ಕಲಬುರಗಿ: 34 ವರ್ಷದ ಈಶ್ವರ್ ಪವಡೆ ಮೃತಪಟ್ಟಿರುವುದಾಗಿ ವೈದ್ಯರೇ ಹೇಳಿದ್ದರಿಂದ ಸಂಬಂಧಿಕರು ಅಂತ್ಯಕ್ರಿಯೆಗಾಗಿ ಆತನನ್ನು ಸ್ಮಶಾನಕ್ಕೆ ಕೊಂಡೊಯ್ದಿದ್ದಾಗ ಅಲ್ಲಿ ಆತ ಕಣ್ಣು ತೆರೆದಿದ್ದು ಅಚ್ಚರಿಗೆ ಕಾರಣವಾಗಿದೆ.
ಮಗನನ್ನು ಕಳೆದುಕೊಂಡ ಸಂಕಷ್ಟದಲ್ಲಿ ಪೋಷಕರು, ಮುತ್ತೈದೆ ತನವನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದ್ದ ಪತ್ನಿಗೆ ಗಂಡ ಸ್ಮಶಾಣದಲ್ಲಿ ಎದ್ದು ಕುಳಿತ್ತಿದ್ದು ಮರುಜೀವ ಕೊಟ್ಟಂತಾಗಿದೆ.
ಕಲಬುರಗಿ ಜಿಲ್ಲೆಯ ಅಫ್ಜಲ್ ಪುರ ತಾಲೂಕಿನ ಘನಗಾಗಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂತ್ಯಕ್ರಿಯೆಗಾಗಿ ಪೂಜಾ ಕೈಂಕರ್ಯಗಳನ್ನು ನಡೆಸುತ್ತಿದ್ದಾಗ ಪವಡೆ ಕಣ್ಮು ಬಿಟ್ಟಿದ್ದು ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಪವಡೆ ಅಂತ್ಯಕ್ರಿಯೆಗಾಗಿ ನೂರಾರು ಸಂಖ್ಯೆಯಲ್ಲಿ ಸಂಬಂಧಿಕರು ಆಗಮಿಸಿದ್ದರು. ಇನ್ನು ಸತ್ತ ವ್ಯಕ್ತಿ ಎದ್ದು ಕೂತ್ತಿದ್ದು ಸಂಬಂಧಿಕರಲ್ಲಿ ಹರ್ಷ ತಂದಿದೆ.
ಹಲವು ವರ್ಷಗಳಿಂದ ಮುಂಬೈನಲ್ಲಿ ವಾಸವಾಗಿದ್ದ ಈಶ್ವರ್ ಪವಡೆ ದಂಪತಿ ಅನಾರೋಗ್ಯ ಸಂಬಂಧ ಗ್ರಾಮಕ್ಕೆ ಆಗಮಿಸಿದ್ದರು. ಅವರನ್ನು ಮಹಾರಾಷ್ಟ್ರದ ಸೋಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಬೆಳಗ್ಗೆ ಈಶ್ವರ್ ಮೃತಪಟ್ಟಿದ್ದಾಗಿ ವೈದ್ಯರು ಹೇಳಿದ್ದರಿಂದ ಪವಡೆ ಅಂತ್ಯಕ್ರಿಯೆಗಾಗಿ ಸಂಬಂಧಿಕರು ಸಕಲ ಸಿದ್ದತೆ ಮಾಡಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics