ಹುಬ್ಬಳ್ಳಿ: ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಯಾವಾಗ ಎಂಬ ಫೇಸ್ ಬುಕ್ ಪೋಸ್ಟ್ ಶೇರ್ ಮಾಡಿದ್ದ ಪೊಲಿಸ್ ಪೇದೆಯನ್ನು ಅಮಾನತು ಮಾಡಲಾಗಿದೆ.
15 ದಿನದಲ್ಲಿ ರೈತರ ಸಾಲಮನ್ನಾ ಮಾಡದಿದ್ದರೇ ರಾಜಿನಾಮೆ ನೀಡುವುದಾಗಿ ಹೇಳಿದ್ದೀರಿ, ಈಗ 18 ದಿನಗಳಾಗಿದೆ ರಾಜಿನಾಮೆ ಯಾವಾಗ ಎಂಬ ಪೋಸ್ಟ್ ಅನ್ನು ಪೊಲೀಸ್ ಠಾಣೆ ಪೇದೆ ಅರುಣ್ ಡೊಳ್ಳಿನ್ ಶೇರ್ ಮಾಡಿದ್ದರು.
ಸರ್ಕಾರ ರಚನೆಯಾಗಿ 18 ದಿನಗಳು ಕಳೆದರೂ ರೈತರ ಸಾಲಮನ್ನಾ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ ಎಂದು ಪ್ರಶ್ನಿಸಿ ಶಿಕಾರಿ ಪುರ ಬೆಜೆಪಿ ಪೋಸ್ಟ್ ಅನ್ನು ಅರುಣ್ ಡೊಳ್ಳಿನ್ ಶೇರ್ ಮಾಡಿದ್ದರು. ಪೊಲೀಸ್ ಪೇದೆ ಅರುಣ್ ಡೊಳ್ಳಿನ್‌ನನ್ನು ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಎಂ.ಎನ್. ನಾಗರಾಜ್ ಆದೇಶ ಹೊರಡಿಸಿದ್ದಾರೆ.