ಸುಪ್ರೀಂ ಸೂಚನೆಯವರೆಗೆ ಎಲ್ಲಾ ಭಡ್ತಿಗಳನ್ನು ತಡೆಯಲು ರಾಜ್ಯ ಸರ್ಕಾರ ತೀರ್ಮಾನ 
ರಾಜ್ಯ

ಸುಪ್ರೀಂ ಸೂಚನೆಯವರೆಗೆ ಎಲ್ಲಾ ಭಡ್ತಿಗಳನ್ನು ತಡೆಯಲು ರಾಜ್ಯ ಸರ್ಕಾರ ತೀರ್ಮಾನ

ಸುಪ್ರೀಂ ಕೋರ್ಟ್ ನ ಸ್ಪಷ್ಟನೆ ದೊರಕುವವರೆಗೆ ಎಲ್ಲ ಪ್ರಕಾರದ ಭಡ್ತಿಗಲನ್ನು ತಡೆಹಿಡಿಯುವುದಾಗಿ ಕರ್ನಾಟಕ ಸರ್ಕಾರ ಹೇಳಿದೆ.

ಬೆಂಗಳೂರು: ಸುಪ್ರೀಂ ಕೋರ್ಟ್ ನ ಸ್ಪಷ್ಟನೆ ದೊರಕುವವರೆಗೆ ಎಲ್ಲ ಪ್ರಕಾರದ ಭಡ್ತಿಗಲನ್ನು ತಡೆಹಿಡಿಯುವುದಾಗಿ ಕರ್ನಾಟಕ ಸರ್ಕಾರ ಹೇಳಿದೆ. ಭಡ್ತಿಗಳಲ್ಲಿ ಪರಿಣಾಮಕಾರಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.
ಇದೇ 27ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ.ಹಿರಿತನದ ಆಧಾರದ ಮೇಲೆ ರಾಜ್ಯ ಸರ್ಕಾರಿ ನೌಕರರ ಭಡ್ತಿ ಕಾಯ್ದೆ 2017ರ ಅನುಷ್ಠಾನದ ವಿಳಂಬದ ಕುರಿತಂತೆ ಬಿಜೆಪಿ ಶಾಸಕ ಪಿ. ರಾಜೀವ್ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ  ಕೃಷ್ಣ ಬೈರೆಗೌಡ ಉತ್ತರಿಸಿದ್ದಾರೆ.
ಕಳೆದ ತಿಂಗಳು ರಾಷ್ಟ್ರಪತಿ ರಾಮನಾಥ್ ಅಕೋವಿಂದ್ ಮಸೂದೆಗೆ ಅನುಮತಿ ನೀಡಿದ್ದರು.
ವಿಧಾನಸಭೆಯಲ್ಲಿ ಈ ವಿಚಾರವನ್ನು ಎತ್ತಿಕೊಳ್ಳುವ ಮೂಲಕ ರಾಜೀವ್ ಅವರು ಸರ್ಕಾರದಿಂದ ವಿಳಂಬ ಧೋರಣೆಗೆ ಕಾರಣ ತಿಳಿಯಲು ಯತ್ನಿಸಿದ್ದಾರೆ."ಸಂಸತ್ತಿನ ಎರಡೂ ಸದನಗಳು ಮಸೂದೆಗೆ ಅನುಮತಿಸಿದೆ, ರಾಷ್ಟ್ರಪತಿಗಳು ಸಹ ಸಹಿ ಮಾಡಿದ್ದಾರೆ ಆದರೂ ಮಸೂದೆ ಜಾರಿಯಾಗಿಲ್ಲವೇಕೆ" ಅವರು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ ಕೃಷ್ಣ ಭೈರೇಗೌಡ ಸರ್ಕಾರವು ಮಸೂದೆ ಅನುಷ್ಠಾನಗೊಳಿಸುವ ಬಗ್ಗೆ ಹಿಂಜರಿಯುತ್ತಿಲ್ಲ.ಹಾಗೆಯೇ ಮಸೂದೆ ವಾಪಸಾತಿ ಪ್ರಶ್ನೆ ಇಲ್ಲ. ಆದರೆ ಸದ್ಯ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ.ಪ್ರಕರಣದ ಫಲಿತಾಂಶದ ಮೇಲೆ ಸರ್ಕಾರದ ಕ್ರಮ ಜರುಗಬೇಕೆಂದು ಅಡ್ವೊಕೇಟ್ ಜನರಲ್ ಅಭಿಪ್ರಾಯಪಟ್ಟಿದ್ದಾರೆ ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ವಿಧಾನಸಭೆಪ್ರತಿಪಕ್ಷದ ಉಪಾಧ್ಯಕ್ಷ ಗೋವಿಂದ ಕಾರಜೋಳ ಡಿಪಿಸಿ(ಡಿಪಾರ್ಟ್ಮೆಂಟ್ ಪ್ರೋಮೋಷನ್ ಕಮಿಟಿಗಳು) ಗಳ ಮೂಲಕ ನಿಗದಿತ ಸಮಯದವರೆಗೆ ಭಡ್ತಿ ನೀಡಲ್ಪಟ್ಟ ಅನೇಕ ಪ್ರಕರಣಗಳು ಇದೆ ಎಂದರು."ಇದಕ್ಕಾಗಿ ನೀವು ಏನು ಮಾಡುತ್ತೀರಿ? ಈಗ ಈ ಭಡ್ತಿಗಳಿಂದ ಎಸ್ಸಿ / ಎಸ್ಟಿ ಅವರುಗಳಿಗೆ ಏನು ಲಾಭವಾಗಲಿದೆ" ಎಂದಾಗ ಸಮಾಜ ಕಲ್ಯಾಣ ಸಚಿವ ಪ್ರಿಯಾಂ ಖರ್ಗೆ ಕಾಯ್ದೆ ಯಲ್ಲಿ ಎಲ್ಲವೂ ಅಡಕವಾಗಿದೆ ಎಂದರು.
ಈ ವೇಳೆ ಸಭಾಧ್ಯಕ್ಷ ರಮೇಶ್ ಕುಮಾರ್ ಮಾತನಾಡಿ ಸರ್ಕಾರ ಕಾಯ್ದೆ ಅನುಷ್ಠಾನ ಕುರಿತಂತೆ ಜುಲೈ 27ನ್ನು ಅಂತಿಮ ಗಡುವಾಗಿಸಿಕೊಳ್ಳಬೇಕು. ಹಾಗೊಂದು ವೇಳೆ ಕೋರ್ಟ್ ನಿಂದ ಯಾವ ಸೂಚನೆ ಬರದೆ ಹೋದಲ್ಲಿ ಕಾಯ್ದೆ ಅನುಷ್ಠಾನವಾಗಲಿ ಎಂದು ಸಲಹೆ ನಿಡಿದರು.
ಸುಪ್ರೀಂ ಕೋರ್ಟ್ ವಿಚಾರಣೆಯ ಫಲಿತಾಂಶದ ತನಕ ಯಾವ ಮುಂಭಡ್ತಿಯನ್ನು  ಮಾಡಲಾಗುವುದಿಲ್ಲ ಎಂದು ಸಚಿವ ಭೈರೇಗೌಡ ಪುನರುಚ್ಚರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT