ರಾಜ್ಯ

ಆರ್ಥಿಕ ಅಪರಾಧ: ಟಿಡಿಪಿ ಎಂಎಲ್ಸಿ ವಿ. ನಾರಾಯಣ ರೆಡ್ಡಿಗೆ ಜಾಮೀನು ನಕಾರ

Raghavendra Adiga
ಬೆಂಗಳೂರು: ಕರ್ನಾಟಕದ ಚುನಾಯಿತ ಸಂಸದರು / ಎಂಎಲ್ಎಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಲಯವು ಆರ್ಥಿಕ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಡಿಪಿ ಎಮ್ಎಲ್ಸಿ ವೆಕಟಿ ನಾರಾಯಣ್ ರೆಡ್ಡಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ವಿಎನ್ಆರ್ ಇನ್ಫ್ರಾಸ್ಟ್ರಕ್ಚರ್ ವ್ಯವಸ್ಥಾಪಕ ನಿರ್ದೇಶಕ ರೆಡ್ಡಿ ಭಾರತ ಸರಕಾರದ ಕೈಗಾರಿಕಾ ಹಣಕಾಸು ನಿಗಮದ (ಐಎಫ್ಸಿಐ) ಲಿಮಿಟೆಡ್ ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿರುವ ವಿ. ಸಿ. ರಾಮ್ ಮೋಹನ್ ಅವರುಗಳ ಜಾಮೀನಿಗೆ ಕೋರ್ಟ್ ನಿರಾಕರಿಸಿದೆ.
ಸಿಬಿಐ ಹೇಳುವಂತೆ  2014-15ರ ಅವಧಿಯಲ್ಲಿ ಬೆಂಗಳೂರಿನ ಐಎಫ್ಸಿಐ ಲಿಮಿಟೆಡ್ ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿದ್ದ ರಾಮ್ ಮೋಹನ್ ಅವರು 190 ಕೋಟಿ ರೂಪಾಯಿ ಸಾಲವನ್ನುವಿಎನ್ ಆರ್ ಇನ್ಫ್ರಾಸ್ಟ್ರಕ್ಚರ್ಸ್. ನೀಡಿದ್ದ  ಭದ್ರತಾ ಪತ್ರಗಳ ಆಧಾರದ ಮೇಲೆ, ಮಂಜೂರು ಮಾಡಿದ್ದರು. ಆದರೆ ರೆಡ್ಡಿ ತಾವು ಪಡೆದ ಸಾಲವನ್ನು ಹಿಂತಿರುಗಿಸಿಲ್ಲ. 
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ ವಿ ವಿ ಪಾಟೀಲ್ ಇಬ್ಬರೂ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು ರೆಡ್ಡಿ ಹಾಗೂ ರಾಮ್ ಮೋಹನ್ ಸಾಕ್ಷ್ಯ ನಾಶಕ್ಕೆ ಕೈಹಾಕುವ ಸಾಧ್ಯತೆ ಇರುವ ಕಾರಣ ಅವರಿಗೆ ಜಾಮೀನು ನೀಡಲಾಗುತ್ತಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
SCROLL FOR NEXT