ಬೆಂಗಳೂರು: ಸ್ನಾನದ ಮನೆಯಲ್ಲಿ ಟೆಕ್ಕಿ ದಂಪತಿ ಶವ ಪತ್ತೆ 
ರಾಜ್ಯ

ಬೆಂಗಳೂರು: ಸ್ನಾನದ ಮನೆಯಲ್ಲಿ ಟೆಕ್ಕಿ ದಂಪತಿ ಶವ ಪತ್ತೆ

ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಆತನ ಪತ್ನಿ ಫ್ಲ್ಯಾಟ್ ಒಂದರ ಬಾತ್ ರೂಂ ನಲ್ಲಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

ಬೆಂಗಳೂರು: ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಆತನ ಪತ್ನಿ ಫ್ಲ್ಯಾಟ್ ಒಂದರ ಬಾತ್ ರೂಂ ನಲ್ಲಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ಮಹೇಶ್(35) ಮತ್ತು ಶೀಲಾ (30)  ಮೃತ ದಂಪತಿಯಾಗಿದ್ದು ಸ್ನಾನ ಮಾಡುತಿದ್ದಾಗ ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ. ಆದರೆ ಮರಣೋತ್ತರ ಪರೀಕ್ಷೆ ಬಳಿಕವೇ ಸತ್ಯ ಹೊರಬೀಳಲಿದೆ ಎಂದು ಪೋಲೀಸರು ಹೇಳಿದ್ದಾರೆ.
ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಶಿವಗಂಗಾ ಅಪಾರ್ಟ್​ಮೆಂಟ್​ನಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ.ಮಧ್ಯಾಹ್ನ ಸುಮಾರು 2.30ಕ್ಕೆ ದಂಪತಿಯ ಪುತ್ರಿ ಶಾಲೆಯಿಂದ ಮನೆಗೆ ಹಿಂತಿರುಗಿದಾಗ ಘಟನೆ ಬೆಳಕಿಗೆ ಬಂದಿದೆ.
ಮೃತ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಕಿರಿಯ ಮಗು ನೆಲಮಹಡಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಇದ್ದರೆ ಹಿರಿಯ ಮಗು ಶಾಲೆಗೆ ಹೋಗಿದ್ದದ್ದು ಮನೆಗೆ ಮರಳಿದೆ. ಆಗ ಸಂಬಂಧಿಕರು ಮಹೇಶ್ ಹಾಗು ಆತನ ಪತ್ನಿಯನ್ನು ಕರೆದಿದ್ದಾರೆ.ಆದರೆ ದಂಪತಿಗಳಿಂದ ಯಾವ ಪ್ರತಿಕ್ರಿಯೆ ಬರದ ಕಾರಣ ಮೆಟ್ಟಿಲೇರಿ ಬಂದ ಅವರು ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡಿದ್ದು ಕಾಲಿಂಗ್ ಬೆಲ್ ಒತ್ತಿದ್ದಾರೆ. ಆದರೂ ಸಹ ಯಾರೂ ಬಾಗಿಲು ತೆರೆಯದೆ ಹೋದ ಹಿನ್ನೆಲೆಯಲ್ಲಿ ಪೋಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೋಲೀಸರು ಬಾಗಿಲನ್ನು ಒಡೆದು ಒಳ ಪ್ರವೇಶಿಸಿದಾಗ ದಂಪತಿಗಳು ಸ್ನಾನದ ಕೋಣೆಯಲ್ಲಿ ಶವವಾಗಿರುವುದು ಪತ್ತೆಯಾಗಿದೆ.
ಮೂಲತಃ ಬೆಳಗಾವಿಯ ಅಥಣಿ ತಾಲೂಕಿನ ನಿವಾಸಿಯಾದ ಮಹೇಶ್ ಏಳು ವರ್ಷಗಳ ಹಿಂದೆ ಶೀಲಾಳನ್ನು ವಿವಾಹವಾಗಿದ್ದ.ಮಹೇಶ್​ ವೈಟ್​​ಫೀಲ್ಟ್​ ಹತ್ತಿರ ಸಾಫ್ಟ್​ವೇರ್​  ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರೆಂದು ಹೇಳಲಾಗಿದೆ. 
ಇದೀಗ ದಂಪತಿಗಳಿಬ್ಬರೂ ಮೃತಪಟ್ಟ ಕಾರಣ  6 ಮತ್ತು 4 ವರ್ಷದ ಇಬ್ಬರು ಹೆಣ್ಣುಮಕ್ಕಳು ಅನಾಥರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!