ರಾಜ್ಯ

ಸಾಗರದಲ್ಲಿ ಪಂಜಾಬ್ ಮಹಿಳೆ, ಕುಟುಂಬ ಪತ್ತೆ ಹಚ್ಚುವ ಪ್ರಯತ್ನದಲ್ಲಿ ಪೊಲೀಸರು

Nagaraja AB
ಶಿವಮೊಗ್ಗ: ಪಂಜಾಬ್ ಮಹಿಳೆಯೊಬ್ಬರು 19  ತಿಂಗಳುಗಳಿಂದ  ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿದ್ದಾರೆ. ಆಕೆ ತನ್ನ ಸ್ವಂತ ಊರು ಹಾಗೂ ಕುಟುಂಬದ ಬಗ್ಗೆ ನನಪಿನ ಶಕ್ತಿಯನ್ನು ಕಳೆದುಕೊಂಡಿದ್ದು,  ಅವರ ಕುಟುಂಬವನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಪೊಲೀಸರು ಮುಂದುವರೆಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಬೀದಿಗಳಲ್ಲಿ   2016 ಡಿಸೆಂಬರ್ 16 ರಂದು ಬಿಲ್ವೇಂದರ್ ಕೌರ್ ಕಾಣಿಸಿಕೊಂಡಿದ್ದಾರೆ. ಆಕೆಯನ್ನು ಜನ ಜೀವನ ಜಾಗೃತಿ ವೇದಿಕೆ ಅಧ್ಯಕ್ಷರು ರಕ್ಷಿಸಿದ್ದು,  ಮುಖ್ಯ ನಾಗರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದು,ಪರಿಹಾರ ಕೇಂದ್ರದಲ್ಲಿ ಇರಿಸಲಾಗಿದೆ.
ಪತಿ ಸುಕ್ವಿಂದರ್  ಸಿಂಗ್ , ಅಂಗಡಿಯೊಂದನ್ನು ಇಟ್ಟುಕೊಂಡಿದ್ದು, ಮಗ ಮಾಂಜಿತ್ ಸಿಂಗ್ ಮತ್ತು ಮಗಳು ಜಾನ್ ಪ್ರೀತ್ ಕೌರ್ ಎಂದು ಮಧ್ಯವಯಸ್ಸಿನ  ಬಿಲ್ವೇಂದರ್  ಕೌರ್    ಅಪೂರ್ಣ ಮಾಹಿತಿ ನೀಡಿದ್ದು, ಸ್ಥಳೀಯ ವ್ಯಾಪಾರಿ ಧರ್ಮೇಂದ್ರ ಸಿಂಗ್  ನೆರವಿನೊಂದಿಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.
ಪಾಟಿಯಾಲದಿಂದ ಸಾಗರಕ್ಕೆ ಆಗಮಿಸಿದ್ದು, ಪಂಜಾಬ್ ನಲ್ಲಿನ ಸನೌರ್ ನಲ್ಲಿ 8 ನೇ ತರಗತಿವರೆಗೂ ವ್ಯಾಸಂಗ  ಮಾಡಿದ್ದು, ತನ್ನ  ಸಹೋದರ ಗುರ್ಮೆಜ್ ಸಿಂಗ್  ಸನೌರ್ ನಲ್ಲಿ ವಾಸಿಸುತ್ತಿರುವುದಾಗಿ ಆ ಮಹಿಳೆ ತಿಳಿಸಿದ್ದಾರೆ.
SCROLL FOR NEXT