ರಾಜ್ಯ

ಅಕ್ರಮ ನೇಮಕಾತಿ ಆರೋಪ: 64 ವಿಟಿಯು ಸಿಬ್ಬಂದಿಗೆ ನೋಟಿಸ್ ಜಾರಿ

Nagaraja AB

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನೇಮಕ ಮಾಡಿಕೊಂಡಿದ್ದ  168 ಬೋಧಕ ಸಿಬ್ಬಂದಿಗಳ ಪೈಕಿ 64  ಸಿಬ್ಬಂದಿಗಳ ವಿರುದ್ಧ ಆಕ್ರಮದ ಆರೋಪ ಕೇಳಿಬಂದಿದ್ದು, ಅವರಿಗೆ ವಿವರಣೆ ಕೋರಿ ನೋಟಿಸ್  ಜಾರಿಗೊಳಿಸಲಾಗಿದೆ.

ಪ್ರೊಫೆಸರ್, ಸಹಾಯಕ ಪ್ರೊಫೆಸರ್, ಮತ್ತು ಅಸೊಸಿಯೇಟ್ ಪ್ರೊಫೆಸರ್  ದರ್ಜೆಯ ಹುದ್ದೆಗಳನ್ನು ಐದು ವರ್ಷಗಳ ಹಿಂದೆ ಕುಲಪತಿ ಡಾ. ಹೆಚ್. ಮಹೇಶಪ್ಪ ನೇಮಕ ಮಾಡಿಕೊಂಡಿದ್ದರು. ಆದರೆ, ಇವರಲ್ಲಿ 64 ಮಂದಿ ಅನರ್ಹರು ಎಂಬ ಆರೋಪ ಕೇಳಿಬಂದಿದೆ.

 ಮಹೇಶಪ್ಪ ಅವರ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ನೇಮಕಾತಿ ಕುರಿತು ತನಿಖೆಗಾಗಿ ಗೌರ್ನರ್ ರಚಿಸಿದ್ದ ನ್ಯಾಯಮೂರ್ತಿ ಕೇಶವನಾರಾಯಣ ಸಮಿತಿ  ವರದಿಯಲ್ಲೂ ಇದು ಕಂಡುಬಂದಿತ್ತು.

ಈ ಹಿನ್ನೆಲೆಯಲ್ಲಿ ವಿಟಿಯು ಕಾರ್ಯಕಾರಿ ಸಮಿತಿ ಮತ್ತೊಂದು ಸಮಿತಿಯನ್ನು ರಚಿಸಿತ್ತು . ಈ ಸಮಿತಿ 164 ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದು,  64 ಸಿಬ್ಬಂದಿಗಳು ನಿಯಮ ಉಲ್ಲಂಘಿಸಿರುವುದನ್ನು ಪತ್ತೆ ಮಾಡಿದೆ.

 ಕೆಲವರು  ಸುಳ್ಳು ಮೀಸಲಾತಿ  ಹಾಗೂ ಅಕಾಡೆಮಿಕ್ ವಿಚಾರವಾಗಿಯೂ ಸುಳ್ಳು ಮಾಹಿತಿ ನೀಡಿರುವುದನ್ನು ವಿವಿಯಿಂದ ಸ್ಥಾಪನೆ ಆಗಿದ್ದ ನೇಮಕಾತಿ ಪರಿಶೀಲನಾ ತಂಡವೂ  ಕಂಡುಹಿಡಿದಿದೆ.

ಆ ಹುದ್ದೆಗೆ ಸರಿಸಮಾನದವಾದ ವಿದ್ಯಾರ್ಹತೆ ಇಲ್ಲದಿದ್ದಲೂ ನೇಮಕ ಮಾಡಲಾಗಿದೆ. ಇಂತಹ 64 ಪ್ರಕರಣಗಳ ಬಗ್ಗೆ ವರದಿ ನೀಡಿರುವುದಾಗಿ ಸಮಿತಿಯ ಸದಸ್ಯರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿಕೆ ನೀಡಿದ್ದಾರೆ.

64 ಸಿಬ್ಬಂದಿಗಳು 15 ದಿನಗಳೊಳಗೆ ವಿವರಣೆ ನೀಡುವಂತೆ ವಿಶ್ವವಿದ್ಯಾಲಯ ಹೇಳಿದೆ. ಮುಂದಿನ ಕ್ರಮಕ್ಕಾಗಿ ಕಾರ್ಯಕಾರಿ ಸಮಿತಿ ಮುಂದೆ ನಿಲ್ಲಿಸಲಾಗುತ್ತದೆ.  ತರಬೇತಿ ಪರಿಶೀಲನಾ ಸಮಿತಿ ವರದಿ ಆಧಾರದ ಮೇಲೆ ನೋಟಿಸ್ ಜಾರಿಗೊಳಿಸಲಾಗಿದೆ. ಕಾರ್ಯಕಾರಿ ಸಮಿತಿಯಿಂದ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿವಿ ರಿಜಿಸ್ಟ್ರಾರ್  ಪ್ರೊಫೆಸರ್ ಜಗನ್ನಾಥ ರೆಡ್ಡಿ ತಿಳಿಸಿದ್ದಾರೆ.

SCROLL FOR NEXT