ಬೆಂಕಿಯಿಂದ ಸುಟ್ಟುಹೋದ ಉಪಕರಣ 
ರಾಜ್ಯ

ಬಳ್ಳಾರಿ: ಪಾನಮತ್ತ ಎಸ್ಐ ಮತ್ತು ಪ್ರೇಯಸಿಯಿಂದ ಪೊಲೀಸರ ಅತಿಥಿ ಗೃಹಕ್ಕೆ ಬೆಂಕಿ

ಜಿಲ್ಲಾ ಸೇನಾ ಮೀಸಲು ಪೊಲೀಸ್ ಕೇಂದ್ರ ಕಚೇರಿ ಆವರಣದಲ್ಲಿ ಅಗ್ನಿ ಅವಘಡವುಂಟಾಗಿ ಅದೇ ಕಚೇರಿಯ ...

ಬಳ್ಳಾರಿ: ಜಿಲ್ಲಾ ಸೇನಾ ಮೀಸಲು ಪೊಲೀಸ್ ಕೇಂದ್ರ ಕಚೇರಿ ಆವರಣದಲ್ಲಿ ಅಗ್ನಿ ಅವಘಡವುಂಟಾಗಿ ಅದೇ ಕಚೇರಿಯ ಪೊಲೀಸರನ್ನು ಮುಜುಗರಕ್ಕೀಡುಮಾಡಿದ ಪ್ರಸಂಗ ನಡೆದಿದೆ.

ಮೊನ್ನೆ ಬುಧವಾರ ಸಂಜೆ ಜಿಲ್ಲಾ ಸೇನಾ ಮೀಸಲು ಕಚೇರಿ ಆವರಣದಲ್ಲಿ ಬೆಂಕಿ ಅವಘಡ ಉಂಟಾಯಿತು. ಅಗ್ನಿಶಾಮಕ ದಳವನ್ನು ಬರಲು ಹೇಳಬೇಕಾಗಿತ್ತು. ಅಗ್ನಿ ಅವಘಡದಿಂದ ಸಾರ್ವಜನಿಕ ಆಸ್ತಿಪಾಸ್ತಿ ನಾಶದಿಂದ ಅಲ್ಲಿನ ಅಧಿಕಾರಿಗಳ  ಮಧ್ಯೆ ಕಲಹವೇರ್ಪಟ್ಟಿತ್ತು. ಅಷ್ಟಕ್ಕೂ ಬೆಂಕಿ ಹತ್ತಿ ಉರಿಯಲು ಕಾರಣ ಅದೇ ಕಚೇರಿಯ ಸಬ್ ಇನ್ಸ್ ಪೆಕ್ಟರ್ ಮಹಿಳೆಯೊಂದಿಗೆ ಹೊಂದಿದ್ದ ಅಕ್ರಮ ಸಂಬಂಧ.

ಈ ಮಹಿಳೆ ಕಾನ್ಸ್ಟೇಬಲ್ ವೊಬ್ಬರ ಪತ್ನಿ. ಸಬ್ ಇನ್ಸ್ ಪೆಕ್ಟರ್ ಮತ್ತು ಮಹಿಳೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು. ಇಬ್ಬರ ಮಧ್ಯೆ ಆ ದಿನ ಜಗಳವಾಗಿ ಅಲ್ಲಿ ಬೆಂಕಿ ಹತ್ತಿ ಉರಿದಿದೆ. ಸರ್ದಾರ್, ಮೀಸಲು ಪಡೆ ಕಚೇರಿಯ ಅಧಿಕಾರಿಯ ದೂರಿನ ಮೇರೆಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೊಲೀಸ್ ಕಚೇರಿಯ ಅತಿಥಿ ಗೃಹದಲ್ಲಿ ಇವರಿಬ್ಬರು ಜಗಳ ಮಾಡುತ್ತಿರುವುದು ಇದು ಮೊದಲ ಸಲವೇನಲ್ಲ. ಹಲವು ಸಂದರ್ಭಗಳಲ್ಲಿ ಬಹಿರಂಗವಾಗಿಯೇ ಜಗಳ ಮಾಡಿಕೊಂಡಿದ್ದಾರೆ. ಅತಿಥಿ ಗೃಹದ ಮೇಲೆ ಮಹಿಳೆ ಕಲ್ಲು ಎಸೆದ ಪ್ರಕರಣ ಕೂಡ ನಡೆದಿದೆ. ಹಲವು ಬಾರಿ ಅವರಿಗೆ ಎಚ್ಚರಿಕೆ ನೀಡಿದ್ದರೂ ಪ್ರಯೋಜನವಾಗಲಿಲ್ಲ ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು.
ಕೊಟ್ಟೂರಿನವರಾದ ಸಬ್ ಇನ್ಸ್ ಪೆಕ್ಟರ್ ಮತ್ತು ಮಹಿಳೆ ಒಟ್ಟಿಗೇ ಕಾಲೇಜಿನಲ್ಲಿ ಅಧ್ಯಯನ ಮಾಡಿದವರು. ಪರಸ್ಪರ ಪ್ರೀತಿಸುತ್ತಿದ್ದರೂ ಮದುವೆ ಮಾಡಿಕೊಳ್ಳಲಾಗದೆ ಬೇರೆಯವರನ್ನು ಮದುವೆ ಮಾಡಿಕೊಂಡರು. ಆದರೆ ಆಗಾಗ ಭೇಟಿ ಸಂಬಂಧವನ್ನು ಮುಂದುವರಿಸಿದ್ದರು.

ಮಹಿಳೆಯ ಪತಿ ಕರ್ತವ್ಯದ ಮೇಲೆ ಹೊರಗೆ ಹೋಗಿದ್ದಾಗ ಇಬ್ಬರೂ ಭೇಟಿಯಾಗುತ್ತಿದ್ದರು. ಹಲವರಿಗೆ ಅವರ ಸಂಬಂಧದ ಬಗ್ಗೆ ಚೆನ್ನಾಗಿ ತಿಳಿದಿತ್ತು. ಗೋವಾ ಮತ್ತಿತರ ಸ್ಥಳಗಳಿಗೆ ಇಬ್ಬರೂ ಹೋಗುತ್ತಿದ್ದರು. ಈ ವಿಷಯ ಮಹಿಳೆ ಪತಿ ಕಾನ್ಸ್ಟೇಬಲ್ ಗೆ ಗೊತ್ತಾಗಿ ಮೇಲಾಧಿಕಾರಿಗಳಿಗೆ ಹೇಳುತ್ತೇನೆಂದು ಎಚ್ಚರಿಸಿದ್ದಾಗ ಎಸ್ ಐ ಜೀವಬೆದರಿಕೆ ಹಾಕಿದ್ದರು ಎನ್ನುತ್ತಾರೆ ಮತ್ತೊಬ್ಬ ಪೊಲೀಸ್ ಅಧಿಕಾರಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT