ಉಡುಪಿ: ಉಡುಪಿ ಜಿಲ್ಲೆ ಪೆರ್ಡೂರು ಬಳಿ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದ ದನದ ವ್ಯಾಪಾರಿ ಹುಸೈನಬ್ಬ ಸಾವಿನ ತನಿಖೆಯನ್ನು ಸಿಐಡಿಗೆ ಒಪ್ಪಿಸಲು ರಾಜ್ಯ ಸರ್ಕಾರ ಸಮ್ಮತಿಸಿದೆ.
ಈ ಸಂಬಂಧ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದ್ದು ಮುಂದಿನ 2,3 ದಿನಗಳಲ್ಲಿ ಸಿಐಡಿ ಅಧಿಕಾರಿಗಳು ಉಡುಪಿಗೆ ಬಂದು ಪ್ರಕರಣದ ಮಾಹಿತಿ ಪಡೆದು ತನಿಖೆ ಪ್ರಾರಂಭಿಸಲಿದ್ದಾರೆ ಎನ್ನಲಾಗಿದೆ.
ಕಳೆದ ಮೇ 30ರಂದು ಬೆಳಗ್ಗಿನ ಜಾವ ವಾಹನದಲ್ಲಿ ಜಾನುವಾರು ಸಾಗಣೆ ಮಾಡುತ್ತಿದ್ದ ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ ಮೇಲೆ ಪೆರ್ಡೂರು ಗ್ರಾಮದ ಶೇನರಬೆಟ್ಟು ಬಳಿಯಲ್ಲಿ ಹಲ್ಲೆಯಾಗಿತ್ತು. ಪೋಲೀಸರ ಸಮ್ಮುಖದಲ್ಲಿಯೇ ಭಜರಂಗದಳ ಕಾರ್ಯಕರ್ತರು ಹುಸೈನಬ್ಬ ಮೇಲೆ ಹಲ್ಲೆ ಮಾಡಿದ್ದು ಹಲ್ಲೆಗೊಳಗಾದ ಆತ ಮೃಅತಪಟ್ಟಿದ್ದ..
ಹೀಗೆ ದನದ ವ್ಯಾಪಾರಿಯ ಹತ್ಯೆ ಆರೋಪಕ್ಕೆ ಸಂಬಂಧಿಸಿ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸ್ ಸಬ್ ಇನ್ಸ್ ಪೆಕರ್ ಸಹಿತ 3 ಪೊಲೀಸರು ಹಾಗೂ 7 ಸಂಘ ಪರಿವಾರದವರನ್ನು ಬಂಧಿಸಲಾಗಿದೆ.
ಸಧ್ಯ ಆರೋಪಿಗಳೆಲ್ಲಾ ಕಾರವಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು 10 ಮಂದಿ ಆರೋಪಿಗಳು ತಮಗೆ ಜಾಮೀನು ಕೋರಿ ಉಡುಪಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.