ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ 
ರಾಜ್ಯ

ಮಲೆನಾಡಿನ ಸಮಸ್ಯೆಗಳನ್ನು ಅರಿಯಲು ಅಲ್ಲಿಯೇ ಗ್ರಾಮ ವಾಸ್ತವ್ಯ: ಮುಖ್ಯಮಂತ್ರಿ ಘೋಷಣೆ

ಮಲೆನಾಡಿನ ಸಮಸ್ಯೆಗಳನ್ನು ಅರಿಯಲು ಅಲ್ಲಿಯೇ ಗ್ರಾಮ ವಾಸ್ತವ್ಯ ಮಾಡುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಘೋಷಿಸಿದ್ದಾರೆ

ಬೆಂಗಳೂರು: ಮಲೆನಾಡಿನ ಸಮಸ್ಯೆಗಳನ್ನು ಅರಿಯಲು ಅಲ್ಲಿಯೇ ಗ್ರಾಮ ವಾಸ್ತವ್ಯ ಮಾಡುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಘೋಷಿಸಿದ್ದಾರೆ  
ವಿಧಾನಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಮಲೆನಾಡಿನಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ.ಅಲ್ಲೇ ಉಳಿದು ಅಲ್ಲಿನ ಸಮಸ್ಯೆಗಳ ಅರಿಯಲು ಬಯಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದಕ್ಕೆ ಮುನ್ನ ಸದನದಲ್ಲಿ ಮಾತನಾಡಿದ್ದ ತೀರ್ಥಹಳ್ಳಿ ಶಾಸಕ ಅರಹ ಜ್ಞಾನೇಂದ್ರ ಸೋಮವಾರ ಮುಗ್ದ ಬಾಲಕಿಯೊಬ್ಬಳು ಹಳ್ಳದಲ್ಲಿ ಕಾಲು ಜಾರಿ ಬಿದ್ದು ಕೊಚ್ಚಿ ಹೋದ ಬಗೆಗೆ ವಿವರಿಸಿದರು. ಜತೆಗೆ ಮಲೆನಾಡಿನ ಸಮಸ್ಯೆಗಳು ಎಷ್ಟು ಗಂಭೀರವಾಗಿದೆ ಎಂದು ಸಹ ಅವರು ಸದನಕ್ಕೆ ಮನದಟ್ಟು ಮಾಡಿದ್ದರು/
ಶಾಸಕರ ವಿವರಣೆ ಕೇಳಿದ ಕುಮಾರಸ್ವಾಮಿ ತಾನು ಮಲೆನಾಡಿನಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದದ್ದಲ್ಲದೆ ಮೃತ ಬಾಲಕಿಯ ಕುಟುಂಬಕ್ಕೆ  10 ಲಕ್ಷ ರೂ. ಪರಿಹಾರ ನಿಡುವುದಾಗಿ ಘೋಷಿಸಿದ್ದಾರೆ.
"ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಕೊಚ್ಚಿ ಹೋದ ಶಾಲಾ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲು ಸೂಚಿಸಿದ್ದೇನೆ . ಮುಂದೆ ಇಂತಹ ಘಟನೆ ನಡೆಯದಂತೆ ಕಾಳಜಿ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆ." ಅವರು ಟ್ವೀಟ್ ಮಾಡಿದ್ದಾರೆ.
ಆಗುಂಬೆಯ ಕೆಂದಾಳುಬೈಲುಸಮೀಪ  ದೊಡ್ಲಿಮನೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ  ಆಶಿಕಾ (14)  ಸೋಮವಾರ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jamui harassment: ಮೂವರ ಬಂಧನ, 7 ಮಂದಿ ಗುರುತು ಪತ್ತೆ.. ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ಪೊಲೀಸ್ ಶೋಧ!

Bihar horror: ಅಪ್ರಾಪ್ತ ಜೋಡಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ; ಆಂಧಭಕ್ತರೇ ಹೊಣೆ - ರಾಹುಲ್ ಗಾಂಧಿ

Human Vs Terminator: 6 ಅಡಿ ರೋಬೋಟ್ ಜೊತೆ ಇನ್‌ಫ್ಲುಯೆನ್ಸರ್ ಫೈಟ್, ಗೆದ್ದಿದ್ಯಾರು? Video ವೈರಲ್

ನೆಲಮಂಗಲ ಬಳಿ ನನ್ನದು, ಮಗನದ್ದು ಹತ್ತತ್ತು ಎಕರೆ ಆಸ್ತಿ ಇದೆ, ರಾಜ್ಯ ಸರ್ಕಾರ ದಿವಾಳಿ ಆಗಿದ್ರೆ ಕೊಡುತ್ತೇನೆ: ಎಚ್​​ಡಿ ರೇವಣ್ಣ ತಿರುಗೇಟು

'ಗೆಳತಿಗೆ 370 ರೂ ಬಿರಿಯಾನಿ' ವಿವಾದ: ಕಮಿಡಿಯನ್ Pranit More ಅರ್ಜಿ, ಕೇಂದ್ರ ಸೇರಿ 3 ಸರ್ಕಾರಗಳಿಗೆ 'ಸುಪ್ರೀಂ' ನೋಟಿಸ್