ರಾಜ್ಯ

ಕೋಲಾರ ಜಿಲ್ಲಾ ಆಸ್ಪತ್ರೆಯಿಂದ ಹೆಣ್ಣು ಶಿಶು ಅಪಹರಣ

Nagaraja AB

ಕೋಲಾರ: ಇಲ್ಲಿನ  ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯಿಂದ  ಇಂದು  ಮುಂಜಾನೆ ಹೆಣ್ಣು ಶಿಶುವೊಂದು  ಅಪಹರಣವಾಗಿರುವ ಘಟನೆ ನಡೆದಿದೆ.

ಮುಳಬಾಗಿಲು ತಾಲೂಕಿನ ವಮ್ಮ ಸಂದ್ರ ಗ್ರಾಮದ  ನಾರಾಯಣಸ್ವಾಮಿ ಪತ್ನಿ ವೇಣುಕುಮಾರಿ  ಮಂಗಳವಾರ ಹೆಣ್ಣು ಶಿಶುವಿಗೆ ಜಿಲ್ಲಾಸ್ಪತ್ರೆಯಲ್ಲಿ  ಜನ್ಮ ನೀಡಿದ್ದರು.ಡೆಲಿವರಿ ಬಳಿಕ ಆಕೆಯನ್ನು ಸಾಮಾನ್ಯ ವಾರ್ಡ್ ಗೆ ಸ್ಥಳಾಂತರ ಮಾಡಲಾಗಿದೆ. ಆಗ ಆಕೆ ನಿದ್ರೆಗೆ ಜಾರಿದಾಗ 3 ಗಂಟೆ ಸುಮಾರಿನಲ್ಲಿ ಶಿಶುವನ್ನು ಅಪಹರಣ ಮಾಡಲಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
SCROLL FOR NEXT