ದೀಪಕ್, ಬಶೀರ್ ರಕ್ಷಣೆ ಮಾಡಲು ಯತ್ನಿಸಿದ್ದವರಿಗೆ ಬಹುಮಾನ
ಮಂಗಳೂರು: ರಾಜ್ಯದಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಮಂಗಳೂರಿನಲ್ಲಿ ಕೋಮುದ್ವೇಷಕ್ಕೆ ಬಲಿಯಾದ ದೀಪಕ್ ಹಾಗೂ ಬಶೀರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ಸಂದರ್ಭದಲ್ಲಿ ದೀಪಕ್ ರಾವ್ ಹಾಗೂ ಹೋಟೆಲ್ ಮಾಲೀಕ ಅಬ್ದುಲ್ ಬಶೀರ್ ನನ್ನು ರಕ್ಷಣೆ ಮಾಡಲು ಯತ್ನಿಸಿದವರಿಗೆ ವಕೀಲರೊಬ್ಬರು ಮಂಗಳವಾರ ಬಹುಮಾನ ನೀಡಿದ್ದಾರೆ.
ಕಲಬುರಗಿಯ ವಕೀಲರೊಬ್ಬರು ದೀಪಕ್ ಹಾಗೂ ಬಶೀರ್ ನನ್ನು ರಕ್ಷಣೆ ಮಾಡಲು ಯತ್ನಿಸಿದ್ದ ಮಜೀದ್ ಹಾಗೂ ಶೇಖರ್ ಅವರಿಗೆ ತಲಾ ರೂ.50,000 ಬಹುಮಾನವನ್ನು ನೀಡಿದ್ದಾರೆ.
ಉಪ ಆಯುಕ್ತ ಶಶಿಕಾಂತ್ ಸೆಂದಿಲ್ ಅವರಿಗೆ ಪತ್ರ ಬರೆದಿರುವ ವಕೀಲ ಪಿ. ವಿಲಾಸ್ ಕುಮಾರ್ ಅವರು, ದೀಪಕ್ ಹಾಗೂ ಬಶೀರ್ ನನ್ನು ರಕ್ಷಣೆ ಮಾಡಿದವರು ವಿವಿಧ ಧರ್ಮಗಳಿಗೆ ಸೇರಿದವರಾಗಿದ್ದಾರೆ. ದೀಪಕ್ ಹಾಗೂ ಬಶೀರ್ ನನ್ನು ರಕ್ಷಣೆ ಮಾಡಲು ಯತ್ನಿಸಿದ್ದ ಮಜೀದ್ ಹಾಗೂ ಶೇಖರ್ ತಮ್ಮ ಯತ್ನದಲ್ಲಿ ಯಶಸ್ವಿಯಾಗದೇ ಇರಬಹುದು. ಆಧರೆ, ಅವರು ಈ ಮೂಲಕ ದೇಶದ ಜನತೆಗೆ ಸಂದೇಶವನ್ನು ಸಾರಿದ್ದಾರೆ. ಪ್ರಾಣ ಉಳಿಸಲು ಸಾಕಷ್ಟು ಯತ್ನಗಳನ್ನು ಮಾಡಿದ್ದಾರೆ. ಈ ಮೂಲಕ ತಾವೂ ನಿಜವಾದ ಮಾನವತಾವಾದಿಗಳು ಹಾಗೂ ಜಾತ್ಯಾತೀತ ವ್ಯಕ್ತಿಗಳೆಂಬುದನ್ನು ಸಾಬೀತುಪಡಿಸಿದ್ದಾರೆ.
ನಾನು ಶ್ರೀಮಂತ ವ್ಯಕ್ತಿಯಲ್ಲ. ಸಾಮಾನ್ಯ ವಕೀಲನಷ್ಟೇ. ಉತ್ತಮವಾಗಿ ನಡೆದುಕೊಂಡ ಕಾರಣ ಗೌರವಯುತವಾಗಿ ನಾನು ಇವರಿಗೆ ಬಹುಮಾನವನ್ನು ನೀಡುತ್ತಿದ್ದೇನೆ. ಪತ್ರದ ಮೂಲಕ ನಾನು ಯಾವುದೇ ಪ್ರಚಾರವನ್ನೂ ಬಯಸುತ್ತಿಲ್ಲ. ಹತ್ಯೆ ಪ್ರಕರಣಗಳಲ್ಲಿ ಅವರ ತಲೆ, ಮೂರು, ಕಿವಿ, ನಾಲಿಗೆ ಕಿತ್ತು ಹಾಕಿದರೆ ಇನಾಮು ನೀಡುತ್ತೇವೆಂದು ಕೆಲವರು ಧರ್ಮದ ಹೆಸರಿನಲ್ಲಿ ಹಿಂಸಾಚಾರವನ್ನು ಸೃಷ್ಟಿಸುತ್ತಾರೆ. ದ್ವೇಷವನ್ನು ಹರಡುವ ಇಂತಹ ಕ್ರಿಮಿನಲ್ ಗಳಿಗೆ ಉತ್ತರವಾಗಿ ನಾನು ಸಹಾಯವನ್ನು ಮಾಡುತ್ತಿದ್ದೇನೆ, ಮಾನವತಾವಾದಿಗೆ ಹಾಗೂ ಜಾತ್ಯಾತೀತಕ್ಕೆ ಬೆಂಬಲ ನೀಡುತ್ತಿದ್ದೇನೆಂದು ತಿಳಿಸಿದ್ದಾರೆ.
ಬಹುಮಾನ ಪಡೆದ ಬಳಿಕ ಹೇಳಿಕೆ ನೀಡಿರುವ ಮಜೀದ್ ಅವರು, ನಾನು ಯಾರಿಂದರೂ ಏನನ್ನೂ ನಿರೀಕ್ಷಿಸುತ್ತಿರಲಿಲ್ಲ. ದೀಪಕ್ ನನ್ನ ಅಂಗಡಿಯಲ್ಲಿ ಕಳೆದ 7 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಹೀಗಾಗಿ ಆತನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಆದರೆ, ಈ ಯತ್ನದಲ್ಲಿ ದೀಪಕ್ ನನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos