ಸಂಗ್ರಹ ಚಿತ್ರ 
ರಾಜ್ಯ

ಕರ್ನಾಟಕ: ಆಧಾರ್ ಬಯೋಮೆಟ್ರಿಕ್ ಗೊಂದಲಕ್ಕೆ ಪರಿಹಾರವೆಲ್ಲಿ?

ಕಳೆದ ಫೆಬ್ರವರಿಯಲ್ಲಿ ರಾಯಚೂರು ಮೂಲದ ಗುತ್ತಿಗೆ ಕಾರ್ಮಿಕನೊಬ್ಬ ಏಳು ವರ್ಷಗಳ ಕಾಲ ಸತತ ಅಲೆದಾಟದ ಬಳಿಕ ಆಧಾರ್ ಸಂಖ್ಯೆ ಪಡೆದಿದ್ದರು

ಬೆಂಗಳೂರು: ಕಳೆದ ಫೆಬ್ರವರಿಯಲ್ಲಿ ರಾಯಚೂರು ಮೂಲದ ಗುತ್ತಿಗೆ ಕಾರ್ಮಿಕನೊಬ್ಬ ಏಳು ವರ್ಷಗಳ ಕಾಲ ಸತತ ಅಲೆದಾಟದ ಬಳಿಕ ಆಧಾರ್ ಸಂಖ್ಯೆ ಪಡೆದಿದ್ದರು. ಅವರು ಮಾಡದ ತಪ್ಪಿಗಾಗಿ ಅವರು 30 ಸಾವಿರಕ್ಕೆ ಹೆಚ್ಚು ಹಣ ವೆಚ್ಚ ಮಾಡಬೇಕಾಗಿತ್ತು. ಆಧಾರ್ ನೊಂದಣಿ ಅಧಿಕಾರಿಗಳು ಅವರ ಬೆರಳಚ್ಚಿನ ಬದಲು ಅವರ ಮಗನ ಬೆರಳಚ್ಚು ಪಡೆದು ಮಾಡಿದ್ದ ಎಡವಟ್ಟು ಇದಕ್ಕೆಲ್ಲಾ ಕಾರಣವಾಗಿತ್ತು.
ಭಾರತ ವಿಶಿಷ್ಟ ಗುರುತು ಪ್ರಾಧಿಕಾರ  (ಯುಐಡಿಎಐ) ನ ಹಿರಿಯ ಅಧಿಕಾರಿಗಳ ಪ್ರಕಾರ ಇದು ಕೇವಲ ಒಂದು ಘಟನೆಯಲ್ಲ, ಕಳೆದ ಏಳು ವರ್ಷಗಳಲ್ಲಿ ನೊಂದಣಿಯಾದ ಆಧಾರ್ ಸಂಖ್ಯೆಗಳ ಸುಮಾರು 1 ರಿಂದ 1.5 ಶೇಕಡಾದಷ್ಟು ಪ್ರಕರಣಗಳಲ್ಲಿ ಗುರುತಿನ ಚೀಟಿ ಖಾತೆದಾರರ ಬಯೋಮೆಟ್ರಿಕ್ ಗಳು ಅದಲು ಬದಲಾಗಿದೆ. ಕರ್ನಾಟಕದಲ್ಲಿ ಆರರಿಂದ ಒಂಬತ್ತು ಲಕ್ಷ ಆಧಾರ್ ಸಂಖ್ಯೆಗಳಲ್ಲಿ ಇಂತಹಾ ಬಯೋಮೆಟ್ರಿಕ್ ತೊಂದರೆಗಳಿದೆ, ದೇಶದಲ್ಲಿ ಇದರ ಪ್ರಮಾಣ ಸುಮಾರು 1.3 ರಿಂದ 1.9 ಕೋಟಿಗಳಷ್ಟು ಇವೆ ಎನ್ನಲಾಗಿದೆ.
ಯುಐಡಿಎಐ ಇತ್ತೀಚೆಗೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಸಂಬಂಧ ಪಟ್ಟವರಿಗೆ ಇದನ್ನು ಸರಿಪಡಿಸುವಂತೆ ಪತ್ರ ಬರೆದಿದೆ.ಬಯೋಮೆಟ್ರಿಕೆ ಬದಲಾವಣೆ ಸಮಸ್ಯೆ ಹೆಚ್ಚಾಗಿ ಗ್ರಾಮೀಣ ಭಾಗಗಳಲ್ಲಿ ಕಂಡುಬಂದಿದ್ದು ಈ ಸಮಸ್ಯೆಯಿಂದಾಗಿ ಗ್ರಾಮೀಣ ಜನರು ಸರ್ಕಾರದ ಹಲವು ಯೋಜನೆಗಳಿಂದ ವಂಚಿತರಾಗಿದ್ದಾರೆ.
ಮೂಲಗಳ ಪ್ರಕಾರ, ಕುಟುಂಬದ ಸದಸ್ಯರು ಮತ್ತು ಸಂಬಂಧಿಕರ ಬಯೋಮೆಟ್ರಿಕ್ ಡೇಟಾಗಳು ಬದಲಾಗಿ ಸಮಸ್ಯೆ ತಲೆದೋರುತ್ತಿದೆ. ಆಧಾರ್ ನೊಂದಣಿ ಅಭಿಯಾನದ ವೇಳೆ ಈ ಎಲ್ಲರ ಬಯೋಮೆಟ್ರಿಕ್ ಗುರುತನ್ನು ಪಡೆಯಲಾಗುತ್ತದೆ ಆ ಸಂದರ್ಭ ಕೆಲ ವ್ಯಕ್ತಿಗಳ ಗುರುತುಗಳು ಬದಲಾಗಿ ಸಮಸ್ಯೆ ಉಂಟಾಗುತ್ತಿದೆ. "ಗುರಿಯನ್ನು ತಲುಪುವ ಸಲುವಾಗಿ ಕೆಲವು ದಾಖಲಾತಿ ಏಜೆನ್ಸಿಗಳು ಯಾರು ಆಧಾರ್ ನೊಂದಣಿ ಮಾಡುವ ವ್ಯಕ್ತಿಯ ಬಯೋಮೆಟ್ರಿಕ್ ಗುರುತು ಪಡೆಯಲು ಸಾಧ್ಯವಾಗದೆ ಹೋದಲ್ಲಿ ಸಂಬಂಧಿಕರ ಬಯೋಮೆಟ್ರಿಕ್ಸ್ ಗುರುತನ್ನು ಬಳಸಿಕೊಳ್ಳುತ್ತದೆ.ಹೀಗಾದಾಗ  ಆಧಾರ್ ಸಂಪರ್ಕಿತ ಅಗತ್ಯ ಸೇವೆಗಳನ್ನು ಪಡೆದುಕೊಳ್ಳಲು ಸಮಸ್ಯೆಯುಂಟಾಗುತ್ತದೆ" ಅಧಿಕಾರಿ ಹೇಳಿದರು.
ದೂರು ದಾಖಲಾದಾಗ ಮಾತ್ರ ಆಧಾರ್ ಸಂಖ್ಯೆನೊಂದಣಿಯಲ್ಲಾದ ಈ ಎಡವಟ್ಟು ಬೆಳಕಿಗೆ ಬರುತ್ತದೆ. ಯಾರೇ ಆಗಲಿ ಆಧಾರ್ ಸಂಖ್ಯೆ ಬಳಸಿ ಸಾರ್ವಜನಿಕ ಸೇವೆ ಪಡೆಯ ಹೋದಾಗ ಏನಾದರೂ ಸಮಸ್ಯೆಯಾದರೆ ಮಾತ್ರ ಅಂತಹವರ ಬಯೋಮೆಟ್ರಿಕ್ ಡೇಟಾಗಳು ಬದಲಾಗಿದೆ ಎಂದು ತಿಳಿಯಲಾಗುವುದು, ಕರ್ನಾಟಕದ ಇ-ಆಡಳಿತ ಕೇಂದ್ರದಲ್ಲಿ ಈ ಸಂಬಂಧ ಒಂದು ತಿಂಗಳಿಗೆ ಸುಮಾರು  450 ದೂರುಗಳು ದಾಖಲಾಗುತ್ತದೆ ಎಂದು ಮೂಲಗಳು ತಿಳಿಸಿದೆ.
ಹಲವು ದೂರುಗಳು ಬಂದ ನಂತರ, ಯುಐಡಿಎಐ ಆಧಾರ್ ನೊಂದಣಿದಾರರಿಗೆ ಲಿಖಿತ ಪತ್ರ ಬರೆದಿದೆ ಅಲ್ಲದೆ ದೇಶಾದ್ಯಂತ ಈ ದೋಷ ಪರಿಹಾರಕ್ಕಾಗಿ ಶಿಬಿರಗಳನ್ನು ಆಯೋಜಿಸುತ್ತಿದೆ.ಅಂತಹ ಶಿಬಿರಗಳ ದಿನಾಂಕಗಳನ್ನು ಸಮಸ್ಯೆಗೆ ಒಳಗಾದವರಿಗೆ ಮಾತ್ರ ತಿಳಿಸಲಾಗುತ್ತದೆ. ಇಂತಹಾ ಪ್ರಕರಣಗಳನ್ನು ಒಂದಾದ ಬಳಿಕ ಒಂದರಂತೆ ಬಗೆಹರಿಸಬೇಕೆಂದು ಹೆಸರು ಹೇಳ ಬಯಸದ ಅಧಿಕಾರಿಗಳು ಹೇಳಿದ್ದಾರೆ.
"ಬಯೋಮೆಟ್ರಿಕ್ ದತ್ತಾಂಶವು ಹಲವಾರು ಸಂದರ್ಭಗಳಲ್ಲಿ ಸರಿಯಾಗಿ ಸೆರೆಹಿಡಿಯಲ್ಪಡುವುದಿಲ್ಲ. ಯುಐಡಿಎಐ ಇಂತಹ ಪ್ರಕರಣಗಳನ್ನು ಗುರುತಿಸುತ್ತಿದೆ ಮತ್ತು ಆ ಬಗ್ಗೆ ಅರಿವು ಮೂಡಿಸುತ್ತದೆ" ಅವರು ಹೇಳುತ್ತಾರೆ.ಈ ಎಲ್ಲಾ ಸಮಸ್ಯೆಗಳ ಕುರಿತಂತೆ ವಿವರ ಕೇಳುವ ಸಲುವಾಗಿ ಎಕ್ಸ್ ಪ್ರೆಸ್ ಯುಐಡಿಎಐನ ಜನರಲ್ ಮ್ಯಾನೇಜರ್ ಮಾದ್ಯಮ ಮತ್ತು ಸಾರ್ವಜನಿಕ ಸಂಒಅರ್ಕ ವಿಭಾಗ,  ವಿಕಾಸ್ ಶುಕ್ಲಾ  ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಅವರು ಈ ಮೇಲ್ ಮೂಲಕ ಪ್ರಶ್ನೆಗಳನ್ನು ಕಳಿಸಲು ಹೇಳಿದ್ದರು. ಅದರಂತೆ ಎಕ್ಸ್ ಪ್ರೆಸ್  ಮಂಗಳವಾರ ಪ್ರಶ್ನಾವಳಿಯನ್ನು ಕಳಿಸಿದ್ದರೂ ಇದುವರೆಗೆ ಅವರಿಂದ ಯಾವ ಪ್ರತಿಕ್ರಿಯೆ ಬಂದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

SIR ಅಕ್ರಮ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ