ರಾಜ್ಯ

ಚಿಕ್ಕಮಗಳೂರು: ಪ್ರಾಣಿ-ಪಕ್ಷಿಗಳನ್ನು ಬೆಳೆಗಳಿಂದ ದೂರವಿರಿಸಿದೆ ಮೋದಿ, ಅಮಿತ್ ಶಾ ಕಟೌಟ್ಸ್!

Shilpa D
ಚಿಕ್ಕಮಗಳೂರು: ತಮ್ಮ ತೋಟದ ಬೆಳೆಗಳನ್ನು ಪ್ರಾಣಿ ಮತ್ತು ಪಕ್ಷಿಗಳಿಂದ ರಕ್ಷಿಸಲು ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಗ್ರಾಮದ ರೈತರು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಚ್ರಾಧ್ಯಕ್ಷ ಅಮಿತ್ ಶಾ ಅವರ ಕಟೌಟ್ ಗಳನ್ನು ಬಳಸಿಕೊಂಡಿದ್ದಾರೆ.
ಕಳೆದ ವಿಧಾನ ಸಭೆ ಚುನಾವಣೆ ಪ್ರಚಾರದ ವೇಳೆ ಪಬ್ಲಿಸಿಟಿಗಾಗಿ ಬಳಸಲಾಗಿದ್ದ ಕಟೌಟ್ ಗಳನ್ನು  ಲಕ್ಕವಳ್ಳಿ ರೈತರು ತಮ್ಮ, ಹೊಲದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಇಟ್ಚಿದ್ದಾರೆ, ಈ ದೊಡ್ಡ ದೊಡ್ಡ ಕಟೌಟ್ ಗಳು ಕೀಟಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತಿವೆ
ಕಾಡುಪ್ರಾಣಿಗಳು ಮತ್ತು ಪಕ್ಷಿಗಳು ನಮ್ಮ ಹೊಲಕ್ಕೆ ಬಂದು ಬೆಳೆಗಳನ್ನು ನಾಶ ಮಾಡುತ್ತಿದ್ದವು. ಮನುಷ್ಯರಂತಿರುವ ಕಟೌಟ್ ಗಳು ನಮ್ಮ ಬೆಳೆಗಳನ್ನು ರಕ್ಷಿಸುತ್ತಿವೆ, ಜೊತೆಗೆ ಬಂಟಿಂಗ್ಸ್ ಹೋರ್ಡಿಂಗ್, ಫ್ಲೆಕ್ಸ್ ಮತ್ತು ಬ್ಯಾನರ್ ಇವುಗಳನ್ನೆಲ್ಲಾ  ರ್ಯಾಲಿ ನಂತರ ಬಿಸಾಡಲಾಗಿತ್ತು,
ಅವುಗಳನ್ನು ನಾವು ಕಾರ್ಪೆಟ್ ರೀತಿ ಬಳಸಿಕೊಂಡು ಆಹಾರ ಧಾನ್ಯ ಹಾಕುತ್ತೇವೆ, ನಮ್ಮ ತೋಟಗಳಿಗೆ ಬೇಲಿಯ ರೀತಿ, ಬಾತ್ ರೂಂ ಮತ್ತು ಟಾಯ್ಲೆಟ್ ಗಳಿಗೆ ಗೋಡೆಗಳ ರೀತಿ ಬಳಸಿಕೊಳ್ಳುತ್ತೇವೆ, ಜೊತೆಗೆ, ಕಲರ್ ಫುಲ್ ಬ್ಲಂಟಿಂಗ್ ಗಳನ್ನು ನಮ್ಮ ತೋಟದ ಸುತ್ತಮುತ್ತ  ಅಂಟಿಸಿ ಪಕ್ಷಿಗಳನ್ನ ಎದುರಿಸಲು ಬಳಸಲಾಗುತ್ತದೆ ಎಂದು ಅಲ್ಲಿನ ರೈತರೊಬ್ಬರು ತಿಳಿಸಿದ್ದಾರೆ
SCROLL FOR NEXT