ರಾಜ್ಯ

ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಆಗಸ್ಟ್ 1 ರಿಂದ ಐಟಿ ಇಲಾಖೆ ನೌಕರರ ಮುಷ್ಕರ

Raghavendra Adiga
ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ನೌಕರರು ಆಗಸ್ಟ್ 1 ರಿಂದ ಚೆಕ್ ತೆಗೆದುಕೊಳ್ಳುವುದು ಹಾಗೂ ಸಮೀಕ್ಷೆಯಿಂದ ದೂರ ಉಳಿದು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.  ಸೆಂಟ್ರಲ್ ಬೋರ್ಡ್ ಫಾರ್ ಡೈರೆಕ್ಟ್ ಟ್ಯಾಕ್ಸ್ ನೌಕರರ ಸಂಘಟನೆಯ ಬೇಡಿಕೆಗಳಿಗೆ ಮನ್ನಣೆ ನೀಡದ ಹಿನ್ನೆಲೆಯಲ್ಲಿ ಅವರು ಆಗಸ್ಟ್ 1ರಿಂದ ಮುಷ್ಕರ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಇಂದು ನಡೆಯಲಿರುವ ಆದಾಯ ತೆರಿಗೆ ದಿನಾಚರಣೆಯನ್ನು ಸಹ ಅವರು ಬಹಿಷ್ಕರಿಸಿದ್ದಾರೆ.
ಕೇಂದ್ರ ತೆರಿಗೆ ಮಂಡಳಿ (ಸಿಬಿಡಿಟಿ) ಯು ಇಲಾಖೆಯಕಳೆದ ಒಂದು ವರ್ಷದಿಂದ ಪ್ರಚಾರ ಸಮಿತಿ ಸಭೆ ನಡೆಸಲು ವಿಫಲವಾಗಿದೆಯಲ್ಲದೆ  ಅಧಿಕಾರಿಗಳನ್ನು ಹುರಿದುಂಬಿಸುವುದರಲ್ಲಿ ಸೋತಿದೆ ಎಂದು ಪ್ರತಿಭಟನಾಕಾರರು ಆರೊಪಿಸಿದ್ದಾರೆ. "ದಾಖಲೆ ಪಮಾಣದ ತೆರಿಗೆ ಸಂಗ್ರಹದ ಹೊರತಾಗಿ ಶೇಕಡಾ 40 ರಷ್ಟು ಹುದ್ದೆಗಳು ಖಾಲಿ ಉಳಿದಿದೆ.ಅಧಿಕಾರಿಗಳು ಈ ಹುದ್ದೆಗಳ ನೇಮಕಾತಿಗಾಗಿ ನಿಯಮಗಳನ್ನು ರಚಿಸಿಲ್ಲ, ಹುದ್ದೆಗೆ ಅಗತ್ಯ ಜನರ ನೇಮಕಕ್ಕೆ ಕ್ರಮ ಕೈಗೊಂಡಿಲ್ಲ""ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ತಮ್ಮ ಬೇಡಿಕೆಗಳು  ಈಡೇರುವವರೆಗೆ ಯಾವುದೇ ಸಮೀಕ್ಷೆಗಳು ಅಥವಾ ಚೆಕ್ ಪಡೆದುಕೊಳ್ಳುವಿಕೆಯಿಂದ ನೌಕರರು ದೂರ ಉಳಿಯಲಿದ್ದಾರೆ."ಒಂದು ವರ್ಷದಿಂದ ನಾವು ನಮ್ಮ ಬೇಡಿಕೆಗಳನ್ನು ಪುನರಾವರ್ತಿಸುತ್ತಿದ್ದೇವೆ,. ಹಾಗಾದರೂ ಸಿಬಿಡಿಟಿ ನಮ್ಮ ಮನವಿಗಳನ್ನು ನಿರ್ಲಕ್ಷಿಸಿದೆ"  ವರಮಾನ ತೆರಿಗೆ ಗಝೆಟೆಡ್ ಅಧಿಕಾರಿಗಳ ಸಂಘದ ಅಧ್ಯಕ್ಷ ಕೆ.ಆರ್.ನಾರಾಯಣ,ಹೇಳಿದ್ದಾರೆ.
SCROLL FOR NEXT