ನಮ್ಮ ಮೆಟ್ರೊ 
ರಾಜ್ಯ

ನಮ್ಮ ಮೆಟ್ರೊ ನೌಕರರಿಗೆ ಗುಡ್ ನ್ಯೂಸ್: ಜುಲೈ 1ರಿಂದ ಹಲವು ಭತ್ಯೆಗಳ ಸೌಲಭ್ಯ

ಬೆಂಗಳೂರು ಮೆಟ್ರೊ ರೈಲು ನಿಗಮದಲ್ಲಿನ ನೌಕರರಿಗೆ ಕಾರ್ಯನಿರ್ವಹಣೆ ಮತ್ತು ನಿರ್ವಹಣೆ ...

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮದಲ್ಲಿನ ಕೆಲವು ನೌಕರರಿಗೆ ಕಾರ್ಯನಿರ್ವಹಣೆ ಮತ್ತು ನಿರ್ವಹಣೆ ಭತ್ಯೆ ಹಾಗೂ ವಾಶಿಂಗ್ ಮತ್ತು ಸಾರಿಗೆ ಭತ್ಯೆ ಜುಲೈ 1ರಿಂದ ಸಿಗಲಿದೆ. ಮೆಟ್ರೊ ಮೊದಲ ಹಂತದ ಕಾಮಗಾರಿ ಯಶಸ್ವಿಯಾಗಿ ಮುಗಿದ ಹಿನ್ನೆಲೆಯಲ್ಲಿ ನೌಕರರ ಶ್ರಮ ಮತ್ತು ಪ್ರಯತ್ನವನ್ನು ಗುರುತಿಸಿ ಮೆಟ್ರೊ ರೈಲು ನಿಗಮ ಈ ನಿರ್ಧಾರಕ್ಕೆ ಬಂದಿದೆ.

ಕಾರ್ಯನಿರ್ವಹಣೆ ಮತ್ತು ನಿರ್ವಹಣೆ ವಿಭಾಗದ ನೌಕರರು ಹೆಚ್ಚಿನ ಅವಧಿಯವರೆಗೆ ಕೆಲಸ ಮತ್ತು ಕೆಲಸದಲ್ಲಿ ಬಹಳ ಕಷ್ಟಪಡುತ್ತಿದ್ದಾರೆ. ಅವರ ಹಗಲು ರಾತ್ರಿಯ ದುಡಿಮೆಯಿಂದಾಗಿ ಮೆಟ್ರೊ ಮೊದಲ ಹಂತದ ಕಾಮಗಾರಿ ಯಶಸ್ವಿಯಾಗಿ ಒಂದು ವರ್ಷಗಳನ್ನು ಪೂರೈಸಿದೆ.

ಅವರ ಶ್ರಮವನ್ನು ಗುರುತಿಸಿ ಉಡುಗೊರೆಯಾಗಿ ವಿಶೇಷ ಭತ್ಯೆಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಮೆಟ್ರೊ ಪ್ರಧಾನ ವ್ಯವಸ್ಥಾಪಕ ಜಿ ಎಸ್ ಪತ್ರಿ ತಿಳಿಸಿದ್ದಾರೆ. ಈ ಸಂಬಂಧ ಕಳೆದ 22ರಂದು ಆದೇಶ ಹೊರಡಿಸಿದ್ದಾರೆ.

ಆದೇಶದ ಪ್ರತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದ್ದು ರಾತ್ರಿ ಪಾಳಿ ಕೆಲಸ ಭತ್ಯೆ, ಕಠಿಣ ಕೆಲಸ ಭತ್ಯೆ, ಬಟ್ಟೆ ತೊಳೆಯುವ ಭತ್ಯೆ ಮತ್ತು ಸಾರಿಗೆ ಭತ್ಯೆಯನ್ನು ಜುಲೈ 1ರಿಂದ ಕಾರ್ಯನಿರ್ವಹಣೆ ಮತ್ತು ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುವವರಿಗೆ ನೀಡಲಾಗುತ್ತದೆ. ಮೆಟ್ರೊ ನಿಗಮದ ಹಣಕಾಸು ಪರಿಸ್ಥಿತಿಯನ್ನು ನೋಡಿಕೊಂಡು ಈ ಭತ್ಯೆಗಳನ್ನು ನೀಡಲಾಗುವುದು ಎಂದರು.

ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕರ್ತವ್ಯದಲ್ಲಿರುವ ನೌಕರರಿಗೆ ರಾತ್ರಿ ಪಾಳಿ ಭತ್ಯೆಗಳನ್ನು ವಿಸ್ತರಿಸಲು ಮೆಟ್ರೊ ನಿಗಮ ನಿರ್ಧರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ʻರಿಪಬ್ಲಿಕ್ ಆಫ್ ಬಳ್ಳಾರಿʼಗೆ ಮತ್ತೆ ಅವಕಾಶ ನೀಡಲ್ಲ; ರೆಡ್ಡಿ ಕೋಟೆ ನಿರ್ಮಿಸಿಕೊಂಡಿದ್ದಾರೆ, ಅವರನ್ನು ಕೊಲ್ಲಲು ಸಾಧ್ಯವೇ?

ವೆನೆಜುವೆಲಾಗೆ ನುಗ್ಗಿದ ಅಮೆರಿಕ ಸೇನೆ: 30 ನಿಮಿಷಗಳಲ್ಲೇ ರಣಬೇಟೆ; ಅಧ್ಯಕ್ಷ ಮಡುರೊ-ಪತ್ನಿ ಸೆರೆ, ತುರ್ತುಪರಿಸ್ಥಿತಿ ಘೋಷಣೆ!

6,6,6,6,6,4: ಒಂದೇ ಓವರ್ ನಲ್ಲಿ 34 ರನ್ ಚಚ್ಚಿದ Hardik Pandya, 93 ಎಸೆತಗಳಲ್ಲಿ 133ರನ್ ಗಳಿಕೆ! Video

ಭಾರತದ ಭಯ: 600 ಕಿ.ಮೀ ದೂರದ ಗುರಿ ಹೊಡೆಯಬಲ್ಲ 'ತೈಮೂರ್ ಕ್ಷಿಪಣಿ' ಪರೀಕ್ಷೆ ನಡೆಸಿದ ಪಾಕಿಸ್ತಾನ!

ಪತ್ನಿಗೆ ಮಾಸಿಕ 5 ಲಕ್ಷ ಜೀವನಾಂಶ ನೀಡುವಂತೆ ಪತಿಗೆ ದೆಹಲಿ ಕೋರ್ಟ್ ಆದೇಶ!

SCROLL FOR NEXT