ಶ್ರೀಲಕ್ಷ್ಮಿವರ ತೀರ್ಥ ಸ್ವಾಮೀಜಿ
ಬೆಂಗಳೂರು: ಉಡುಪಿಯ ಶ್ರೀಲಕ್ಷ್ಮಿವರ ತೀರ್ಥ ಸ್ವಾಮೀಜಿ ಅವರು ಸಾವನ್ನಪ್ಪಿ ಎರಡು ವಾರಗಳು ಕಳೆಯುತ್ತಾ ಬಂದಿವೆ. ಅದರ ಬೆನ್ನಲ್ಲೇ ಹಲವು ರಹಸ್ಯಗಳು ಹೊರಬೀಳುತ್ತಾ ಇವೆ, ಹಣಕಾಸಿನ ಮುಗ್ಗಟ್ಟಿನಿಂದ ಬಳಲಿದ್ದ ಶಿರೂರು ಶ್ರಿಗಳು ಮಣಿಪಾಲದಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ ಮಾರಾಟ ಮಾಡಲು ಬಯಸಿದ್ದರು ಎಂದು ಹೇಳಲಾಗುತ್ತಿದೆ.
ಸಾಕಷ್ಟು ಆದಾಯ ತರುತ್ತಿದ್ದ ಮಣಿಪಾಲದ ಶಾಪಿಂಗ್ ಮಾಲ್ ಆಗಿರುವ ಶಿರೂರು ಟವರ್ಸ್ 12 ಎಕರೆ ಜಮೀನಿನಲ್ಲಿ ಈ ಕಾಂಪ್ಲೆಕ್ಸ್ ನಿರ್ಮಾಣವಾಗಿದೆ ವೃತ್ತಿಯಲ್ಲಿ ಜ್ಯೋತಿಷಿಯಾಗಿರುವ ಪ್ರಜ್ವಲ್ ರೈ ಮತ್ತು ರಿಯಲ್ ಎಸ್ಟೇಟ್ ಏಜೆಂಟ್ ಕಿಶೋರ್ ಕಲ್ಲಡ್ಕ ಅವರ ಜೊತೆ ಆಸ್ತಿ ಮಾರುವ ಕುರಿತು ಚರ್ಚಿಸಿದ್ದರು ಎಂದು ಕೇಳಿ ಬಂದಿದೆ. ಜಲೀಲ್ ಕರೋಪಡಿ ಕೊಲೆ ಕೇಸ್ ನಲ್ಲಿ ಪ್ರಜ್ವಲ್ ರೈ ಪ್ರಮುಖ ಆರೋಪಿಯಾಗಿದ್ದು ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಹಣಕಾಸಿನ ಮುಗ್ಗಟ್ಟಿನಿಂದ ಸ್ವಾಮೀಜಿಗಳು ಬಳಲಿದ್ದರು ಎಂದು ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಪರ ವಕೀಲ ರವಿಕಿರಣ್ ಮುರ್ಡೇಶ್ವರ ತಿಳಿಸಿದ್ದಾರೆ, ಮಣಿಪಾಲದ ಬಹು ಮಹಡಿ ಕಟ್ಟಡದ ಮೇಲೆ ಸಾಲ ಪಡೆದಿದ್ದರು.
ಸ್ವಾಮೀಜಿ ಅವರ ಆಪ್ತರೊಬ್ಬರುನ ತಮ್ಮನ್ನು ಸಂಪರ್ಕಿಸಿ ಆಸ್ತಿಯನ್ನು ಮಾರಾಟ ಮಾಡುವಂತೆ ಕೇಳಿದ್ದರು, 400 ಪುಟಗಳ ದಾಖಲೆಗಳನ್ನು ಕೂಡ ನೀಡಿದ್ದರು. ಆತನ ಹೆಸರು ನನಗೆ ನೆನಪಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ,
ಈ ಆಸ್ತಿಯ ಮೌಲ್ಯ ಸುಮಾರು 180 ಕೋಟಿ ರು ಆಗಿದ್ದು, ನೆಗೋಶಿಯಬಲ್ ಆಗಿತ್ತು, ಕೈಯಿಂದ ಕೈ ಬದಲಾಗಿ ದಾಖಲಾತಿ ಬೆಂಗಳೂರಿಗೆ ಸೇರಿತ್ತು. ಅದಾದ ನಂತರ ಸ್ವಾಮೀಜಿಗಳ ಮರಣದಿಂದಾಗಿ ಎಲ್ಲರಲ್ಲೂ ಆಘಾತ ತಂದಿತ್ತು. ಎರಡು ತಿಂಗಳಲ್ಲಿ ಎಲ್ಲವೂ ಫೈನಲ್ ಆದರೇ ಮತ್ತಷ್ಟು ನೆಗೋಶಿಯಬಲ್ ಮಾಡುವುದಾಗಿ ಸ್ವಾಮೀಜಿ ಹೇಳಿದ್ದರು ಎಂದು ಪ್ರಜ್ವಲ್ ಸ್ನೇಹಿತರು ತಿಳಿಸಿದ್ದಾರೆ,
ಈ ಡೀಲ್ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದು ಹೇಳಿರುವ ರವಿಕಿರಣ್, ಸಾಲ ತೀರಿಸುವುದಕ್ಕಾಗಿ ಸ್ವಾಮೀಜಿಗಳು ಈ ಡೀಲ್ ಗೆ ಕೈ ಹಾಕಿರಬಹುದು ಎಂದು ಅವರು ತಿಳಿಸಿದ್ದಾರೆ, ಮಣಿಪಾಲದ ಕಲ್ಸಂಕದ ಕನಕ ಕಟ್ಟಡದ ಮೇಲೆ ಹೆಚ್ಚಿನ ಮೊತ್ತದ ಸಾಲ ಪಡೆದಿದ್ದರು. ಇದರಿಂದ ಅವರ ಆಸ್ತಿ ಮಾರಲು ಬಯಸಿದ್ದರು ಎಂದು ಹೇಳಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos