ಆರೋಪಿ ಮಹಾದೇವ್ ಸಾಹುಕಾರ್ ಮತ್ತು ಹತ್ಯೆಗೀಡಾದ ಗಂಗಾಧರ್ ಚಡಚಣ
ವಿಜಯಪುರ: ಭೀಮತೀರದ ಕುಖ್ಯಾತ ರೌಡಿ ಶೀಟರ್ ಗಂಗಾಧರ ಚಡಚಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಹದೇವ ಸಾಹುಕಾರ ಬೈರಗೊಂಡ ಎಂಬಾತನನ್ನು ಬಂಧಿಸಲಾಗಿದೆ.
ಮೂಲಗಳ ಪ್ರಕಾರ ಆರೋಪಿ ಮಹದೇವ ಸಾಹುಕಾರ ಬೈರಗೊಂಡ ನಿನ್ನೆ ತಡರಾತ್ರಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಕೆರೂರು ಗ್ರಾಮದಲ್ಲಿರುವ ತನ್ನ ಮನೆಗೆ ಆಗಮಿಸಿದ್ದಾಗ ಆತನನ್ನು ಬಂಧಿಸಲಾಗಿದೆ. ಮಹಾದೇವ್ ಸಾಹುಕಾರ್ ಆಗಮನದ ಕುರಿತು ಖಚಿತ ಮಾಹಿತಿ ಪಡೆದಿದ್ದ ಚಡಚಣ ಪೊಲೀಸರು ಆತನ ಆಗಮನವಾಗುತ್ತಿದ್ದಂತೆಯೇ ಬಂಧಿಸಿದ್ದಾರೆ.
ಈ ವೇಳೆ ಗಂಗಾಧರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳೂ ಕೂಡ ಜತೆಯಲ್ಲಿದ್ದರುಯ ಸಿಐಡಿ ಮತ್ತು ಚಡಚಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಹಾದೇವ್ ಸಾಹುಕಾರ್ ನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ತಡರಾತ್ರಿ ಬಂಧಿಸಿದ ಮಹಾದೇವ್ ಸಾಹುಕಾರ್ ನನ್ನು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಚಡಚಣ ಪೊಲೀಸ್ ಠಾಣೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಇಂದು ಮಧ್ಯಾಹ್ನದ ಹೊತ್ತಿಗೆ ಮಹಾದೇವ್ ಸಾಹುಕಾರನನ್ನು ಕೋರ್ಟ್ ಗೆ ಹಾಜರು ಪಡಿಸುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics