ಸಂಗ್ರಹ ಚಿತ್ರ 
ರಾಜ್ಯ

ಗೌರಿ ಲಂಕೇಶ್ ಹತ್ಯೆಯಲ್ಲಿ ಪ್ರವೀಣ್, ಮತ್ತಿತರರ ಮಹತ್ವದ ಪಾತ್ರವಿದೆ: ನವೀನ್ ಕುಮಾರ್ ತಪ್ಪೊಪ್ಪಿಗೆ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದಲ್ಲಿ ಪ್ರವೀಣ್ ಆಲಿಯಾಸ್ ಸುಚಿತ್ ಕುಮಾರ್ ಮತ್ತಿತರರ ಮಹತ್ವದ ಪಾತ್ರವಿದೆ ಎಂದು ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಕೆ. ಟಿ. ನವೀನ್ ಕುಮಾರ್ ಹೇಳಿದ್ದಾನೆ.

ಬೆಂಗಳೂರು: ಹಿರಿಯ ಪತ್ರಕರ್ತೆ  ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದಲ್ಲಿ  ಪ್ರವೀಣ್ ಆಲಿಯಾಸ್ ಸುಚಿತ್ ಕುಮಾರ್ ಮತ್ತಿತರರ ಮಹತ್ವದ ಪಾತ್ರವಿದೆ ಎಂದು ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಕೆ. ಟಿ. ನವೀನ್ ಕುಮಾರ್  ವಿಚಾರಣೆ ವೇಳೆ ಹೇಳಿದ್ದಾನೆ.
,ಶ್ರೀರಾಮ ಸೇನಾ ಮತ್ತು ಭಜರಂಗದಳದ ಕಾರ್ಯಕರ್ತರಾಗಿ ಹೇಗೆ ಹಿಂದೂತ್ವ ಸಿದ್ದಾಂತದ  ಬಗ್ಗೆ ಒಲವು ಮೂಡಿಸಬೇಕು ಎಂಬ ಬಗ್ಗೆ  ಪ್ರವೀಣ್ ವಿವರ  ನೀಡುತ್ತಿದ್ದ . ಅಲ್ಲದೇ,  ಚಿಂತಕ ಪ್ರೋಫೆಸರ್ ಎಸ್. ಕೆ. ಭಗವಾನ್ ಅವರ ಮೇಲೂ ಕಣ್ಣಿಡುವಂತೆ ಸೂಚನೆ ನೀಡಿದ್ದ ಎಂದು ನವೀನ್ ಕುಮಾರ್ ತಿಳಿಸಿದ್ದಾನೆ.
ಪ್ರವೀಣ್,  ಮದ್ದೂರಿನಲ್ಲಿ ಹಿಂದೂ ಯುವ ಸೇನಾ  ಸಂಘಟನೆ ಸ್ಥಾಪಿಸಿದ್ದು,  ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರ ಗಮನ ಸೆಳೆಯುತ್ತಿದ್ದ .ಕಳೆದ ವರ್ಷ ಇದೇ ತಿಂಗಳು  ಗೋವಾದಲ್ಲಿ ನಡೆದಿದ್ದ  ಹಿಂದೂ ಜನಜಾಗೃತಿ ಸಮಿತಿಯ ಸಮ್ಮೇಳನದಲ್ಲೂ ಭಾಗಿಯಾಗಿದ್ದ. 
ಹಿಂದೂ ಧರ್ಮ ರಕ್ಷಣೆಗಾಗಿ ಶಸಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಆತನ ಪ್ರಚೋದನಾಕಾರಿ ಭಾಷಣದಿಂದ ಅನೇಕ ಮಂದಿ ಆಕರ್ಷಿತರಾಗಿದ್ದರು. ಹಿಂದೂ ಪರ ಸಂಘಟನೆಯ ಮೋಹನಗೌಡ  ಕೂಡಾ ಆತನನ್ನು ಹಾಡಿ  ಹೊಗಳಿದ್ದ ಎಂದು ಪೊಲೀಸರಿಗೆ  ತಿಳಿಸಿದ್ದಾನೆ.
 ಗೌರಿ ಲಂಕೇಶ್ ಹತ್ಯೆಗೂ ಮುನ್ನಾ, ತದನಂತರ ಬಿರೂರ್ ನಲ್ಲಿನ ತಮ್ಮ ನಿವಾಸದಲ್ಲಿಯೇ  ಇಬ್ಬರೂ ತಂಗಿದ್ದೇವು.ಬೆಂಗಳೂರಿನಲ್ಲಿ ಆಗಸ್ಟ್ 20 ರಂದು ಧಾರ್ಮಿಕಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಪ್ರಮೀಣ್ , ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡುತ್ತಿರುವ  ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೊಲ್ಲಬೇಕೆಂದು  ನನ್ನೊಂದಿಗೆ ಚರ್ಚೆ ನಡೆಸಿದ್ದ.  ಗನ್ ಮತ್ತು ಬುಲೆಟ್ ಪೂರೈಕೆ ಮಾಡಿದ್ದರೆ  ಈ ಕೆಲಸ ಮಾಡಲು  ತಮ್ಮ ಹುಡುಗರು ಸಿದ್ಧರಿದ್ದಾರೆ ಎಂದು ಹೇಳಿರುವ ಸಂಗತಿಯನ್ನು ಬಾಯ್ಬಿಟ್ಟಿದ್ದಾನೆ.
ಅವರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದೆ ಆದರೆ, ಯಶಸ್ವಿಯಾಗಲಿಲ್ಲ.  ಸೆಪ್ಟೆಂಬರ್ 6 ರಂದು ಮಂಗಳೂರಿನ ಉರ್ವಾ ಆಶ್ರಮದಲ್ಲಿದ್ದಾಗ ಗೌರಿ ಲಂಕೇಶ್ ಹತ್ಯೆ ಸುದ್ದಿಯನ್ನು  ಟಿವಿ ಹಾಗೂ ಪತ್ರಿಕೆಗಳಿಂದ ತಿಳಿದುಕೊಂಡಿದ್ದಾಗಿ ಆತ ಹೇಳಿಕೆ ನೀಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT