ರಾಜ್ಯ

ಪಾಕ್ ಧ್ವಜ ಪ್ರಕರಣ: ಗೌರಿ ಲಂಕೇಶ್ ಹತ್ಯೆ ಆರೋಪಿ ವಾಗ್ಮೋರೆ ಖುಲಾಸೆ

Manjula VN
ವಿಜಯಪುರ: 2012ರಲ್ಲಿ ಸಿಂದಗಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ ವಾಗ್ಮೋರೆ ಸೇರಿ 7 ಆರೋಪಿಗಳು ನಿರ್ದೋಷಿ ಎಂದು ಜಿಲ್ಲಾ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. 
2012ರ ಜ.1 ರಂದು ಸಿಂಗಗಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪಾಕಿಸ್ತಾನ ರಾಷ್ಟ್ರದ ಧ್ವಜ ಹಾರಾಟ ಪ್ರಕರಣದಲ್ಲಿ ಗ1ರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ ವಾಗ್ಮೋರೆ ಹಾಗೂ ಅನಿಲ ಸೋಲನಕರ್, ರಾಕೇಶ್ ಮಠ, ಮಲ್ಲನಗೌಡ ಪಾಟೀಲ, ರೋಹಿತ್ ನಾವಿ, ಸುನೀಲ್ ಅಗಸರ ಹಾಗೂ ಓರ್ವ ಬಾಲಕ ಆರೋಪಿಗಳಾಗಿದ್ದರು. 
ಪ್ರಕರಣ ಸಂಬಂಧ ನಿನ್ನೆ ಅಂತಿಮ ತೀರ್ಪು ಪ್ರಕಟಿಸಿದ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ.ಕೆ.ಬಿ.ಗೀತಾ ಅವರು, ವಾದ ಹಾಗೂ ಪ್ರತಿವಾದ ಆಲಿಸಿದರು. ಆಧರೆ, ಆರೋಪಿಗಳ ಪರವಾಗಿ ಯಾವುದೇ ರೀತಿಯ ಬಲವಾದ ಸಾಕ್ಷ್ಯಾಧಾರಗಳು ಲಭ್ಯವಾಗದ ಕಾರಣ ಆರೋಪಿಗಳನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದರು. 
ಪರಶುರಾಮ ವಾಗ್ಮೋರೆ ಪರ ವಕೀಲ. ಎಸ್.ಹೆಚ್.ಲಗಳಿ ವಾದ ಮಂಡಿಸಿದ್ದರು. ಆದರೆ, ವಾಗ್ಮೋರೆ ವಿರುದ್ಧ ಗೌರಿ ಲಂಕೇಶ್ ಹತ್ಯೆ ಪ್ರಕರಣ ಇರುವ ಕಾರಣ ಸದ್ಯಕ್ಕೆ ಬಿಡುಗಡೆ ಭಾಗ್ಯ ಇಲ್ಲ. 
SCROLL FOR NEXT