ರಾಜ್ಯ

ಪೊಲೀಸ್ ವಸತಿ ನಿರ್ಮಾಣ ಯೋಜನೆಗೆ ಇನ್ಫೋಸಿಸ್ ನೆರವು -ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್

Nagaraja AB

ಬೆಂಗಳೂರು: ರಾಜ್ಯದ ಪೊಲೀಸ್ ಸಿಬ್ಬಂದಿಗೆ ವಸತಿ ನಿರ್ಮಾಣ, ಹೊಸ ಪೊಲೀಸ್ ಕಟ್ಟಡಗಳ ನಿರ್ಮಾಣಕ್ಕೆ ಇನ್ಫೋಸಿಸ್ ಪ್ರತಿಷ್ಠಾನ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

 ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವತಿಯಿಂದ  ಪೊಲೀಸರಿಗೆ 11 ಸಾವಿರ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ 7 ಸಾವಿರ ಮನೆಗಳನ್ನು ಪೂರ್ಣಗೊಂಡಿವೆ. ಪೊಲೀಸರಿಗೆ ಸೂಕ್ತ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರದ  ಜೊತೆಗೆ ಕಾರ್ಪೋರೇಟ್  ಕಂಪನಿಗಳು ಜತೆಯಾದರೆ ಉತ್ತಮ ಸೌಲಭ್ಯ ಒದಗಿಸಿಕೊಡಬಹುದು ಎಂದರು.

 ಪೊಲೀಸರಿಗೆ ಮನೆ ಕಟ್ಟಿ ಕೊಡಲು ನಾವು ಸಿದ್ದರಿದ್ದೇವೆ. ಜಾಗ ಕೊಡಿ ಎಂದು ಸುಧಾಮೂರ್ತಿ ಹೇಳಿದ್ದಾರೆ. ಹಾಗೆಯೇ ಹೊಸ ಪೊಲೀಸ್ ಠಾಣಾ ಕಟ್ಟಡ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ. ಜಾಗದ ವ್ಯವಸ್ಥೆಯನ್ನು ಸರ್ಕಾರ ಮಾಡಲಿದೆ ಎಂದು ಅವರು  ತಿಳಿಸಿದರು.

ಕೊನೆನಾ ಅಗ್ರಹಾರದಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಇನ್ಪೋಸಿಸ್ ಪ್ರತಿಷ್ಠಾನ  ನೆರವು ನೀಡುತ್ತಿದೆ. ಈ ಸಂಬಂಧ  ಇದೇ ತಿಂಗಳ 19 ರಂದು ಮೆಟ್ರೋ ಜತೆ ಒಡಂಬಡಿಕೆಗೆ ಸಹಿ ಹಾಕಲಾಗುತ್ತದೆ. ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲು ಸುಧಾಮೂರ್ತಿ ಬಂದಿದ್ದರು ಎಂದು ಪರಮೇಶ್ವರ್  ಹೇಳಿದರು.

SCROLL FOR NEXT