ಸಾಂದರ್ಭಿಕ ಚಿತ್ರ 
ರಾಜ್ಯ

1, 2ನೇ ತರಗತಿ ಮಕ್ಕಳಿಗೆ ಹೋಂ ವರ್ಕ್ ನಿಷೇಧ, ಶೀಘ್ರದಲ್ಲೆ ಕರ್ನಾಟಕ ಶಿಕ್ಷಣ ಇಲಾಖೆ ಅಧಿಸೂಚನೆ

ಚಿಕ್ಕ ಮಕ್ಕಳಿಗೆ ಹೆಚ್ಚುವರಿ ಹೊರೆಯಾಗದ ಹಾಗೆ ರಾಜ್ಯ ಶಾಲೆಗಳ 1, 2ನೇ ತರಗತಿಯ ಮಕ್ಕಳಿಗೆ ಮನೆಗೆಲಸ (ಹೋಮ್ ವರ್ಲ್) ನೀಡುವುದನ್ನು ಶೀಘ್ರದಲ್ಲಿ ನಿಲ್ಲಿಸಲಾಗುವುದು

ಬೆಂಗಳೂರು: ಚಿಕ್ಕ ಮಕ್ಕಳಿಗೆ ಹೆಚ್ಚುವರಿ ಹೊರೆಯಾಗದ ಹಾಗೆ ರಾಜ್ಯ ಶಾಲೆಗಳ 1, 2ನೇ ತರಗತಿಯ ಮಕ್ಕಳಿಗೆ ಮನೆಗೆಲಸ (ಹೋಮ್ ವರ್ಲ್) ನೀಡುವುದನ್ನು ಶೀಘ್ರದಲ್ಲಿ ನಿಲ್ಲಿಸಲಾಗುವುದು  ಮದ್ರಾಸ್ ಹೈಕೋರ್ಟ್ ಆದೇಶ ಜತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆಯನ್ನು ಆಧರಿಸಿ ರಾಜ್ಯದ ಪ್ರಾಥಮಿಕ ಹಾಗೂ ಮಾದ್ಯಮಿಕ ಶಿಕ್ಷಣ ಇಲಾಖೆ ಹೊಸ ನಿಯಮವನ್ನು ಜಾರಿಗೆ ತರುವ ಸಂಬಂಧ ಚಿಂತನೆಯಲ್ಲಿದೆ.
ಇಲಾಖೆಯ ಮೂಲಗಳು ಹೇಳಿದಂತೆ , "ಚರ್ಚೆಗಳು ನಡೆಯುತ್ತಿದ್ದು, 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನಿಷೇಧಿಸುವ ಅಧಿಕೃತ ಅಧಿಸೂಚನೆಯನ್ನು ಕೆಲವು ದಿನಗಳಲ್ಲಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ." 
ಸಧ್ಯ ರಾಜ್ಯದಲ್ಲಿ ಹೋಂ ವರ್ಕ್ ನಿಷೇಧಿಸುವ ಕ್ರಮ ಜಾರಿಯಲ್ಲಿಲ್ಲ. ಮಕ್ಕಳ ಒಳಿತಿಗಾಗಿ ಈ ನೀತಿಯನ್ನು ಜಾರಿಗೆ ತರುವುದಕ್ಕೆ ಸರ್ಕಾರ ಚಿಂತನೆ ನಡೆಇಸಿದೆ."ಇಲ್ಲಿ ಕೇವಲ ಹೋಮ್ ವರ್ಕ್ ಸಮಸ್ಯೆಯಲ್ಲ,  ಗಮನಿಸಬೇಕಾದ ಬಹಳಷ್ಟು ಸಮಸ್ಯೆಗಳಿವೆ. ಇಲಾಖೆ ನೀತಿಯೊಂದನ್ನು ರಚಿಸಲು ಮುಂದಾಗಿದೆ. ಶಿಕ್ಷಣ ಮಂತ್ರ್ಗಳು ಉಸ್ತುವಾರಿ ವಹಿಸಿಕೊಂಡಾಗ  ನಾವು ಅದನ್ನು ಮೊದಲು ಅವರ ಮುಂದಿಡುತ್ತೇವೆ, ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ"
"ಶಾಲೆಗಳು ಮಕ್ಕಳಿಗೆ ಸಂತೋಷದಾಯಕ ಸ್ಥಳವಾಗಿರಬೇಕು. ಆದರೆ ಇಂದು ಬಹುತೇಕ ಶಾಲೆಗಲಲ್ಲಿ ಒಂದು ಎರಡನೇ ತರಗತಿ ಮಕ್ಕಳಿಗೂ ಹೋಂ ವರ್ಕ್ ನಿಡಲಾಗುತ್ತಿದೆ. ಇದರ ನಿಷೇಧಕ್ಕೆ ಇಲಾಖೆ ಸ್ಪಷ್ಟ ನಿರ್ಧಾರಕ್ಕೆ ಬರಲಿದೆ" ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದ ಒಂದು ಎರಡನೇ ತರಗತಿ ಮಕ್ಕಳಿಗೆ ಹೋಂ ವರ್ಕ್ ನಿಷೇಧವಾಗಬೇಕು ಎನ್ನುವುದು ದೀರ್ಘಾವಧಿ ಬೇಡಿಕೆಯಾಗಿದೆ. ಪ್ರೊಫೆಶನಲ್ ಯಶ್ ಪಾಲ್ ಸಮಿತಿಯುಆರಂಭಿಕ ಹಂತದಲ್ಲಿ ಶಾಲಾ ಮಕ್ಕಳ ಮೇಲೆ ದೈಹಿಕ ಮತ್ತು ಶೈಕ್ಷಣಿಕ ಹೊರೆಗಳನ್ನು ತಗ್ಗಿಸಲು ಹಲವಾರು ಶಿಫಾರಸುಗಳನ್ನು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದರಲ್ಲಿ ಶಾಲಾ ಬ್ಯಾಗ್ ಗಳ ತೂಕ ಇಳಿಸಿಉವುದು, ಹೋಂ ವರ್ಕ್ ಕಡಿತವೂ ಸೇರಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್