ಸಾಂದರ್ಭಿಕ ಚಿತ್ರ 
ರಾಜ್ಯ

ಇಷ್ಟು ವರ್ಷ ರೈತರಿಗೆ ಬರಗಾಲದ ಚಿಂತೆಯಾಗಿದ್ದರೆ, ಈ ವರ್ಷ ಪ್ರವಾಹದ ಭೀತಿ

ಕಳೆದ ಮೂರು ವರ್ಷಗಳಿಂದ ಸತತ ಬರಗಾಲದಿಂದ ಬೆಳೆನಷ್ಟ ಅನುಭವಿಸಿದ್ದ ರಾಜ್ಯದ ರೈತರು ಈ ವರ್ಷ ...

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಸತತ ಬರಗಾಲದಿಂದ ಬೆಳೆನಷ್ಟ ಅನುಭವಿಸಿದ್ದ ರಾಜ್ಯದ ರೈತರು ಈ ವರ್ಷ ಪ್ರವಾಹದಿಂದ  ಬೆಳೆ ನಷ್ಟ ಎದುರಿಸುವ ಭೀತಿಯಲ್ಲಿದ್ದಾರೆ. ಜಲಾಶಯಗಳಲ್ಲಿ ನೀರು ಭರ್ತಿಯಾಗುತ್ತಿದ್ದರೂ ಕೂಡ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದರಿಂದ ಮಲೆನಾಡು ಮತ್ತು ಬಯಲುಸೀಮೆಗಳ ರೈತರು ಬೆಳೆನಷ್ಟವನ್ನು ಎದುರಿಸುವ ಆತಂಕ ಎದುರಿಸುತ್ತಿದ್ದಾರೆ.

ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಕೃಷಿ ತಜ್ಞ ಬಿ ಸಿ ನಂಜಪ್ಪ, ದಕ್ಷಿಣ ಒಳನಾಡಿನಲ್ಲಿ ಅನಿರೀಕ್ಷಿತ ಮಳೆ ಮೆಕ್ಕೆಜೋಳ ಮತ್ತು ಇತರ ಬೇಸಿಗೆಯ ಬೆಳೆಗಳ ಮೇಲೆ ಪರಿಣಾಮ ಬೀರಿದೆ. ಭತ್ತ ಹೊರತುಪಡಿಸಿ ಬೇರೆ ಎಲ್ಲಾ ಬೆಳೆಗಳ ಮೇಲೆ ಅಧಿಕ ಮಳೆ ಪರಿಣಾಮ ಬೀರಿದೆ.

ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತೋಟದ ಬೆಳೆಗಳು ತೀವ್ರ ಹಾನಿಗೀಡಾಗಿವೆ. ಇದೇ ಪ್ರಮಾಣದಲ್ಲಿ ಇನ್ನು ಕೆಲ ದಿನಗಳವರೆಗೆ ಮಳೆ ಮುಂದುವರಿದರೆ ಕಾಫಿ ಬೀಜಗಳು ಕೊಳೆತು ಹೋಗುವ ಸಾಧ್ಯತೆಯಿದೆ. ಕಾಳುಮೆಣಸು ಮತ್ತು ಇತರ ವಾಣಿಜ್ಯ ಬೆಳೆಗಳಿಗೂ ಅಧಿಕ ಮಳೆಯಿಂದ ತೊಂದರೆಯಾಗಿದೆ. ಈ ಬಾರಿ ಶುಂಠಿಯ ಬೆಲೆ ಏರಿಕೆಯಾಗಬಹುದೆಂದು ಖುಷಿಯಲ್ಲಿದ್ದ ಶುಂಠಿ ಬೆಳೆಗಾರರು ಸತತ ಮಳೆಯಿಂದಾಗಿ ಆ ಬೆಳೆ ಕೂಡ ಕೊಚ್ಚಿ ಹೋಗುವ ನಾಶವಾಗುವ ಸಾಧ್ಯತೆಯಿದೆ.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರಾಜ್ಯದ ದಕ್ಷಿಣ ಭಾಗದಲ್ಲಿ ಅಧಿಕ ಮಳೆ ಬಿದ್ದರೂ ಸಹ ಇಡೀ ರಾಜ್ಯದಲ್ಲಿ ಒಟ್ಟಾರೆ ಮಳೆಯ ಪ್ರಮಾಣ ನಿಗದಿತವಾಗಿಲ್ಲ, ಉತ್ತರ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಿದೆ. ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಮೊದಲಾದ ಜಿಲ್ಲೆಗಳಲ್ಲಿ ನಿಗದಿತ ಸಮಯಕ್ಕೆ ನಿರ್ದಿಷ್ಟ ಪ್ರಮಾಣದಲ್ಲಿ ಮಳೆಯಾಗದಿದ್ದರೆ ರೈತರು ಬೆಳೆ ನಷ್ಟವನ್ನು ಎದುರಿಸಬೇಕಾಗಬಹುದು ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್