರ್ ಇವಾನ್ಸ್, ಡೊಮಿನಿಕ್ ಮೆಕ್ಅಲಿಸ್ಟರ್ ಮತ್ತು ಅಲೆಕ್ಸ್ ಕ್ಯಾಮರೂನ್ ಆಗಮಿಸಿದ್ದರು. ಈ ವೇಳೆ ಕುಮಾರಸ್ವಾಮಿ ಅವರೊಂದಿಗೆ ಮಾತಕತೆ ನಡೆಸುತ್ತಿದ್ದ ಅಧಿಕಾರಿಗಳು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ, ಪಕ್ಷಗಳ ಬೆಳವಣಿಗೆಗಳ ಕುರಿತಂತೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಇಲ್ಲದೆ, ಮೋದಿ ಸರ್ಕಾರ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ, ನೋಟು ನಿಷೇಧ ಹಾಗೂ ಚುನಾವಣೆ ವೇಳೆ ಜಾತಿ ಹಾಗೂ ಹಣದ ಪಾತ್ರ, ಜೆಡಿಎಸ್ ಪಕ್ಷದ ಅಭಿವೃದ್ಧಿ ಸೇರಿದಂತೆ ಸ್ಥಳೀಯ ಪಕ್ಷಗಳ ಕುರಿತ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದರು.
ವಿದೇಶಿ ಅಧಿಕಾರಿಗಳು ರಾಜ್ಯದಲ್ಲಾಗುತ್ತಿರುವ ಬೆಳವಣಿಗೆಗ ಕುರಿತಂತೆ ಮಾಹಿತಿ ಪಡೆದುಕೊಳ್ಳಲು ಕಾತರರಾಗಿದ್ದರು. ರಾಜಕೀಯ ಬೆಳವಣಿಗೆ ಹಾಗೂ ರಾಜ್ಯ ಕುರಿತಂತೆ ಪಕ್ಷದ ಯೋಜನೆಗಳ ಕುರಿತಂತೆ ವಿವರಣಾತ್ಮಕ ಚರ್ಚೆಗಳನ್ನು ನಡೆಸಿದ್ದರು ಎಂದು ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics