ಮಾಜಿ ಮ್ಯಾನೇಜರ್ ಸಂಪಿಗೆತ್ತಾಯ ಮತ್ತಿ ಲಕ್ಷ್ಮಿವರ ತೀರ್ಥ ಸ್ವಾಮೀಜಿ 
ರಾಜ್ಯ

ಶಿರೂರು ಮಠದ ಸ್ವಾಮೀಜಿ ಸಾವು ಪ್ರಕರಣ: ಮಾಜಿ ಮ್ಯಾನೇಜರ್ ಹಾಗೂ ಆಟೋ ಚಾಲಕನ ವಿಚಾರಣೆ

ಶಿರೂರು ಮಠದ ಶ್ರೀ ಲಕ್ಷ್ಮಿವರ ತೀರ್ಥ ಸ್ವಾಮಿಜಿ ನಿಗೂಡ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಮಠದ ಮಾಜಿ ಮ್ಯಾನೇಜರ್ ..

ಉಡುಪಿ: ಶಿರೂರು ಮಠದ ಶ್ರೀ ಲಕ್ಷ್ಮಿವರ ತೀರ್ಥ ಸ್ವಾಮಿಜಿ ನಿಗೂಡ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಮಠದ ಮಾಜಿ ಮ್ಯಾನೇಜರ್ ಮತ್ತು ಸ್ವಾಮೀಜಿಗಳ ಜೊತೆ ಸಂಪರ್ಕವಿರಿಸಿಕೊಂಡಿದ್ದ ಆಟೋ ಚಾಲಕನ  ವಿಚಾರಣೆ ನಡೆಸಿದ್ದಾರೆ.
ಹಿರಿಯಡ್ಕದಲ್ಲಿರುವ ಶಿರೂರು ಮೂಲಮಠ ದ ಸಮೀಪದ ನಿವಾಸಿಗಳ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ,  ಪದೇ ಪದೇ ಸ್ವಾಮೀಜಿ ಭೇಟಿಗೆ ಬರುತ್ತಿದ್ದ ಕಿನ್ನಿಮೂಲ್ಕಿಯ ಫ್ಲಾಟ್ ನಲ್ಲಿರುವ ಮಹಿಳೆಯೊಬ್ಬರನ್ನು ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಮಠದ ಮಾಜಿ ಮ್ಯಾನೇಜರ್ ಸುನಿಲ್ ಸಂಪಿಗೆತ್ತಾಯ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ,  ಪ್ರಕರಣದ ಭಾಗವಾಗಿ ಶಂಕೆಯ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೂಡ ವಿಚಾರಣೆ ನಡೆಸಿರುವುದಾಗಿ ತಿಳಿಸಿದ್ದಾರೆ, ಮಣಿಪಾಲದ ಸಮೀಪವಿರುವ ದುಗಲಿಪಡುವಿನ ಆಟೋಚಾಲಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಸ್ವಾಮೀಜಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಆತನಿಗೆ ಸ್ವಾಮೀಜಿಗಳು ಹಣಕಾಸಿನ ಸಹಾಯ ಮಾಡಿ ಆಟೋ ಕೊಡಿಸಿದ್ದರು.
ಸ್ವಾಮೀಜಿ ಕುಡಿದ ಜ್ಯೂಸಿನ ಬಾಟಲ್ ನಲ್ಲಿ ವಿಷಕಾರಕ ಅಂಶವಿದ್ದು, ಅದು ಮಠದಲ್ಲಿ ಪತ್ತೆಯಾಗಿದೆ, ವಿಧಿ ವಿಜ್ಞಾಮನ ಪರೀಕ್ಷಾಲಯದ ವರದಿಗಾಗಿ ತಾವು ಕಾಯುತ್ತಿರುವುದಾಗಿ ಉಡುಪಿ ಎಸ್ ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ. ಇನ್ನು ಒಂದು ಅಥವಾ ಎರಡು ದಿನದಲ್ಲಿ ವರದಿ ಬರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ