ಎನ್ ಹೆಚ್ ಕೋನರೆಡ್ಡಿ 
ರಾಜ್ಯ

ಮಹದಾಯಿ ವಿವಾದ: ಕಣಕುಂಬಿಯಲ್ಲಿ ವಾಸ್ತವ್ಯ ಹೂಡಲು ನವಲಗುಂದ ಶಾಸಕ ಕೋನರೆಡ್ಡಿ ನಿರ್ಧಾರ

ವಲಗುಂದ ಶಾಸಕ ಎನ್ ಹೆಚ್ ಕೋನರೆಡ್ಡಿ ಮಹದಾಯಿ ನದಿ ನೀರು ಹಂಚಿಕೆಯ ವಿವಾದದ ಬಗ್ಗೆ ಗೋವಾದ ಸಚಿವರ ಆರೋಪವನ್ನು ಎದುರಿಸುವ ಸಲುವಾಗಿ ಜನವರಿ 31ರಂದು........

ಹುಬ್ಬಳ್ಳಿ: ನವಲಗುಂದ ಶಾಸಕ ಎನ್ ಹೆಚ್ ಕೋನರೆಡ್ಡಿ ಮಹದಾಯಿ ನದಿ ನೀರು ಹಂಚಿಕೆಯ ವಿವಾದದ ಬಗ್ಗೆ ಗೋವಾದ ಸಚಿವರ  ಆರೋಪವನ್ನು ಎದುರಿಸುವ ಸಲುವಾಗಿ ಜನವರಿ 31ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಗ್ರಾಮದಲ್ಲಿ  ವಾಸ್ತವ್ಯ ಹೂಡುವುದಾಗಿ ಘೋಷಿಸಿದ್ದಾರೆ.
ಕಳಸಾ ಬಂದೂರಿ ನಾಲೆ ಯೋಜನೆಯ ಅನುಷ್ಠಾನಕ್ಕಾಗಿ ಹೋರಾಟ ನಡೆಸುವವರಲ್ಲಿ ಮುಂಚೂಣಿ ನಾಯಕ ಎನಿಸಿದ ಕೋನರೆಡ್ಡಿ  ಗೋವಾ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಮತ್ತು ಸ್ಪೀಕರ್ ಪ್ರಮೋದ್ ಸಾವಂತ್ ಅವರ ಹುಸಿ ಮಾತುಗಳನ್ನು ಬಹಿರಂಗಪಡಿಸುವುದು ಅವರ ಗ್ರಾಮ ವಾಸ್ತವ್ಯದ ಉದ್ದೇಶ ಎಂದು ಅವರು ಹೇಳಿದ್ದಾರೆ. ನವಲಗುಂದ ಮತ್ತು ಉತ್ತರ ಕರ್ನಾಟಕದ ಇತರ ಭಾಗಗಳಿಂದ ಸುಮಾರು 300 ರೈತರು ಜನವರಿ 31 ರಂದು ಕಣಕುಂಬಿಗೆ ಭೇಟಿ ನೀಡಲಿದ್ದು ಗ್ರಾಮದ ಮೌಳಿ ದೇವಸ್ಥಾನದಲ್ಲಿ ರಾತ್ರಿಯನ್ನು ಕಳೆಯಲಿದ್ದಾರೆ ಎಂದು ಶಾಸಕರು ಹೇಳಿದರು.
"ನಾವು ಅವರ ಹುಸಿ ಮಾತುಗಳನ್ನು ಬಯಲು ಮಾಡುತ್ತೇವೆಮಾಡುತ್ತೇವೆ ಮತ್ತು ಸ್ಥಳ ಪರಿಶೀಲನೆಗ ಮಾಡುವ ಅವರ ಹಕ್ಕುಗಳನ್ನು ನಾವು ಪ್ರತಿಭಟಿಸುತ್ತೇವೆ. ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಯಾವುದೇ ನಿಯಮಗಳನ್ನು  ಉಲ್ಲಂಘಿಸಲಿಲ್ಲ ಎನ್ನುವುದು ನಮಗೆ ತಿಳಿದಿದೆ. ಮಹದಾಯಿ ನದಿ ನೀರಿನ ವಿವಾದ ಕುರಿತಂತೆ ನ್ಯಾಯಾಲಯಕ್ಕೆ ತಪ್ಪಾದ ಚಿತ್ರಣವನ್ನು ನೀಡುವ ಗೋವಾ ಪ್ರಯತ್ನವಿದಾಗಿದೆ. ನಮ್ಮ ತಂಡವು ಸಂಪನ್ಮೂಲ ವ್ಯಕ್ತಿಗಳು ಮತ್ತು ರೈತರನ್ನು ಒಳಗೊಂಡಿರುತ್ತದೆ " ಕೋನರೆಡ್ಡಿ  ಹೇಳಿದರು.
ನೆಲ ಮತ್ತು ಜಲದ ಸಮಸ್ಯೆಗಳಿಗಾಗಿ ಹೋರಾಟ ನಡೆಸಬೇಕಾದಾಗ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಒಗ್ಗಟ್ತಿನ ಪ್ರದರ್ಶನ ನೀಡಬೇಕೆಂದು ಅವರು ಹೇಳಿದರು. "ಬಿಜೆಪಿ ನಾಯಕರು ಏಕೆ ಈ ವಿಷಯದಲ್ಲಿ ಮೌನ ತಾಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯ ಮಧ್ಯಸ್ಥಿಕೆಯಿಂದಲೇ ಈ ಸಮಸ್ಯೆಗೆ ಪರಿಹಾರ. ಅವರು ಫೆಬ್ರವರಿ 4 ರಂದು ಬೆಂಗಳೂರಿಗೆ ಆಗಮಿಸುವವರಿದ್ದು ಆ ಸಮಯದಲ್ಲಿ ಎಲ್ಲ ಬಿಜೆಪಿ ಮುಖಂಡರು ಈ ವಿಷಯದ ಬಗ್ಗೆ ಮಾತನಾಡಲು ಪ್ರಧಾನಿಯನ್ನು ಕೋರಬೇಕೆಂದು ನಾನು ಒತ್ತಾಯಿಸುತ್ತೇನೆ. " ಶಾಸಕರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು