ರಾಜ್ಯ

ಪರೀಕ್ಷೆಗೂ ಮುನ್ನ ವಾಟ್ಸಾಪ್ ಬಳಕೆ ಬೇಡ ; ಪಿಯು ಇಲಾಖೆ ಸೂಚನೆ

Nagaraja AB

ಬೆಂಗಳೂರು:  ದ್ವಿತೀಯ ವರ್ಷದ ಅಂತಿಮ ಪರೀಕ್ಷೆ ಸಂದರ್ಭದಲ್ಲಿ  ವಿದ್ಯಾರ್ಥಿಗಳು ಅನಗತ್ಯ ತೊಂದರೆಯಿಂದ ಪಾರಾಗಲು ವಾಟ್ಸಾಪ್ ಬಳಸದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ.

ಪರೀಕ್ಷಾ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ವಿದ್ಯಾರ್ಥಿಗಳು ದೂರು ಇರುವಂತೆ ಕಾಲೇಜುಗಳ ಪ್ರಿನ್ಸಿಪಾಲರು ಹಾಗೂ ಪೋಷಕರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕೆಂದು ತಿಳಿಸಲಾಗಿದೆ.

ಕರ್ನಾಟಕ ಶಿಕ್ಷಣ ಕಾಯ್ದೆ -1983ಕ್ಕೆ 2017ರಲ್ಲಿ ಮಾಡಿರುವ ತಿದ್ದುಪಡಿ ಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆಯನ್ನು ಹಂಚುವುದು ಅಪರಾಧವಾಗಿದೆ. ಪ್ರಶ್ನೆ ಪತ್ರಿಕೆ ಪಡೆಯುವವರು ಕೂಡಾ ಶಿಕ್ಷೆಗೆ ಆರ್ಹರಾಗುತ್ತಾರೆ.

ಈ ಹಿಂದೆ ನಡೆದಿದ್ದ ನಕಲಿ ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಅಧ್ಯಾಪಕರ ಸಭೆ ನಡೆಸಿ ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ ಕಾಲೇಜುಗಳ ಪ್ರಿನ್ಸಿಪಾಲರಿಗೆ ಸೂಚಿಸಿದ್ದಾರೆ.

ಸೆಕ್ಷನ್ 24ಎ  ಪ್ರಕಾರ .ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆಯನ್ನು ಹಂಚುವುದು ಅಪರಾಧವಾಗಿದೆ. ಅಂತೆಯೇ  ಪರೀಕ್ಷಾ ಸಂದರ್ಭದಲ್ಲಿ ಅಥವಾ ಪರೀಕ್ಷೆಗೂ ಮುನ್ನಾ ಯಾವುದೇ ವ್ಯಕ್ತಿ  ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದು, ಅಥವಾ ಮಾರಾಟ, ಕೊಳ್ಳುವುದು ಕೂಡಾ ಶಿಕ್ಷಾರ್ಹ ಅಪರಾಧವಾಗಲಿದೆ

SCROLL FOR NEXT