ಸಾಂದರ್ಭಿಕ ಚಿತ್ರ 
ರಾಜ್ಯ

ಮಂಡ್ಯ: ಆರು ವರ್ಷದ ಬಾಲಕಿಯನ್ನು ಬಲಿ ತೆಗೆದುಕೊಂಡ ಬೆಂಕಿ ಪೊಟ್ಟಣ

ಬೆಂಕಿ ಪೊಟ್ಟಣದಲ್ಲಿ ಆಟವಾಡುತ್ತಿದ್ದ ಬಾಲಕಿ ಪ್ರಾಣ ಕಳೆದುಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ...

ಮಂಡ್ಯ: ಬೆಂಕಿ ಪೊಟ್ಟಣದಲ್ಲಿ ಆಟವಾಡುತ್ತಿದ್ದ ಬಾಲಕಿ ಪ್ರಾಣ ಕಳೆದುಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ವಿ ಸಿ ಕಾಲೊನಿಯಲ್ಲಿ ನಡೆದಿದೆ.

ಕಳೆದ ಜೂನ್ 1ರಂದು ಚೆಲುವರಾಜು ಮತ್ತು ಸರ್ವಮಂಗಳ ದಂಪತಿ ಹೊರಗಡೆ ಕೆಲಸಕ್ಕೆ ಹೋಗುವಾಗ ತಮ್ಮ ಆರು ವರ್ಷದ ಮಗಳನ್ನು ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ಹೋಗಿದ್ದರು. ಬೆಂಕಿಪೊಟ್ಟಣದಲ್ಲಿ ಆಟವಾಡುತ್ತಾ ಕಡ್ಡಿಯನ್ನು ಗೀರಿಕೊಂಡ ಬಾಲಕಿ ಬೆಂಕಿ ಹತ್ತಿ ಉರಿದು  ಮೈಯೆಲ್ಲಾ ಹತ್ತಿಕೊಂಡು ತೀವ್ರವಾಗಿ ಸುಟ್ಟುಹೋಗಿದ್ದಳು. ಆಕೆಯನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಪಾಂಡವಪುರದ ಲಾಡ್ಜೊಂದನ್ನು ಸ್ವಚ್ಛ ಮಾಡಿಕೊಡಲೆಂದು ಮಧ್ಯಾಹ್ನ 1.30ರ ಸುಮಾರಿಗೆ ದಂಪತಿಗೆ ಫೋನ್ ಬಂದಿತ್ತು. ಅದಕ್ಕಿಂತಲೂ ಮುಂಚೆ ದಂಪತಿ ತಮ್ಮಿಬ್ಬರು ಮಕ್ಕಳಿಗೆ ಊಟ ಕೊಟ್ಟು ಕೆಲಸಕ್ಕೆ ತೆರಳಿದ್ದರು. ಚಿಕ್ಕ ಮಗು ಪಕ್ಕದಲ್ಲಿದ್ದ ತನ್ನ ತಾತನ ಮನೆಗೆ ಹೋಗಿತ್ತು. ಬಾಲಕಿ ಮಾತ್ರ ಮನೆಯಲ್ಲಿಯೇ ಉಳಿದಿದ್ದಳು. ಮಗಳು ಹೊರಗೆಲ್ಲೂ ಹೋಗಬಾರದೆಂದು ಟಿವಿ ಹಾಕಿ ಕೆಲಸ ಮುಗಿಸಿಕೊಂಡು ಬರುತ್ತೇವೆಂದು ಹೇಳಿ ಮನೆಗೆ ಹೊರಗೆಯಿಂದ ಬಾಗಿಲು ಹಾಕಿ ಹೋಗಿದ್ದರು.

ಅಪರಾಹ್ನ 3.15ರ ಹೊತ್ತಿಗೆ ಬಾಲಕಿಯ ಮಾವನಿಗೆ ಮನೆಯ ಹೊರಗಿನಿಂದ ದೊಡ್ಡದಾಗಿ ಕಿರಿಚಿಕೊಳ್ಳುವ ಶಬ್ದ ಕೇಳಿಸಿತು. ಬಾಗಿಲು ತೆಗೆದು ನೋಡಿದರೆ ಮಗು ಬೆಂಕಿ ಹಿಡಿದು ನೆಲದಲ್ಲಿ ಹೊರಳಾಡುತ್ತಿತ್ತು. ನಂತರ ಬೆಂಕಿಯನ್ನು ಆರಿಸಿ ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಬಾಲಕಿಯ ದೇಹವಿಡೀ ಬೆಂಕಿಯಿಂದ ಬೆಂದುಹೋಗಿತ್ತು.

ವೈದ್ಯರ ಸಲಹೆ ಮೇರೆಗೆ ಬಾಲಕಿಯನ್ನು ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೊನ್ನೆ 5ರಂದು ಮೃತಪಟ್ಟಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್ 10 ವರ್ಷದಲ್ಲಿ 50 ಸಾವಿರ ಶೌಚಾಲಯ ಕಟ್ಟಲಿಲ್ಲ, ನಾವು 50 ಸಾವಿರ ರೈಲು ಕೋಚ್ ನಿರ್ಮಿಸಿದೆವು: ಪ್ರಧಾನಿ ಮೋದಿ

'ತಂದೆಯ ಮುಖವನ್ನೇ ನೋಡಿಲ್ಲ': ʻಬಿಗ್‌ ಬಾಸ್‌ʼ ವೇದಿಕೆಯಲ್ಲಿ ಅಪ್ಪ-ಅಮ್ಮನ ಡಿವೋರ್ಸ್‌ ನೋವು ಹಂಚಿಕೊಂಡ ʻಪ್ರೇಮಕಾವ್ಯʼ ನಟಿ ವೈಷ್ಣವಿ!

'ಶೀಘ್ರದಲ್ಲೇ ಶುಗರ್ ಡ್ಯಾಡಿಯನ್ನು ಕೊಲ್ಲುತ್ತೇನೆ': ಪತ್ನಿ ಕೊಂದು ತಲೆಯನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಪಾಪಿ, ಪೊಲೀಸರ ಮುಂದೆಯೇ ಬೆದರಿಕೆ!

ತಮಿಳುನಾಡು ವಿಧಾನಸಭೆಯಲ್ಲಿ ಭಾರೀ ಹೈಡ್ರಾಮಾ: ಸಿಎಂ ಜೋಸೆಫ್ ವಿಜಯ್ ಆರೋಪಕ್ಕೆ DMK ಆಕ್ರೋಶ, ಸದನದಿಂದ ಶಾಸಕರು ಹೊರಕ್ಕೆ..!

ಇಂಡೋನೇಷ್ಯಾದಲ್ಲಿ ಮತ್ತೆ ಸ್ಫೋಟಿಸಿದ Anak Krakatau ಜ್ವಾಲಾಮುಖಿ; ಲಾವಾ ಕಾರಂಜಿ, 15 ಕಿ.ಮೀ ಎತ್ತರಕ್ಕೆ ಬೂದಿ, ವಿಮಾನ ಸಂಚಾರ ಬಂದ್! Video