ರಾಜ್ಯ

ಜೆಇಇ ಅಡ್ವಾನ್ಸ್‌ ಫಲಿತಾಂಶ: ರಾಜ್ಯದಲ್ಲಿ ಬೆಂಗಳೂರು ವಿದ್ಯಾರ್ಥಿಗಳದೇ ಪಾರಮ್ಯ

Raghavendra Adiga
ಬೆಂಗಳೂರು: ಇಂದು ಪ್ರಕಟವಾದ ಜೆಇಇ ಅಡ್ವಾನ್ಸ್‌ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯದ ಕೆಲ ವಿದ್ಯಾರ್ಥಿಗಳು ಉನ್ನತ ಶ್ರೇಯಾಂಕಗಳನ್ನು ಪಡೆದಿದ್ದಾರೆ.  ಬೆಂಗಳೂರು ಎಚ್ ಎಸ್ ಆರ್ ಲೇಔಟ್ ನಲ್ಲಿರುವ ಎಫ್ ಐಐಅಟಿ ಜೆಇಇ ಪಿಯು ಕಾಲೇಜಿನ ವಿದ್ಯಾರ್ಥಿ ಅದ್ವಯ್ ಗಿರೀಶ್ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದು ಈತ ರಾಷ್ಟ್ರ ಮಟ್ಟದಲ್ಲಿ 43ನೇ ಶ್ರೇಯಾಂಕ ಗಳಿಸಿದ್ದಾರೆ.
ಮೂಲತಃ ತಿರುವನಂತಪುರದವರಾದ ಗಿರೀಶ್ ಬೆಂಗಳೂರಿನಲ್ಲಿವ್ಯಾಸಂಗ ಮಾಡುತ್ತಿದ್ದು ಇವರು ಜೆಇಇ ಅಡ್ವಾನ್ಸ್‌ ಪರೀಕ್ಷೆಯಲ್ಲಿ 360 ಅಂಕಗಳಲ್ಲಿ 289 ಅಂಕವನ್ನು ಪಡೆದುಕೊಂಡಿದ್ದಾರೆ. ಐಐಟಿ ಬಾಂಬೆಯಲ್ಲಿ ಲೆಕ್ಟ್ರಿಕಲ್ ಇಂಜಿನಿಯರಿಂಗ್ ಅಧ್ಯಯನ ಮಾಡಲು ಉದ್ದೇಶಿಸಿರುವ ಗಿರೀಶ್ ತನ್ನ ಅಂಕಗಳಿಕೆ ಆಧಾರದಲ್ಲಿ ಐಐಅಟಿಗೆ ನನಗೆ ಪ್ರವೇಶ ದೊರೆಯಲಿದೆ ಎಂದು ಭರವಸೆ ಹೊಂದಿದ್ದಾರೆ.
ಫುಟ್ಬಾಲ್ ಪ್ರೇಮಿಯಾದ ಗಿರೀಶ್ ಪರೀಕ್ಷೆಯ ಕಾರಣ ಕಳೆದ ಎರಡು ವರ್ಷಗಳಿಂದ ಯಾವ ಕ್ರೀಡೆಗಳಲ್ಲಿ ಭಾಗವಹಿಸಿರ್ಲಿಲ್ಲ. ಈಗ ಫಲಿತಾಂಶ ಬಂದಿದ್ದು ಮನಸ್ಸು ನಿರಾಳವಾಗಿದೆ. ಇನ್ನೇನು ಪ್ರಾರಂಭವಾಗಲಿರುವ ಫಿಫಾ ವಿಶ್ವ ಕಪ್ ಫುಟ್ಬಾಲ್ ಸರಣಿಯ ಎಲ್ಲಾ ಪಂದ್ಯಗಳನ್ನು ವೀಕ್ಷಿಸುತ್ತೇನೆ ಎಂದಿದ್ದಾರೆ.
ಇನ್ನು ಇದೇ ಎಫ್ ಐಐಅಟಿ ಜೆಇಇ ಪಿಯು ಕಾಲೇಜಿನ ಇನ್ನೋರ್ವ ವಿದ್ಯಾರ್ಥಿ ರಾಜಸ್ಥಾನ ಉದಯಪುರ ಮೂಲದ ಅರಿಹಂತ್ ಸಮರ್ ರಾಜ್ಯಕ್ಕೆ ಎರಡನೇ ಸ್ಥಾ ಗಳಿಸಿಕೊಟ್ಟಿದ್ದಾರೆ. ಇವರು ರಾಷ್ಟ್ರಮಟ್ಟದಲ್ಲಿ 113ನೇ ಶ್ರೇಯಾಂಕ ಗಳಿಸಿದ್ದಾರೆ.
ಆಂಧ್ರ ಮೂಲದ ನಿತಿನ್ ಕೃಷ್ಣ, 273ನೇ ಶ್ರೇಯಾಂಕದೊಡನೆ ಮೂರನೇ ಸ್ಥಾನದಲ್ಲಿದ್ದು ಇವರು ನಾರಾಯಣ ಸ್ಕೂಲ್ ವಿದ್ಯಾರ್ಥಿಯಾಗಿದ್ದಾರೆ.ಬಿ.ಡಬ್ಲ್ಯುಎಸ್ಎಸ್ ಬಿ ಅಧ್ಯಕ್ಷ, ಐಎಎಸ್ ಅಧಿಕಾರಿಯಾದ ತುಷಾರ್ ಗಿರಿನಾಥ್ ಅವರ ಪುತ್ರ ತುಹಿನ್ ಗಿರಿನಾಥ್ ಅವರು 340 ನೇ ಶ್ರೇಯಾಂಕ ಪಡೆದಿದ್ದು ಇವರು ಕುರುಬರಹಳ್ಳಿಯಲ್ಲಿರುವ ನಾರಾಯಣ ಇ-ಟೆಕ್ನೋ ಸ್ಕೂಲ್ ವಿದ್ಯಾರ್ಥಿಯಾಗಿದ್ದಾರೆ.
SCROLL FOR NEXT