ರಾಜ್ಯ

ಶಿವಮೊಗ್ಗದ ಆದಿವಾಸಿ ಜನಾಂಗಕ್ಕೆ ಉಚಿತ ಪೌಷ್ಠಿಕ ಆಹಾರ!

Shilpa D
ಬೆಂಗಳೂರು:  ರಾಜ್ಯ ಸರ್ಕಾರದ ಆದಿವಾಸಿಗಾಗಿ ಪೌಷ್ಟಿಕ ಆಹಾರ ಕಾರ್ಯಕ್ರಮ ಸತತ 10ನೇ ವರ್ಷ ತಲುಪಿದ್ದು, ಈ ವಾರ್ಷಿಕೋತ್ಸವದ ಅಂಗವಾಗಿ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮವನ್ನು  ಶಿವಮೊಗ್ಗ ಜಿಲ್ಲೆಗೂ ವಿಸ್ತರಿಸಲಾಗಿದೆ, 
ಶಿವಮೊಗ್ಗ ಜಿಲ್ಲೆಯ ಹಸಲಾರು ಮತ್ತು ಗೂಡುಲನಲ್ಲಿರುವ ಎಸ್ ಟಿ ಪಂಗಡದ ಸುಮಾರು 2,500 ಕುಟುಂಬಗಳು  ಇದರ ಲಾಭ ಪಡೆಯಲಿವೆ ಎಂದು ಎಸ್ ಟಿ ಕಲ್ಯಾಣ ಇಲಾಖೆಯ ನಿರ್ದೇಶಕ ಕೆ, ರೇವಣ್ಣಪ್ಪ ತಿಳಿಸಿದ್ದಾರೆ.
2008 ರಲ್ಲಿ ಆರಂಭವಾದ ಈ ಕಾರ್ಯಕ್ರಮ ಮೈಸೂರು,  ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಲ್ಲಿನ ಆದಿವಾಸಿಗಳಿಗೆ ಪೌಷ್ಠಿಕ ಆಹಾರ ನೀಡುತ್ತಾ ಬಂದಿದೆ.
ಜೇನು ಕುರುಬ, ಕಾಡು ಕುರುಬರು, ಸೋಲಿಗರು, ಯೆರವರು, ಮಲೆಕುಡಿಯರು, ಸಿದ್ದಿ, ಹಲಸಾರು ಮತ್ತು ಗೌಡಲು ಪಂಗಡದ 41,070  ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.  ಈ ಆರ್ಥಿಕ ವರ್ಷದಲ್ಲಿ ಈ ಯೋಜನೆದಗಾಗಿ ಸುಮಾರು 60 ಕೋಟಿ ರು ಹಣ ವೆಚ್ಚ ಮಾಡಲಾಗುತ್ತದೆ ಎಂದು ಸೂಪರಿಂಡೆಂಟ್ ಎಂ.ನಾರಾಯಣ ಸ್ವಾಮಿ ತಿಳಿಸಿದ್ದಾರೆ,  ಆದಿವಾಸಿ ಕುಟುಂಬದ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ  2005 -06 ರಲ್ಲಿ ವರದಿ ನೀಡಿತ್ತು.  ಅದಾದ ನಂತರ 208 ರಲ್ಲಿ ಕಾರ್ಯಕ್ರಮ ಜಾರಿ ಮಾಡಲಾಗಿದೆ, 
ಆರಂಭದಲ್ಲಿ ಜೇನು ಕುರುಬ ಮತ್ತು ಕೊರಗ ಸಮುದಾಯಗಳಗೆ ಈ ಸೌಲಭ್ಯ ಒದಗಿಸಲಾಗಿತ್ತು, ನಂತರ 8 ಪಂಗಡಗಳಿಗೆ ವಿಸ್ತರಿಸಲಾಗಿದೆ, ಈ ಪೌಷ್ಠಿಕಾಂಶಯುತ ಆಹಾರದಲ್ಲಿ 15 ಕೆಜಿ ಅಕ್ಕಿ, 5 ಕೆಜಿ ತೊಗರಿ ಬೇಳೆ, 2 ಲೀಟರ್ ರಿಫೈನ್ಡ್ ಆಯಿಲ್, ನಾಲ್ಕು ಕೆಜಿ ಸಕ್ಕರೆ/ಬೆಲ್ಲ, 45 ಮೊಟ್ಟೆ, 1 ಕೆಜಿ ತುಪ್ಪವನ್ನು ಅಂಗನವಾಡಿ ಮೂಲಕ ಬುಡಕಟ್ಟು ಕುಟುಂಬಕ್ಕೆ ನೀಡಲಾಗುತ್ತದೆ, ಜೂನ್ ನಿಂದ ಮೂಂದಿನ ಆರು ತಿಂಗಳ ಕಾಲ ವಿತರಿಸಲಾಗುತ್ತದೆ. ಲೋಕಾಯುಕ್ತ ಶಿಫಾರಸ್ಸಿನ ಮೇರೆಗೆ ಪೌಷ್ಟಿಕಾಂಶ ಮೆನುವಿನಲ್ಲಿ ತುಪ್ಪ ಸೇರಿಸಲಾಗಿದೆ.
SCROLL FOR NEXT