ಸಾಂದರ್ಭಿಕ ಚಿತ್ರ 
ರಾಜ್ಯ

ಪ್ರಯಾಣಿಕರ ಸುರಕ್ಷತೆಗೆ ಖಾಸಗಿ ಸಂಸ್ಥೆ ಜೊತೆ ಕೈ ಜೋಡಿಸಿದ ಕೆಎಸ್ಆರ್ ಟಿಸಿ

ಬಸ್ಸುಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ನಗರ ಮೂಲದ ತುರ್ತು ಸೇವೆ ಒದಗಿಸುವ ಗೋಲ್ಡನ್ ....

ಬೆಂಗಳೂರು: ಬಸ್ಸುಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ನಗರ ಮೂಲದ ತುರ್ತು ಸೇವೆ ಒದಗಿಸುವ ಗೋಲ್ಡನ್ ಅವರ್ ಜೊತೆಗೆ ರಾಜ್ಯ ರಸ್ತೆ ಸಾರಿಗೆ ನಿಗಮ ಒಪ್ಪಂದ ಮಾಡಿಕೊಂಡಿದೆ. 
ಇದೊಂದು ಜೀವನವನ್ನೇ ಬದಲಾಯಿಸುವ ಒಪ್ಪಂದವಾಗಿದ್ದು, ಇದರಡಿಯಲ್ಲಿ ಕೆಎಸ್ ಆರ್ ಟಿಸಿ ಬಸ್ಸುಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಪ್ರಾಥಮಿಕ ಚಿಕಿತ್ಸೆಯ ಕಿಟ್ ಗಳನ್ನು ಇಡಲಿದೆ. ಪ್ರಯಾಣಿಕರ ಜೀವವನ್ನು ಕಾಪಾಡುವ ತಂತ್ರಗಳ ಬಗ್ಗೆ 35 ಸಾವಿರಕ್ಕೂ ಅಧಿಕ ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿಗೆ ಗೋಲ್ಡನ್ ಅವರ್ ತರಬೇತಿ ನೀಡಲಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.
ಅಮೆರಿಕಾ ಹಾರ್ಟ್ ಅಸೋಸಿಯೇಷನ್ ನಿಗದಿಪಡಿಸಿರುವ ಗುಣಮಟ್ಟಗಳನ್ನು ಗಮನದಲ್ಲಿಟ್ಟುಕೊಂಡು ತೀವ್ರ ನಿಗಾ ತಜ್ಞರು ಬಸ್ಸುಗಳ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ ಎಂದು ಗೋಲ್ಡನ್ ಅವರ್ ಹೇಳಿಕೆಯಲ್ಲಿ ತಿಳಿಸಿದೆ. 
ಈ ಕಾರ್ಯಕ್ರಮದ ವೇಳೆ ಹಲವು ವರ್ಷಗಳವರೆಗೆ ಅಪಘಾತರಹಿತ ಚಾಲನೆ ಮಾಡಿದ ಚಾಲಕರು ಮತ್ತು ಕಂಡಕ್ಟರ್ ಗಳಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು. 
ಇದೇ ಸಂದರ್ಭದಲ್ಲಿ ಕೆಎಸ್ಆರ್ ಟಿಸಿ ಅಪಘಾತ ಮಾಸ್ ರೆಸ್ಕ್ಯು ವೇಗನ್ ನ್ನು ಘೋಷಿಸಿತು. ಈ ವೇಗನ್ ನ್ನು ಬೆಂಗಳೂರಿನ ಹೆಬ್ಬಾಳ ಬಸ್ ಬೇಯಲ್ಲಿ ಇಡಲಾಗುತ್ತಿದ್ದು, ಸಾವು, ನೋವುಗಳು ಕಂಡುಬಂದಲ್ಲಿ 1062ಗೆ ಕರೆ ಮಾಡಿ ಕಾಲ್ ಸೆಂಟರ್ ಗೆ ತಿಳಿಸಬಹುದು.
ಜನವರಿ 30ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ: ಕೆಎಸ್ಆರ್ ಟಿಸಿಯ ಸಿಬ್ಬಂದಿ ಮತ್ತು ನೌಕರರ ಒಕ್ಕೂಟ, ನೌಕರರ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿ ಜನವರಿ 30ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ. ವಿಮಾ ಪ್ರೀಮಿಯಂ ಮತ್ತು ಪ್ರಾವಿಡೆಂಟ್ ಫಂಡ್ ನ್ನು ಸರಿಯಾದ ಸಮಯಕ್ಕೆ ಬಿಡುಗಡೆ ಮಾಡುತ್ತಿಲ್ಲ ಮತ್ತು ಗ್ರಾಟುಟಿ ಪಾವತಿಗಳನ್ನು ಸಾರಿಗೆ ನಿಗಮಗಳು ತಡೆಹಿಡಿಯುತ್ತವೆ ಎಂದು ಒಕ್ಕೂಟ ಸದಸ್ಯರು ಆರೋಪಿಸಿ ಉಪವಾಸ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಆದರೆ ಬಂದ್ ನಡೆಸುವುದಿಲ್ಲ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT