ರಾಜ್ಯ

ಗೌರಿ ಲಂಕೇಶ್‌ ಶೂಟ್‌ ಮಾಡಿದ್ದು ನಾನೇ: ತಪ್ಪೊಪ್ಪಿಕೊಂಡ ಪರಶುರಾಮ್‌ ವಾಗ್ಮೋರೆ

Lingaraj Badiger
ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರನ್ನು ಶೂಟ್‌ ಮಾಡಿದ್ದು ನಾನೇ  ಎಂದು ಬಂಧಿತ ಪ್ರಮುಖ ಆರೋಪಿ ಪರಶುರಾಮ್‌ ವಾಗ್ಮೋರೆ ಎಸ್ ಐಟಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. 
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ನಿನ್ನೆ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ 26 ವರ್ಷ ಪರಶುರಮ್ ವಾಗ್ಮೋರ್ ಯನ್ನು ಬಂಧಿಸಿದ್ದರು.
ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸುತ್ತಿದ್ದಂತೆಯೇ ಅಧಿಕಾರಿಗಳ ಎದುರು ತಪ್ಪೊಪ್ಪಿಕೊಂಡಿರುವ ಪರಶುರಾಮ್‌, 'ಶೂಟ್‌ ಮಾಡಿದ್ದು ನಾನೇ, ಆದರೆ ಶೂಟ್‌ ಮಾಡಿದ ನಂತರ ನನ್ನ ಕೈಯಿಂದ ಬೇರೊಬ್ಬರು ಗನ್‌ ಪಡೆದುಕೊಂಡರು. ಅವರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿದ್ದಾನೆ' ಎನ್ನಲಾಗಿದೆ. 
ಇನ್ನು ಈ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ, ಒಂದೆರಡು ದಿನಗಳಲ್ಲಿ ಪತ್ರಿಕಾಗೋಷ್ಠಿ ಕರೆದು ಎಲ್ಲವನ್ನೂ ವಿವರಿಸುವುದಾಗಿ ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. 
ವಾಗ್ಮೋರೆ ವಿಚಾರಣೆ ವೇಳೆ ಗೊಂದಲದ ಹೇಳಿಕೆ ನೀಡುತ್ತಿದ್ದು, ಗೌರಿಯನ್ನ ಶೂಟ್ ಮಾಡಿದ ಬಳಿಕ ಅಮೋಲ್ ಕಾಳೆಗೆ ರಿವಾಲ್ವರ್ ಕೊಟ್ಟಿರುವುದಾಗಿ ಈ ಮೊದಲು ಹೇಳಿಕೆ ನೀಡಿದ್ದ. ಆದರೆ, ಈಗ ಆ ರಿವಾಲ್ಹರ್ ಯಾರಿಗೆ ಕೊಟ್ಟೆ ಅಂತ ನೆನಪಾಗುತ್ತಿಲ್ಲ ಅಂತಿದ್ದಾನೆ. ಸದ್ಯ ಪರಶುರಾಮ್ ಜೊತೆ ಅಮೋಲ್ ಕಾಳೆ ವಿಚಾರಣೆಯೂ ನಡೆಯುತ್ತಿದೆ.
SCROLL FOR NEXT