ರಾಜ್ಯ

ಉಕ್ಕಿ ಹರಿಯುತ್ತಿರುವ ನದಿಗಳು: ಪ್ರಮುಖ ನದಿಗಳ ಜಲಾನಯನ ಪ್ರದೇಶ ಈಗ ಅಪಾಯ ವಲಯ

Shilpa D
ಬೆಂಗಳೂರು: ಪ್ರಮುಖ ನದಿಗಳಾದ ಕಾವೇರಿ, ತುಂಗಾ, ಭದ್ರಾ ಹರಿಯುವ ಜಲಾನಯನ ಪ್ರದೇಶಗಳಾದ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಪರಿಸರ  ತಜ್ಞರು ತಿಳಿಸಿದ್ದಾರೆ.
ಪಶ್ಚಿಮ ಘಟ್ಟಗಳನ್ನು ನಾಶಮಾಡುವ ಮೂಲಕ ಬೆಂಗಳೂರಿಗೆ ನೀರು ತರುವುದು, ದೀರ್ಘಾವದಿಯಲ್ಲಿ ಕಷ್ಟ ಸಾಧ್ಯ, ಹೀಗಾದಗಿ ಬೇರೆ ವಿಧಾನದಲ್ಲಿ ಬೆಂಗಳೂರಿಗೆ ನೀರು ಹರಿಸಲು ಪರಿಣಿತರ ಸಲಹೆ ಪಡೆಯುವಂತೆ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ಸಲಹೆ ನೀಡಲಾಗಿದೆ.
ತುರ್ತು ಪರಿಸರ ಅಧ್ಯಯನದ ಅವಶ್ಯಕತೆಯಿದೆ, ಅರಣ್ಯ ನಾಶ,  ಭೂಮಿಯನ್ನು ಪರಿವರ್ತಿಸುವುದು, ಇದರಿಂದಾಗಿ ಒಳಹರಿವು ಮತ್ತು ಹೊರ ಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ  ತಡ ಮಾಡದೇ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಗಳ ಸಲಹೆ ಪಡೆದು, ಕೆಲಸ ನಿರ್ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶದಲ್ಲಿ ಅರಣ್ಯದ ಭೂಮಿಯನ್ನು ಕಾಫಿ,  ಭತ್ತದ ಬೆಳೆಗಳಿಗೆ ಪರಿವರ್ತಿಸುವ ಸಂಬಂಧ ಯಾವುದೇ ನೀತಿನಿಯಮಗಳಿಲ್ಲ, ವಿದ್ಯುಚ್ಛಕ್ತಿ ಹಾಗೂ ಬಹುಪಥ ಹೆದ್ದಾರಿ ನಿರ್ಮಾಣಕ್ಕಾಗಿ ಸುಮಾರು 60 ಸಾವಿರ ಮರಗಳನ್ನು ತೆರವುಗೊಳಿಸಲಾಗಿದೆ, 
ಎತ್ತಿನಹೊಳೆ ಮತ್ತು ತುಂಗಾ ಏತ ನೀರಾವರಿ ಪದ್ಧತಿಗಳು ಅತಿ ದೊಡ್ಡ ಬ್ಲಂಡರ್ ಗಳು ಎಂದು ಆರೋಪಿಸಿದ್ದಾರೆ, ಇದರಿಂದ ಸಾವಿರಾರು ಮರಗಳು ನೆಲಸಮವಾಗುತ್ತವೆ ಎಂದು ಸಹದೇವ ಶಿವಪುರ ಪಶ್ಚಿಮ ಘಟ್ಟ ಜಾಗೃತಿ ವೇದಿಕೆ ಆರೋಪಿಸಿದೆ.
SCROLL FOR NEXT