ಅರ್ಚಕರಿಗೆ ರೇವಣ್ಣ ಮಂಗಳಾರತಿ 
ರಾಜ್ಯ

ವಾಸ್ತುಪ್ರಕಾರ ಗುದ್ದಲಿ ಪೂಜೆ ಮಾಡದ ಅರ್ಚಕರಿಗೆ ರೇವಣ್ಣ ಪೂಜೆ!

ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು ವಾಸ್ತು ಪ್ರಕಾರ ಪೂಜೆ ಮಾಡದ ಅರ್ಚಕರಿಗೆ ಮಂಗಳಾರತಿ...

ಹಾಸನ: ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು ವಾಸ್ತು ಪ್ರಕಾರ ಪೂಜೆ ಮಾಡದ ಅರ್ಚಕರಿಗೆ ಮಂಗಳಾರತಿ ಮಾಡಿದ ಘಟನೆ ಸೋಮವಾರ ನೆಡೆದಿದೆ. 
ಇಂದು ಹಾಸನ ವೈದ್ಯಕೀಯ ವಿದ್ಯಾರ್ಥಿನಿಯರ ಹಾಸ್ಟೆಲ್ ಶಂಕು ಸ್ಥಾಪನೆಗೆ ಆಮಿಸಿದ್ದ ಸಚಿವರು, ಗುದ್ದಲಿ ಪೂಜೆ ಮಾಡುವಾಗ ಯಾವ ಕಡೆ ಪಾಯ ತೆಗಿಬೇಕು ಅಂತ ಗೊಲ್ಲಿ. ಯಾರ್ರೀ ಈ ಅನನುಭವಿ ಅರ್ಚಕರನ್ನು ಕರೆಸಿದ್ದು..? ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗುದ್ದಲಿ ಪೊಜೆ ವೇಳೆ ಯಾವ ದಿಕ್ಕಿಗೆ ಪಾಯ ತೆಗಿಸಬೇಕು ಎಂಬುದೇ ಇವರಿಗೆ ಗೊತ್ತಿಲ್ಲ. ಅನುಭವಿ ಅರ್ಚಕರನ್ನು ಕರೆಸುವುದನ್ನು ಬಿಟ್ಟು ಇವರನ್ನು ಯಾಕ್ರೀ ಕರೆಸಿದ್ದಿರಿ‌ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಚಿವರು ಗರಂ ಆಗುತ್ತಿದ್ದಂತೆ ತಬ್ಬಿಬ್ಬಾದ ಅಧಿಕಾರಿಗಳು, ಕೊನೆಗೆ ಗುದ್ದಲಿ ಪೊಜೆ ಮಾಡುವ ದಿಕ್ಕನ್ನು ಬದಲಿಸಿ ಕಾರ್ಯಕ್ರಮ ಮುಂದುವರೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!