ರಾಜ್ಯ

ಫ್ಲಾಟ್ ಗೆ ಒಂದು, ಮನೆಗೆ ಮೂರು ನಾಯಿ ಸಾಕಲು ಅನುಮತಿ: ಇದು ಬಿಬಿಎಂಪಿ ಹೊಸ ನಿಯಮ

Sumana Upadhyaya

ಬೆಂಗಳೂರು: ಇನ್ನು ಮುಂದೆ ಬೆಂಗಳೂರಿಗರು ತಮ್ಮ ಮನೆಗಳಲ್ಲಿ ಮೂರಕ್ಕಿಂತ ಹೆಚ್ಚು ಮತ್ತು ಅಪಾರ್ಟ್ ಮೆಂಟ್ ನಲ್ಲಿ ಒಂದಕ್ಕಿಂತ ಜಾಸ್ತಿ ನಾಯಿಗಳನ್ನು ಸಾಕುವಂತಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಕುರಿತು ಆದೇಶ ಹೊರಡಿಸಿದೆ. ಪಾಲಿಕೆ ಹೊರಡಿಸಿರುವ ಹೊಸ ಸಾಕು ನಾಯಿ ಅನುಮತಿ ನಿಯಮಗಳಲ್ಲಿ ಸಾಕಬಹುದಾದ ನಾಯಿಗಳ ಸಂಖ್ಯೆಯನ್ನು ಮಿತಿಗೊಳಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ಈ ನಿಯಮ ಅನ್ವಯವಾಗಲಿದೆ. ಬಿಬಿಎಂಪಿಯ ಹೊಸ ಸಾಕು ನಾಯಿ ಅನುಮತಿ ಯೋಜನೆ ಪ್ರಕಾರ, ಫ್ಲಾಟ್ ಗಳಲ್ಲಿ ವಾಸಿಸುತ್ತಿರುವವರು ಕೇವಲ ಒಂದು ಸಾಕುನಾಯಿಯನ್ನು ಮಾತ್ರ ಸಾಕಬಹುದಾಗಿದೆ. ಇನ್ನು ಸ್ವಂತ ಮನೆಗಳನ್ನು ಹೊಂದಿರುವವರು ಮೂರಕ್ಕಿಂತ ಹೆಚ್ಚು ನಾಯಿಗಳನ್ನು ಸಾಕಬಾರದು ಎಂದು ಆದೇಶ ತರಲಾಗಿದೆ ಎನ್ನುತ್ತಾರೆ ಪಾಲಿಕೆ ಮೇಯರ್ ಸಂಪತ್ ರಾಜ್.

ಬಿಬಿಎಂಪಿಯ ಈ ಹೊಸ ನಿಯಮ ನಾಗರಿಕ ಕಾರ್ಯಕರ್ತರಿಗೆ ಮತ್ತು ಸಾಕುನಾಯಿಗಳ ಮಾಲಿಕರಿಗೆ ಕೂಡ ಬೇಸರ ತರಿಸಿದೆ. ಹೆಚ್ಚು ನಾಯಿಗಳನ್ನು ಹೊಂದಿರುವವರು ಹಾಗಾದರೆ ಏನು ಮಾಡುವುದು ಬಿಟ್ಟುಬಿಡಬೇಕೆ ಎಂದು ಕೇಳುತ್ತಾರೆ.

ನಾಯಿಗಳನ್ನು ಸಾಕುವವರು ತಮ್ಮ ನಾಯಿಗಳ ಕುತ್ತಿಗೆಗೆ ಎಂಬೆಡೆಡ್ ಚಿಪ್ ಹೊಂದಿರುವ ರೇಡಿಯೊ ಕಾಲರ್ ನ್ನು ಹಾಕಬೇಕು. ನಾಯಿ ಸಾಕಲು ಅನುಮತಿ ಪಡೆಯದಿದ್ದರೆ ಮನೆ ಮಾಲಿಕ ಸಾವಿರ ರೂಪಾಯಿ ದಂಡ ವಿಧಿಸಬೇಕು ಎಂಬ ನಿಯಮ ಹೊರಡಿಸಲಾಗಿದೆ.

SCROLL FOR NEXT