ಬಿಎಂಟಿಸಿ ಬಸ್ಸು 
ರಾಜ್ಯ

ಇನ್ನು ಮುಂದೆ ಬಿಎಂಟಿಸಿಯ ಎಲ್ಲಾ ಬಸ್ಸುಗಳಿಗೆ ನೀಲಿ-ಬಿಳಿ ಬಣ್ಣ

ಹವಾ ನಿಯಂತ್ರಿತ ಮತ್ತು ಮಿಡಿ ಬಸ್ಸುಗಳನ್ನು ಹೊರತುಪಡಿಸಿ ಬೆಂಗಳೂರು ಮಹಾನಗರ ಸಾರಿಗೆ ...

ಬೆಂಗಳೂರು: ಹವಾ ನಿಯಂತ್ರಿತ ಮತ್ತು ಮಿಡಿ ಬಸ್ಸುಗಳನ್ನು ಹೊರತುಪಡಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಸುಗಳು ಮುಂದಿನ ದಿನಗಳಲ್ಲಿ ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ಕಂಗೊಳಿಸಲಿವೆ.

ಸಾಕಷ್ಟು ಸಮೀಕ್ಷೆ ನಡೆಸಿದ ಬಳಿಕ ಬೆಂಗಳೂರು ಮಹಾನಗರ ಸಾರಿಗೆ ನಿಗಮ ಈ ನಿರ್ಧಾರ ತೆಗೆದುಕೊಂಡಿದೆ. ಬಿಎಂಟಿಸಿಯ 850 ಹವಾ ನಿಯಂತ್ರಿತ ಬಸ್ಸುಗಳು ಸಂಪೂರ್ಣ ನೀಲಿ ಬಣ್ಣದಲ್ಲಿ ಹಾಗೂ 400 ಮಿಡಿ ಬಸ್ಸುಗಳು ಕೇಸರಿ ಬಣ್ಣದಲ್ಲಿ ಕಂಗೊಳಿಸಲಿವೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 5,299 ನಿಗದಿತ ಬಸ್ಸುಗಳ ಬಣ್ಣಗಳನ್ನು ಬದಲಾಯಿಸಲು ಕಳೆದ 23ರಂದು ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಈ ವಿಷಯವನ್ನು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ ಬಸವರಾಜು ದೃಢಪಡಿಸಿದ್ದಾರೆ. ಬಿಎಂಟಿಸಿ ಬಸ್ಸಿನ ಚಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರಲ್ಲಿ ಬಸ್ಸುಗಳ ಬಣ್ಣ ಕುರಿತು ಸಾಕಷ್ಟು ಸಮೀಕ್ಷೆ ನಡೆಸಿದೆ. ಹಿಂದೆ ನಮ್ಮಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಬಸ್ಸುಗಳಿದ್ದವು. ಸಮೀಕ್ಷೆಯಲ್ಲಿ ಬಹುತೇಕರು ಈ ಬಣ್ಣವನ್ನು ಆಯ್ಕೆ ಮಾಡಿಕೊಂಡರು ಎಂದರು.

ನಸುಕಿನ ಜಾವ ಮತ್ತು ರಾತ್ರಿ ಹೊತ್ತು ಬಸ್ಸು ಬರುವುದು ನೀಲಿ ಮತ್ತು ಬಿಳಿ ಬಣ್ಣವಾಗಿದ್ದರೆ ಚೆನ್ನಾಗಿ ಕಾಣಿಸುತ್ತದೆ, ಸುರಕ್ಷತೆ ದೃಷ್ಟಿಯಿಂದಲೂ ಉತ್ತಮ ಎಂದು ಅನೇಕ ಚಾಲಕರು ಮತ್ತು ನಿರ್ವಾಹಕರು ಹೇಳಿದರು ಎನ್ನುತ್ತಾರೆ ಬಸವರಾಜು.

1997ರಲ್ಲಿ ಬಿಎಂಟಿಸಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಪ್ರತ್ಯೇಕಿಸಿದಾಗ ಎಲ್ಲಾ ಬಸ್ಸುಗಳು ನೀಲಿ ಮತ್ತು ಬಿಳಿ ಬಣ್ಣಗಳಿದ್ದವು. ಅದು ಕಾಲಾಂತರದಲ್ಲಿ ಬದಲಾಯಿತು ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಹೇಳುತ್ತಾರೆ.

ಪ್ರತಿ ಬಸ್ಸಿಗೆ ವಾರ್ಷಿಕ ಕ್ಷಮತೆ ಪ್ರಮಾಣಪತ್ರ ನೀಡಿದ ಮೇಲೆಯೇ ಬಣ್ಣಗಳ ಬದಲಾವಣೆ ಮಾಡಲಾಗುವುದು. ಮಹಿಳೆಯರಿಗೆ ಪ್ರತ್ಯೇಕ ಆಸನಕ್ಕೆ ಮತ್ತು ಅಲ್ಲಿ ಪುರುಷರು ಕುಳಿತುಕೊಳ್ಳಬಾರದು ಎಂದು ಗುಲಾಬಿ ಬಣ್ಣದ ಸೀಟುಗಳನ್ನು ಇಡಲಾಗುವುದು ಎಂದು ಅಧಿಕಾರಿಗಳು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT