ಬೆಂಗಳೂರು: ಪ್ರಾಣಿಗಳ ಮೂಲಕ ಮನುಷ್ಯರಲ್ಲಿ ಹರಡುವ ರೇಬಿಸ್ ಸೋಂಕು ಮಾರಣಾಂತಿಕವಾಗಿದ್ದು, ರಾಜ್ಯ ಸರ್ಕಾರ ಬೀದಿನಾಯಿಗಳಿಗೆ ಅತ್ಯುತ್ತಮ ರೇಬಿಸ್ ಲಸಿಕೆಗಳನ್ನು ಹಾಕುತ್ತಿದ್ದರೂ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಮಾತ್ರ ಏರುತ್ತಲೇ ಇದೆ.
ರಾಷ್ಟ್ರೀಯ ಆರೋಗ್ಯ ಪ್ರೊಫೈಲ್ 2018 ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಇದರಲ್ಲಿರುವ ಮಾಹಿತಿಗಳ ಪ್ರಕಾರ ದೇಶದಲ್ಲಿಯೇ ರೇಬಿಸ್'ಗೆ ತುತ್ತಾಗಿರುವವರ ಸಂಖ್ಯೆ ಕರ್ನಾಟಕದಲ್ಲಿಯೇ ಹೆಚ್ಚು ಎಂಬುದಾಗಿ ತಿಳಿದುಬಂದಿದೆ. ರೇಬಿಸ್ ರೋಗಕ್ಕೆ ಸಂಬಂಧಿಸಿದ ಸಾವುಗಳಲ್ಲಿ ಕಳೆದ ವರ್ಷ ಕರ್ನಾಟಕ ರಾಜ್ಯ 2ನೇ ಸ್ಥಾನವನ್ನು ಪಡೆದುಕೊಕಂಡಿದೆ.
ಕಳೆದ ವರ್ಷ ರಾಜ್ಯದಲ್ಲಿ 97 ಮಂದಿಯಲ್ಲಿ ರೇಬೀಸ್ ಕಾಣಿಸಿಕೊಂಡಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ. 2016ರಲ್ಲಿ 22 ಪ್ರಕರಣಗಳು ದಾಖಲಾಗಿವೆ.
2012ನೇ ಸಮೀಕ್ಷೆ ಗಳ ಪ್ರಕಾರ ಸಿಲಿಕಾನ್ ಸಿಟಿಯಲ್ಲಿ 2.9 ಲಕ್ಷ ನಾಯಿಗಳಿದ್ದು, ಇದರಲ್ಲಿ 1.05 ಲಕ್ಷ ಸಾಕು ನಾಯಿಗಳಾಗಿದ್ದಾರೆ, 1.85 ಲಕ್ಷ ಬೀದಿ ನಾಯಿಗಳಿವೆ ಎಂದು ತಿಳಿದುಬಂದಿದೆ.
ಬಿಬಿಎಂಪಿ ಪ್ರಾಣಿ ಪಶು ಇಲಾಖೆ ಪ್ರತಿಕ್ರಿಯೆ ನೀಡಿ, ಕಳೆದ ವರ್ಷ 1.7 ಲಕ್ಷ ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದವು. ಸಾಕು ನಾಯಿ ಹಾಗೂ ಬೀದಿನಾಯಿಗಳಿಗೆ ಕ್ರಿಮಿನಾಶಕ ಹಾಗೂ ಲಸಿಕೆಗಳನ್ನು ಹಾಕಲು ಬಿಬಿಎಂಪಿ ರೂ.3 ಕೋಟಿ ಖರ್ಚು ಮಾಡುತ್ತಿದೆ. 2016ರಲ್ಲಿ 16,979, 2017ರಲ್ಲಿ 12,297 ಪ್ರಸಕ್ತ ವರ್ಷ ಮೇ ಅಂತ್ಯದವರೆಗೂ 2,174 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. 2016ರ ವರ್ಷದಲ್ಲಿ 37,867 ನಾಯಿಗಳಿಗೆ ಲಸಿಕೆಗಳನ್ನು ಹಾಕಲಾಗಿದೆ. 2017ನೇ ಸಾಲಿನಲ್ಲಿ 35,266 ನಾಯಿಗಳಿಗೆ ಲಸಿಕೆಗಳನ್ನು ಹಾಕಲಾಗಿದೆ ಎಂದು ಹೇಳಿದೆ.
ಬಿಬಿಎಂಪಿ ಪಶು ಪ್ರಾಣಿ ಇಲಾಖೆ ಜಂಟಿ ನಿರ್ದೇಶ ಜಿ.ಆನಂದ್ ಅವರು ಮಾತನಾಡಿ, ನಾಯಿಗಳಿಗೆ ಕ್ರಿಮಿನಾಶಕಗಳನ್ನು ನೀಡುವಲ್ಲಿ 4 ಎನ್'ಜಿಒ, ಇಬ್ಬರು ಪಶುವೈದ್ಯರು ಮತ್ತು ಒಂದು ಪ್ರತ್ಯೇಕ ಸಂಸ್ಥೆ ಕಾರ್ಯನಿರ್ವಹಿಸುತ್ತಿವೆ. ಇದೇ ಸಂಸ್ಥೆ ಹಾಗೂ ಸಂಘಟನೆಗಳೇ ರೇಬಿಸ್ ಲಸಿಕೆಗಳನ್ನು ನೀಡುತ್ತಿವೆ. ಲಸಿಕೆಗಳು ಕೆಲ ಸಮಯದಲ್ಲಿ ಮಾತ್ರವೇ ಪರಿಣಾಮಕಾರಿಯಾಗಿರುವುದಿಂದ ಪ್ರತೀ ವರ್ಷವೂ ಈ ಕಾರ್ಯವನ್ನು ಮಾಡಬೇಕಾಗುತ್ತದೆ. ಹೀಗಾಗಿ ಮತ್ತಷ್ಟು ಹಣವನ್ನು ಬಿಡುಗಡೆ ಮಾಡುವಂತೆ ಸರ್ಕಾರದ ಬಳಿ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ.ಬಿ.ಜಿ.ಪ್ರಕಾಶ್ ಕುಮಾರ್ ಮಾತನಾಡಿ, ಹಾವೇರಿ ಹಾಗೂ ಇತರೆ ಪ್ರದೇಶಗಳಲ್ಲಿ ಕಳೆದ ವರ್ಷ ರೇಬಿಸ್ ರೋಗಕ್ಕೆ ತುತ್ತಾಗಿರುವ ಸಂಖ್ಯೆ ಹೆಚ್ಚಾಗಿತ್ತು ಎಂದಿದ್ದಾರೆ.
ಐಎಹೆಚ್'ವಿಬಿ ನಿರ್ದೇಶಕ ಡಾ.ಎಸ್.ಎಂ ಬೈರೇಗೌಡ ಮಾತನಾಡಿ, ಪ್ರತೀ ನಾಯಿಗೂ ಲಸಿಕೆ ಹಾಕು ವೇಳೆ ರೂ.20 ಅಷ್ಟೇ ಪಡೆಯುತ್ತಿದ್ದೇವೆ. ನಾಯಿಗೆ ಈ ಹಿಂದೆಯೇ ಲಸಿಕೆಯನ್ನು ನೀಡಿದ್ದರೆ, ಐದು ಡೋಸ್ ಲಸಿಕೆಯನ್ನು ನೀಡಿ ರೂ.70 ಪಡೆಯುತ್ತೇವೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos