ರಾಜ್ಯ

ಖಾಲಿಯಿದ್ದ ಐಎಎಸ್ ಅಧಿಕಾರಿ ಎಲ್.ಕೆ. ಅತೀಖ್ ಗೆ ಕೊನೆಗೂ ಸಿಕ್ತು ಪೋಸ್ಟಿಂಗ್

Shilpa D
ಬೆಂಗಳೂರು: ಸಮ್ಮಿಶ್ರ ಸರಕಾರದ ಬಜೆಟ್ ಅಧಿವೇಶನದ ನಂತಕ ಆಡಳಿತಕ್ಕೆ ಮೇಜರ್‌ ಸರ್ಜರಿ ಮಾಡಲಾಗಿದೆ. ಪ್ರಮುಖ ಇಲಾಖೆಗಳ ಮುಖ್ಯಸ್ಥ ಹುದ್ದೆಗಳನ್ನು ಬದಲಾವಣೆ ಮಾಡಲಾಗಿದ್ದು, ಒಟ್ಟು 20 ಮಂದಿ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. 
ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ 1991ನೆ ಬ್ಯಾಚಿನ ಐಎಎಸ್ ಅಧಿಕಾರಿ ಎಲ್ ,ಎ ಅತೀಖ್ ಅವರಿಗೆ ರಾಜ್ಯ ಸರ್ಕಾರ ಕೊನೆಗೂ ಪೋಸ್ಟಿಂಗ್ ನೀಡಿದೆ.
2016 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತೀಕ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು. ಅದಾದ ನಂತರ ಯಡಿಯೂರಪ್ಪ ಅತೀಕ್ ಅವರನ್ನು  ಕಾರ್ಯದರ್ಶಿ ಹುದ್ದೆಯಿಂದ ಎತ್ತಂಗಡಿ ಮಾಡಿದ್ದರು.  ಬಳಿಕ ಖಾಲಿ ಇದ್ದ ಅತೀಕ್‌ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ವರ್ಗಾಯಿಸಲಾಗಿದೆ. 
ವಿಪಿ ಇಕ್ಕೇರಿ ಅವರನ್ನು ಸಾರಿಗೆ ಇಲಾಖೆ ಆಯುಕ್ತ ಹುದ್ದೆಗೆ ನೇಮಕ ಮಾಡಲಾಗಿದ್ದು, ಪಂಕಜ್‌ ಕುಮಾರ್‌ ಪಾಂಡೆ ಅವರಿಗೆ ಮೂರು ಪ್ರಮುಖ ಹುದ್ದೆಗಳ ಜವಾಬ್ದಾರಿ ವಹಿಸಲಾಗಿದೆ. ಡಾ.ಜಾಫರ್‌ ಅವರನ್ನು ಮತ್ತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾಗಿ ನೇಮಕ ಮಾಡಲಾಗಿದೆ.
SCROLL FOR NEXT