ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು ಪಬ್ ಮೇಲೆ ದಾಳಿ: 32 ಯುವತಿಯರ ರಕ್ಷಣೆ

ಪಬ್ ವೊಂದರ ಮೇಲೆ ದಾಳಿ ನಡೆಸಿದ ಜೀವನ್ ಭೀಮಾ ನಗರ ಪೊಲೀಸರು 32 ಯುವತಿಯರನ್ನು ರಕ್ಷಿಸಿ ಆರು ಮಂದಿಯನ್ನು ಬಂಧಿಸಿದ್ದಾರೆ....

ಬೆಂಗಳೂರು: ಪಬ್ ವೊಂದರ  ಮೇಲೆ ದಾಳಿ ನಡೆಸಿದ ಜೀವನ್ ಭೀಮಾ ನಗರ ಪೊಲೀಸರು 32 ಯುವತಿಯರನ್ನು ರಕ್ಷಿಸಿ ಆರು ಮಂದಿಯನ್ನು ಬಂಧಿಸಿದ್ದಾರೆ.
ಡಿಸಿಪಿ ಅಜಯ್‌ ಹಿಲೋರಿ ಅವರ ಸೂಚನೆ ಮೇರೆಗೆ ಮಂಗಳವಾರ ತಡರಾತ್ರಿಯಲ್ಲಿ ಪಬ್‌ ಮೇಲೆ ದಾಳಿ ನಡೆಸಿದ ಪೊಲೀಸರು ಅಶ್ಲೀಲ ನೃತ್ಯದಲ್ಲಿ ತೊಡಗಿದ್ದ ಉತ್ತರ ಭಾರತ ಮೂಲದ ಯುವತಿಯರನ್ನು ರಕ್ಷಿಸಿ ಇವರಿಂದ ಬಲವಂತವಾಗಿ ನೃತ್ಯ ಮಾಡಿಸುತ್ತಿದ್ದ ಆರೋಪದ ಮೇರೆಗೆ ಮ್ಯಾನೇಜರ್‌ ಸೇರಿ ಆರು ಸಿಬ್ಬಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ. 
ಲೇಡಿಸ್‌ ಬಾರ್‌ ಹೆಸರಿನಲ್ಲಿ ಪಬ್‌ ಲೈಸೆನ್ಸ್‌ ಪಡೆದು ಅನಧಿಕೃತವಾಗಿ ಲೈವ್‌ಬ್ಯಾಂಡ್‌ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಜೆಬಿ ನಗರ ಠಾಣೆ ಪೊಲೀಸರಿಗೆ ಸೂಚನೆ ಸಿಕ್ಕಿತ್ತು.
ಮಹಿಳಾ ಸಿಬ್ಬಂದಿ ಜತೆ ದಾಳಿ ನಡೆಸಿದ ಪೊಲೀಸರು ಅಶ್ಲೀಲವಾಗಿ ಉಡುಪು ಧರಿಸಿ ನೃತ್ಯದಲ್ಲಿ ತೊಡಗಿದ್ದ ಬಿಹಾರ, ಗುಜರಾತ್‌, ಮಹಾರಾಷ್ಟ್ರ ಮೂಲದ 32 ಯುವತಿಯರನ್ನು ರಕ್ಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ SUVಗೆ ಕಾರು ಡಿಕ್ಕಿ, ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!

ಇರಾನ್ ಉಸಿರುಗಟ್ಟಿಸಲು ಟ್ರಂಪ್ ಮಾಸ್ಟರ್ ಪ್ಲ್ಯಾನ್: ಆರ್ಥಿಕ 'ಡಿ-ಡೇ’ ಘೋಷಣೆ, ಅಮೆರಿಕ ಹೊಸ ನಿರ್ಬಂಧದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ..!

ಸೆಪ್ಟೆಂಬರ್ 11 ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ಸಾಧ್ಯತೆ

ರಾಹುಲ್ ಗಾಂಧಿ ನಿಲುವಿಗೆ ಉಲ್ಟಾ ಹೊಡೆದರೇ ಡಿಕೆಶಿ? CM ನಿವಾಸಕ್ಕೆ ಅದಾನಿ ಭೇಟಿ; ಕೈ ಪಾಳಯದಲ್ಲಿ ಭುಗಿಲೆದ್ದ ಅಸಮಾಧಾನ..!

KPSC ಹಗರಣ: IAS ಅಧಿಕಾರಿ ಗಂಗ್ವಾರ್ ಮನೆ ಮೇಲೆ ED ದಾಳಿ; ಗೇಟ್ ಲಾಕ್ ಮಾಡಿ ಸೆಕ್ಯೂರಿಟಿ ಹೈಡ್ರಾಮಾ, ಕೀ ಮೇಕರ್ ಕರೆಯಿಸಿ ಬಾಗಿಲು ಮುರಿದ ಅಧಿಕಾರಿಗಳು..!