ರಾಜ್ಯ

ಚಂದ್ರಗ್ರಹಣ; ಮೌಢ್ಯ ವಿರೋಧಿಸಿ ವಿನೂತನ ಪ್ರತಿಭಟನೆ ನಡೆಸಿದ ಪ್ರಗತಿಪರರು

Manjula VN
ಬೆಂಗಳೂರು: ಚಂದ್ರಗ್ರಹಣ ಖಗೋಳಾಸಕ್ತರಿಗೆ ಅಪರೂಪದ ವಿಸ್ಮಯವಾಗಿದ್ದರೆ, ಇನ್ನೂ ಕೆಲವರಿಗೆ ಆತಂಕ ಹಾಗೂ ಮೂಢನಂಬಿಕೆಗಳಿಗೆ ಕಾರಣವಾಗಿದ್ದ ಹಿನ್ನಲೆಯಲ್ಲಿ ತಡರಾತ್ರಿ ನಗರದ ಟೌನ್'ಹಾಲ್ ಮುಂದೆ ಮೌಢ್ಯ ವಿರೋಧಿಸಿ ಪ್ರಗತಿಪರರು ವಿನೂತನ ಪ್ರತಿಭಟನೆ ನಡೆಸಿದರು. 
ಟೌನ್ ಹಾಲ್ ಮುಂಭಾಗದಲ್ಲಿ ಕುಳಿತ ನೂರಾರು ಪ್ರಗತಿಪರರು ಗ್ರಹಣ ಸಂಭವಿಸುವ ಸಮಯದಲ್ಲಿ ಆಹಾರ ಸೇವನೆ ಮಾಡುವ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆದರು. ಅಲ್ಲದೆ, ಸಂಗೀತದೊಂಡಿದೆ ಮೂಢನಂಬಿಕೆ ವಿರೋಧಿಸಿ ಘೋಷಣೆಗಳನ್ನು ಕೂಗಿ ಸಂಭ್ರಮವನ್ನಾಚರಿಸಿದರು. 
ಗ್ರಹಣದ ಸಮಯದಲ್ಲಿ ಆಹಾರ ಸೇವಿಸಬಾರದು ಎಂಬ ನಂಬಿಕೆಗಳಿದ್ದ ಹಿನ್ನಲೆಯಲ್ಲಿ ಪ್ರಗತಿಪರರು ಇದೇ ಸಮಯದಲ್ಲಿಯೇ ಆಹಾರವನ್ನು ಸೇವಿಸಿ ಮೂಢ ನಂಬಿಕೆಯ ವಿರುದ್ಧ ಜನಜಾಗೃತಿ ಮೂಡಿಸಿದರು. 
ವಿಜ್ಞಾನದೆಡೆಗೆ ನಮ್ಮ ನಡಿಗೆ ಎಂಬ ಹೆಸರಿನಲ್ಲಿ ಜನರಲ್ಲಿ ಅರಿವು ಮೂಡಿಸಲು ಮುಂದಾಗಿದ್ದ ಪ್ರಗತಿಪರರು, ನಾನು ವಿಜ್ಞಾನನವನ್ನು ನಂಬುತ್ತೇನೆ, ಮೂಢನಂಬಿಕೆಯನ್ನಲ್ಲ ಎಂಬ ಘೋಷಣಾ ವಾಕ್ಯಗಳನ್ನು ಕೂಗಿದರು. 
SCROLL FOR NEXT