ಹೆಚ್ಎಎಲ್'ನಿಂದ ಪ್ರಥಮ ಸ್ವದೇಶಿ ಲಘು ಯುದ್ಧ ಹೆಲಿಕಾಪ್ಟರ್ ಸಿದ್ಧ 
ರಾಜ್ಯ

'ಮೇಕ್ ಇನ್ ಇಂಡಿಯಾ'ಗೆ ಒತ್ತು: ಹೆಚ್ಎಎಲ್'ನಿಂದ ಪ್ರಥಮ ಸ್ವದೇಶಿ ಲಘು ಯುದ್ಧ ಹೆಲಿಕಾಪ್ಟರ್ ಸಿದ್ಧ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 'ಮೇಕ್ ಇನ್ ಇಂಡಿಯಾ'ಗೆ ಹೆಚ್ಚಿನ ಒತ್ತು ನೀಡಿರುವ ಹೆಚ್ಎಎಲ್. ದೇಶದಲ್ಲಿಯೇ ಮೊದಲ ಬಾರಿ ಸ್ವಯಂ ಚಾಲಿಕ ವೈಮಾನಿಕ ನಿಯಂತ್ರಣ ವ್ಯವಸ್ಥೆ (ಎಎಫ್'ಸಿಎಸ್) ಹೊಂದಿರುವ, ಪ್ರಥಮ...

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 'ಮೇಕ್ ಇನ್ ಇಂಡಿಯಾ'ಗೆ ಹೆಚ್ಚಿನ ಒತ್ತು ನೀಡಿರುವ ಹೆಚ್ಎಎಲ್. ದೇಶದಲ್ಲಿಯೇ ಮೊದಲ ಬಾರಿ ಸ್ವಯಂ ಚಾಲಿಕ ವೈಮಾನಿಕ ನಿಯಂತ್ರಣ ವ್ಯವಸ್ಥೆ (ಎಎಫ್'ಸಿಎಸ್) ಹೊಂದಿರುವ, ಪ್ರಥಮ ಸ್ವದೇಶಿ ಲಘು ಯುದ್ಧ ಹೆಲಿಕಾಪ್ಟರ್ (ತಂತ್ರಜ್ಞಾನ ಪ್ರದರ್ಶನಕಾರ-2)ನ ಹಾರಾಟವನ್ನು ಬುಧವಾರ ಯಶಸ್ವಿಯಾಗಿ ನಡೆದಿದೆ. 
ಚೊಚ್ಚಲ ವಿಮಾನ 20 ನಿಮಿಷ ಯಾವುದೇ ಅಡೆತಡೆಯಿಲ್ಲದೆ ಹಾರಾಟ ನಡೆಸಿತು ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ಮೂಲಗಳು ಮಾಹಿತಿ ನೀಡಿವೆ. 
ಲಘು ಯುದ್ಧ ಹೆಲಿಕಾಪ್ಟರ್ ನಿರ್ವಹಿಸಿದ ತಂಡದಲ್ಲಿ ವಿಂಗ್ ಕಮಾಂಡರ್ (ನಿವೃತ್ತ) ಉನ್ನಿ ಕೆ. ಪಿಳ್ಳೈ, ಮುಖ್ಯ ಟೆಸ್ಟ್ ಪೈಲಟ್ ಮತ್ತು ಗ್ರೂಪ್ ಕ್ಯಾಪ್ಟನ್ (ನಿವೃತ್ತ) ರಾಜೇಶ್ ವರ್ಮಾ ಇದ್ದರು. 
ಹೆಚ್ಎಎಲ್ ಅನುದಾನದಲ್ಲಿ ಸ್ವದೇಶಿ ನಿರ್ಮಿತ ಸ್ವಯಂ ಚಾಲಿತ ವೈಮಾನಿಕ ನಿಯಂತ್ರಣ ವ್ಯವಸ್ಥೆ ಅಭಿವೃದ್ಧಿಯಾಗಿದೆ. ಇದು ಉತ್ತಮ ಗುಣಮಟ್ಟದ ಆಮದಿತ ವ್ಯವಸ್ಥೆಯ ಸ್ಥಾನವನ್ನು ತುಂಬಲಿದೆ ಎಂದು ಹೆಚ್ಎಎಲ್ ಸಿಎಂಡಿ ಟಿ. ಸುವರ್ಣ ರಾಜು ಅವರು ಹೇಳಿದ್ದಾರೆ. 
ಎಎಫ್'ಸಿಎಸ್ ನಾಲ್ಕು ಆ್ಯಕ್ಸಿಸ್ ವೈಮಾನಿಕ ನಿಯಂತ್ರಣ ವ್ಯವಸ್ಥೆಯ ಡಿಜಿಟಲ್ ರೂಪವನ್ನು ಹೊಂದಿದ್ದು, ಇದು ಹೆಲಿಕಾಪ್ಟರ್ ಗಳ ನಿರ್ವಹಣಾ ನಿಯಂತ್ರಣ, ಸ್ಥಿರತೆ ವರ್ಧನಾ ಕ್ರಿಯೆ ಮತ್ತು ಸ್ವಯಂ ಪೈಲಟ್ ಮಾದರಿಯನ್ನು ಹೊಂದಿದೆ. ಇದರ ಹಾರ್ಡ್ ವೇರ್, ಸಾಫ್ಟ್ ವೇರ್ ಮತ್ತು ನಿಯಂತ್ರಣ ವ್ಯವಸ್ಥೆ ಸ್ವದೇಶಿ ನಿರ್ಮಿತವಾಗಿದೆ. ಬೆಂಗಳೂರಿನ ಹೆಚ್ಎಎಲ್ ಆರ್'ಆ್ಯಂಡ್'ಡಿ-ಆರ್'ಡಬ್ಲ್ಯೂಆರ್'ಆ್ಯಂಡ್'ಡಿಸಿ ಮತ್ತು ಎಸ್'ಸಿಎಸ್'ಆರ್'ಡಿಸಿ, ಕೋರ್ವಾ ವಿಭಾಗ ಮತ್ತು ಹೈದರಾಬಾದ್'ನ ಎಸ್ಎಲ್ಆರ್'ಡಿಸಿಯ ಸಂಪೂರ್ಣ ಪ್ರಯತ್ಯದಿಂದ ಇದು ಸಾಧ್ಯವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

Minneapolis Shooter: 'Trump ಸಾವು.. ಭಾರತ ಸರ್ವನಾಶ': ಅಮೆರಿಕ ದಾಳಿಕೋರನ ಬಂದೂಕಿನ ಮೇಲೆ ಶಾಕಿಂಗ್ ಬರಹ!

Anchor Anushree Marriage: ರೋಷನ್ ಜೊತೆ ಸಪ್ತಪದಿ ತುಳಿದ ಆ್ಯಂಕರ್ ಅನುಶ್ರೀ

SCROLL FOR NEXT