ರಾಜ್ಯ

ಪಾತಳಕ್ಕೆ ಕುಸಿದ ಬೆಲೆ: ರಸ್ತೆಗೆ ಟೊಮೊಟೊ ಸುರಿದು ದಾವಣಗೆರೆ ರೈತರ ಅಸಮಾಧಾನ

Shilpa D
ದಾವಣಗೆರೆ/ ಚಿತ್ರದುರ್ಗ: ಟೊಮೊಟೊ ಬೆಲೆ ತೀವ್ರವಾಗಿ ಕುಸಿದ ಕಾರಣ ದಾವಣಗೆರೆ ವೋಲ್ ಸೇಲ್ ತರಕಾರಿ ಮಾರುಕಟ್ಟೆಯಲ್ಲಿ ರೈತರು  ತಾವು ಬೆಳೆದ ಟಮೋಟೋವನ್ನು ರಸ್ತೆಗೆ ಟಮಟೋ ಸುರಿದಿದ್ದಾರೆ.
ಬೆಳೆ ಬೆಳೆಯಲು ನಾವು ಅಪಾರ ಪ್ರಮಾಣದಲ್ಲಿ ಹಣ ಖರ್ಚು ಮಾಡಿರುತ್ತೇವೆ, ಆದರೆ ಅತಿ ಕಡಿಮೆ ಬೆಲೆ ನಮಗೆ ಸಿಗುತ್ತದೆ. ನಾವು ಖರ್ಚು ಮಾಡಿದ ಹಣವೂ ಕೂಡ ನಮಗೆ ವಾಪಸ್ ಸಿಗುವುದಿಲ್ಲ, ಹೀಗಾಗಿ ನಾವು ಟೋಮೋಟವನ್ನು ರಸ್ತೆಗೆ ಸುರಿದಿದ್ದೇವೆ ಎಂದು ರೈತ ಮಂಜುನಾಥ್ ಎಂಬುವರು ತಿಳಿಸಿದ್ದಾರೆ.
ಈ ಭಾಗದಲ್ಲಿ ಫುಡ್ ಪಾರ್ಕ್ ಇರದ ಕಾರಣ ನಾವು ಮಾರಾಟಗಾರರನ್ನು ಅವಲಂಬಿಸಿರುವುದು ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. 
ಸರ್ಕಾರ ಬೆಳೆಗೆ ದರ ನಿಗದಿ ಪಡಿಸಬೇಕು, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರು ಮಾತ್ರ ಪರಿಹರಿಸಬಹುದು. ಚಿತ್ರದುರ್ಗದಲ್ಲಿ ಕೆಜಿ 5 ರು ಇದ್ದ ಟಮೊಟೋ ಬೆಲೆ 10 ರೂ ಗೆ ಏರಿಕೆಯಾಗಿದೆ. ಮಂಗಳವಾರ ಬೆಳಗ್ಗೆ ಮತ್ತೆ ಬೆಲೆ ಏರಿಕೆ ನಿರೀಕ್ಷೆ ಮಾಡಲಾಗುತ್ತಿದೆ. 
ಚಿತ್ರದುರ್ಗದಲ್ಲಿ ಆಹಾರ ಸಂಸ್ಕರಣಾ ಉದ್ಯಾನ ಸ್ಥಾಪಿಸಬೇಕು ಎಂದು ಪ್ರಭು ಎಂಬ ರೈತ ಆಗ್ರಸಿದ್ದಾರೆ. ಪಾರ್ಕೆ ಕೆಲಸ ಆರಂಭಿಸಿದರೆ ಕೊನೆ ಪಕ್ಷ , ತಾವು ಬೆಳೆಗ ಬೆಳೆಗಳಿಗೆ ನಿಗದಿತ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆ ಇರುತ್ತದೆ ಎಂದು ತಿಳಿಸಿದ್ದಾರೆ. ವರ್ಷ ಪೂರ್ತಿ ಜಿಲ್ಲೆಯ ಜನರು, ಟಮೊಟೊ, ಮೆಣಸಿನಕಾಯಿ, ಬದನೆಕಾಯಿ, ಈರುಳ್ಳಿ ಬೆಳೆಯುತ್ತಾರೆ.
ರೈತರಿಗೆ ಆಗುತ್ತಿರುವ ನಷ್ಟ ತಪ್ಪಿಸಲು ರಾಜ್ಯ ಸರ್ಕಾರ ಮಧ್ಯಪ್ರವೇಶಿಸಬೇಕು ಹಾಗೂ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು. ಜೊತೆಗೆ ಯುವಕರಿಗೆ ಉದ್ಯೋಗ ದೊರಕಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಈಚಘಟ್ಟ ಸಿದ್ದವೀರಪ್ಪ ಆಗ್ರಹಿಸಿದ್ದಾರೆ.
SCROLL FOR NEXT