ಕಾಮಕೇಳಿ ವೇಳೆ ಸಿಕ್ಕಿಬಿದ್ದ ಪತ್ನಿಯಿಂದ ಪತಿಯ ಹತ್ಯೆ 
ರಾಜ್ಯ

ಬೆಂಗಳೂರು: ಕಾಮಕೇಳಿ ವೇಳೆ ಸಿಕ್ಕಿಬಿದ್ದ ಪತ್ನಿಯಿಂದ ಪತಿಯ ಹತ್ಯೆ

ತನ್ನ ಅಕ್ರಮ ಸಂಬಂಧವನ್ನು ಗುರುತಿಸಿದ ಪತಿಯನ್ನು ಪತ್ನಿಯೇ ಕ್ರೂರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ ಹುಳಿಮಾವು ಪ್ರದೇಶದಲ್ಲಿ ನಡೆದಿದ.

ಬೆಂಗಳೂರು: ತನ್ನ ಅಕ್ರಮ ಸಂಬಂಧವನ್ನು ಗುರುತಿಸಿದ ಪತಿಯನ್ನು ಪತ್ನಿಯೇ ಕ್ರೂರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ ಹುಳಿಮಾವು ಪ್ರದೇಶದಲ್ಲಿ ನಡೆದಿದ.
ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿರುವ ಮಹೇಶ್ ಶಿಂಧೆ ಎನ್ನುವ ವ್ಯಕ್ತಿ ಕೊಲೆಯಾದ ದುರ್ದೈವಿಯಾಗಿದ್ದು ಆತನ ಪತ್ನಿ ದೀಪ್ತಿ ಹಾಗೂ ಆಕೆಯ ಪ್ರಿಯಕರ ರಾಜ್ ಕುಮಾರ್ ಸೇರಿ ಈ ಹತ್ಯೆ ಮಾಡಿದ್ದಾರೆಂದು ಪೋಲೀಸರು ತಿಳಿಸಿದರು.
ಮೃತ ಮಹೇಶ್ ಶಿಂಧೆ ಆಟೋ ಚಾಲಕನಾಗಿದ್ದು ಆತನ ಪತ್ನಿ ದೀಪ್ತಿ ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಿದ್ದಳು. ಅದೇ ಗಾರ್ಮೆಂಟ್ ನಲ್ಲಿ ಸೂಪರ್ ವೈಸರ್ ಆಗಿದ್ದ ಚಿತ್ರದುರ್ಗ ಮೂಲದ ರಾಜ್ ಕುಮಾರ್ ನೊಡನೆ ಆಕೆಗೆ ಅಕ್ರಮ ಸಂಬಂಧವಿತ್ತು. ಅವರಿಬ್ಬರೂ ದೀಪ್ತಿ ಮನೆಯಲ್ಲಿಯೇ ಆಗಾಗ ಸೇರುತ್ತಿದ್ದರು. ಆಹ್ಗೆ ಇಬ್ಬರೂ ಒಟ್ಟಿದ್ದಾಗಲೇ ಪತಿ ಮಹೇಶ್ ಆಗಮಿಸಿದ್ದು ಆತ ಪತ್ನಿಯ ಕಾಮಕೇಳಿಯನ್ನು ಕಣ್ಣಾರೆ ನೋಡೋದ್ದಾನೆ. ತನ್ನ ರಹಸ್ಯ ಬಯಲಾದದ್ದರಿಂದ ಗಾಬರಿಗೊಂಡ ದೀಪ್ತಿ ತನ್ನ ಪ್ರಿಯಕರನೊಡನೆ ಸೇರಿ ಪತಿಯ ಕತ್ತು ಹಿಸುಕಿ ಈ ಕೊಲೆ ಮಾಡಿದ್ದಾಳೆ ಎಂದು ಪೋಲೀಸರು ಹೇಳಿದರು.
ಜ.8ರಂದು ಈ ಘಟನೆ ನಡೆದಿದ್ದು ಪತಿಯನ್ನು ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಮಂಚದ ಮೇಲೆ ಮಲಗಿಸಲಾಗಿತ್ತು. ಶಾಲೆಯಿಂದ ಬಂದ ಮಕ್ಕಳು ತಂದೆ ಎಲ್ಲಿ ಎಂದು ಪ್ರಶ್ನಿಸಿದಾಗಳೂ ದೀಪ್ತಿ ಎಂದಿನಂತೆ ಅವರು ಮಲಗಿ ನಿದ್ರಿಸಿದ್ದಾರೆ ಎಂದಳು.  ಮತ್ತೆ ಕೆಲ ಕಾಲದ ಬಳಿಕ ತಾನೇ ವೈದ್ಯರಿಗೆ ಕರೆ ಮಾಡಿ ಮನೆಗೆ ಕರೆಸಿದ್ದು ವೈದ್ಯರು ಮಹೇಶ್ ಸಾವನ್ನಪ್ಪಿರುವುದನ್ನು ಖಚಿತ ಪಡಿಸಿದ್ದಾರೆ. 
ಶಾಲೆಗೆ ಹೋಗಿದ್ದ ಮಕ್ಕಳು ಹಾಗೂ  ನೆರೆಯವರಿಗೆ ತನ್ನ ಪತಿ ಸಹಜವಾಗಿ ಸತ್ತಿದ್ದಾನೆಂದು ಬಿಂಬಿಸಲು ಪ್ರಯತ್ನಿಸಿದ ದೀಪ್ತಿಯ ಕೃತ್ಯ ಪೋಲೀಸರ ವಿವರವಾದ ತನಿಖೆ ಬಳಿಕ ಬೆಳಕಿಗೆ ಬಂದಿದೆ. ಪೋಲೀಸರು ಮಹೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದಾಗ ಇದು ಸಹಜ ಸಾವಲ್ಲ, ಕೊಲೆ ಎನ್ನುವುದು ತಿಳಿದಿದೆ.ತನಿಖೆ ನಡೆಸಿದ ಪೋಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ಪ್ರಕಟಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT