ನಾವು ಕಾನೂನಾತ್ಮಕವಾಗಿ ಡಿಕೆಶಿ ಜತೆಗಿದ್ದೇವೆ: ಕುಮಾರಸ್ವಾಮಿ
ಬೆಂಗಳೂರು: ನಾವು ಕಾನೂನಾತ್ಮಕವಾಗಿ ಡಿಕೆ ಶಿವಕುಮಾರ್ ಜತೆಗಿದ್ದೇವೆ. ಅವರೇಕೆ ರಾಜೀನಾಮೆ ನಿಡಬೇಕು? ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಅಘೋಷಿತ ನಗದು ಹಾಗು ಸುಳ್ಳು ದಾಖಲೆ ಹೊಂದಿದ ಆರೋಪಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಬೇಕು ಎಂದು ಆರ್ಥಿಕ ಅಪರಾಧ ನ್ಯಾಯಾಲಯ ಸಚಿವ ಡಿಕೆ ಶಿವಕುಮಾರ್ ಗೆ ಸಮನ್ಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಕಾನೂನು ಪ್ರಕಾರ ಹೋರಾಟ ನಡೆಸುತ್ತಿದ್ದಾರೆ. ಸುದ್ದಿ ಮಾದ್ಯಮಗಳು ಇದನ್ನು ದೊಡ್ಡ ವಿಷಯವಾಗಿ ಬಿಂಬಿಸುವ ಅಗತ್ಯವಿಲ್ಲ.ಬಿಜೆಪಿಯವರು ಯಾರು ಎಷ್ಟು ಬಾರಿ ರಾಜೀನಾಮೆ ಸಲ್ಲಿಸಿದ್ದಾರೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ಡಾರೆ.
ಡಿಕೆಶಿ ಕಾನೂನು ಪ್ರಕಾರ ನಡೆದಿದ್ದಾರೆ
ರಾಜ್ಯದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಮಾತನಾಡಿ ಡಿಕೆ ಶಿವಕುಮಾರ್ ಕಾನೂನು ಪ್ರಕಾರ ಆದಾಯ ತೆರಿಗೆ ಇಲಾಖೆಗೆ ದಾಖಲೆ ಸಲ್ಲಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರನ್ನೇ ಗುರುತಿಸಿ ಐಟಿ ದಾಳಿ ನಡೆಸುವ ಕೇಂದ್ರ ಸರ್ಕಾರದ ನಡೆ ಸಂಬಂಧ ಸಾಕಷ್ಟು ಬಾರಿ ಪ್ರಸ್ತಾಪಿಸಲಾಗಿದೆ. ಐಟಿ ಇಲಾಖೆಯನ್ನು ಕೇಂದ್ರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದರು.