ಸಾಂದರ್ಭಿಕ ಚಿತ್ರ 
ರಾಜ್ಯ

ಫೇಸ್ ಬುಕ್ ನಲ್ಲಿ ಸ್ನೇಹವಾಗಿ ಮದುವೆಯಾಗಲು ನಿರ್ಧರಿಸಿದ ಗೆಳತಿಯರು:ಪೋಷಕರ ವಿರೋಧ

ಫೇಸ್‌ಬುಕ್‌ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಇಬ್ಬರು ಯುವತಿಯರು ಸಂಬಂಧ ....

ಬೆಂಗಳೂರು: ಫೇಸ್‌ಬುಕ್‌ ಸಾಮಾಜಿಕ ಜಾಲತಾಣದ ಮೂಲಕ  ಪರಿಚಯವಾದ ಇಬ್ಬರು ಯುವತಿಯರು ಸಂಬಂಧ ಮುಂದುವರಿದು ಒಟ್ಟಿಗೆ ವಾಸಿಸುತ್ತಿದ್ದರಲ್ಲದೆಮದುವೆಯಾಗಲು ನಿರ್ಧರಿಸಿರುವುದಕ್ಕೆ ಇಬ್ಬರ ಪೋಷಕರೂ ಸಹ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತಕರಾರು ತೆಗೆದ ಗೆಳತಿಯ ಪಾಲಕರ ವಿರುದ್ಧವೇ ಪೊಲೀಸರಿಗೆ ದೂರು ನೀಡಿರುವ ಅಸಹಜ ಘಟನೆ ನಗರದಲ್ಲಿ ನಡೆದಿದೆ.
ನಾಸಿಕ್‌ ಮೂಲದ ಯುವತಿ ಮತ್ತು ಬೆಂಗಳೂರಿನ ಆಡುಗೋಡಿ ನಿವಾಸಿಯಾದ ಗೆಳತಿ ಹಲವು ತಿಂಗಳಿನಿಂದ ಫೇಸ್‌ಬುಕ್‌ನಲ್ಲಿ ಚಾಟ್‌ ಮಾಡುತ್ತಿದ್ದರು. ಆರಂಭದಲ್ಲಿ ಇಬ್ಬರು ಯುವತಿಯರ ಸ್ನೇಹ ನಂತರ ಮಿತಿಮೀರಿ ಒಟ್ಟಿಗೆ ವಾಸಿಸಲು ಆರಂಭಿಸಿದರು. ನಂತರ ಮದುವೆಯಾಗಲು ನಿರ್ಧರಿಸಿ ನಾಸಿಕ್‌ನಿಂದ ಬೆಂಗಳೂರಿಗೆ ಯುವತಿ ಬಂದಿದ್ದಳು.
ಮನೆಯಿಂದ ನಾಪತ್ತೆಯಾಗಿದ್ದ ಆಡುಗೋಡಿ ಯುವತಿಯನ್ನು ಹುಡುಕಿದ ಪಾಲಕರಿಗೆ ನಾಸಿಕ್ ಯುವತಿ ಜತೆ ಒಂದೇ ಕಡೆ ಇರುವುದು ಗೊತ್ತಾಗಿದೆ. ಮದುವೆಯಾಗಲು ನಿರ್ಧರಿಸಿರುವ ವಿಷಯ ತಿಳಿದು ನಾಸಿಕ್ ಯುವತಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ನೊಂದ ನಾಸಿಕ್ ಯುವತಿ, ಗೆಳತಿಯ ಪಾಲಕರ ವಿರುದ್ಧ ದೂರು ನೀಡಿದ್ದು, ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಸಂಪೂರ್ಣ ಘಟನೆಯ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!