ಪುತ್ತೂರು: ತನ್ನ ಇಚ್ಛೆಯಂತೆ ಜೆಸಿಬಿ ಆಪರೇಟರ್ ಆಗಿರುವ ವರ ಮದುವೆ ಮಂಟಪಕ್ಕೆ ಜೆಸಿಬಿಯಲ್ಲಿ ವಧುವೊಂದಿಗೆ ಪಯಾಣ ಮಾಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಂಟ್ಯಾರ್ ಸಮೀಪದ ಕಲ್ಲಕಟ್ಟ ನಿವಾಸಿ ಚೇತನ್ ಎಂಬುವರು ತನಗೆ ಅನ್ನ ನೀಡುತ್ತಿರುವ ಉದ್ಯೋಗದ ಮೇಲಿನ ಪ್ರೀತಿಯನ್ನು ತಮ್ಮ ಮದುವೆಯಲ್ಲೂ ಜೆಸಿಬಿ ಪ್ರೇಮ ಮೆರೆದಿದ್ದಾರೆ.
ಪರ್ಪುಂಜ ಶಿವಕೃಪಾ ಸಭಾಭವನದಲ್ಲಿ ವಧು ಮಮತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾರಿನಲ್ಲಿ ದಿಬ್ಬಣ ಬಂದಿದ್ದ ವಧೂ ವರರ ಕಡೆಯವರು ಮದುವೆ ಮುಗಿದ ಮೇಲೆ ಜೆಸಿಬಿಯಲ್ಲಿ ಮನೆಗೆ ತೆರಳಿದ್ದಾರೆ.