ರಾಜ್ಯ

ಶಾಸಕ ವೇದವ್ಯಾಸ ಕಾಮತ್ ಗೆ ಹೈಕೋರ್ಟ್ ನೋಟಿಸ್

Shilpa D
ಬೆಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರಿಗೆ ರಾಜ್ಯ ಹೈಕೋರ್ಟ್ ನೊಟೀಸ್ ನೀಡಿದೆ. 
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಇವಿಎಂ ಗಳನ್ನು ಹ್ಯಾಕ್ ಮಾಡಿದ್ದರು ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೋ ಕೋರ್ಟ್ ಗೆ ಅರ್ಜಿ ಸಲ್ಲಿಸಿದರು, ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ನೊಟೀಸ್ ನೀಡಿದ್ದಾರೆ,
ಶಾಸಕ ವೇದ ವ್ಯಾಸ ಕಾಮತ್ ಜನಪ್ರಿಯ ಅಭ್ಯರ್ಥಿ ಆಗಿರಲಿಲ್ಲ, ಹೀಗಿದ್ದರೂ 16 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ, ಅವರ ಗೆಲುವಿಗೆ ಇವಿಎಂ ಹ್ಯಾಕ್ ಮಾಡಿರುವುದೇ ಕಾರಣ ಎಂದು ಲೋಬೋ ಆರೋಪಿಸಿದ್ದಾರೆ, ವಿಚಾರಣೆಯನ್ನು ಆಗಸ್ಟ್ 16ಕ್ಕೆ  ಮುಂದೂಡಲಾಗಿದೆ.
SCROLL FOR NEXT