ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಉಮೇಶ್ ಜಾಧವ್ 
ರಾಜ್ಯ

ಕಾರ ಹುಣ್ಣಿಮೆ ಸಂಭ್ರಮಾಚರಣೆ ವೇಳೆ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಗೆ ಗಾಯ

ಕಾರಹುಣ್ಣಿಮೆ ಸಂಭ್ರಮಾಚರಣೆ ವೇಳೆ ವೇಗವಾಗಿ ಬಂದ ಬಂಡಿ ಶಾಸಕ ಡಾ.ಉಮೇಶ್ ಜಾಧವ್ ಕಾಲು ಮೇಲೆ ಹಾಯ್ದ ಪರಿಣಾಮ ಶಾಸಕರು ಗಾಯಗೊಂಡಿರುವ ...

ಕಲಬುರಗಿ: ಕಾರಹುಣ್ಣಿಮೆ ಸಂಭ್ರಮಾಚರಣೆ ವೇಳೆ ವೇಗವಾಗಿ ಬಂದ ಬಂಡಿ ಶಾಸಕ ಡಾ.ಉಮೇಶ್ ಜಾಧವ್ ಕಾಲು ಮೇಲೆ ಹಾಯ್ದ ಪರಿಣಾಮ ಶಾಸಕರು ಗಾಯಗೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆ ಚಿಂಚೋಳಿ ಪಟ್ಟಣದಲ್ಲಿ ನಡೆದಿದೆ.
ಚಿಂಚೋಳಿ ಶಾಸಕರಾಗಿರುವ ಉಮೇಶ್ ಜಾಧವ್, ಚಿಂಚೋಳಿ ಪಟ್ಟಣದಲ್ಲಿ ನಡೆದ ಕಾರ ಹುಣ್ಣಿಮೆ ಉತ್ಸವದಲ್ಲಿ ಪಾಲ್ಗೊಂಡಿದ್ದರು.  ಮೊದಲು ಪೂಜೆ ಸಲ್ಲಿಸಿ  ಚಕ್ಕಡಿ ಓಡಿಸಿ ಸಂಭ್ರಮಿಸಿದ ಜಾಧವ್, ನಂತರ ಮೊಬೈಲ್ ನಲ್ಲಿ ಮಾತನಾಡುತ್ತಾ ನಿಂತಿದ್ದರು, ಈ ವೇಳೆ ವೇಗವಾಗಿ ಒಡಿ ಬಂದ ಎತ್ತಿನ ಬಂಡಿ ನಿಂತಿದ್ದ ಗುಂಪಿನ ಮೇಲೆ ನುಗ್ಗಿದೆ.
ಈ ವೇಳೆ ಉಮೇಶ್ ಜಾಧವ್ ಅವರ ಮೇಲೆ ಬಂಡಿ ಹಾಯ್ದಿದ್ದು, ಬಲಗಾಲು ಮತ್ತು ಭುಜಕ್ಕೆ ಗಾಯಗಳಾಗಿವೆ. ಸ್ವಲ್ಪದರಲ್ಲಿಯೇ ಜಾಧವ್ ಅವರು, ಭಾರಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಇನ್ನೂ ಇಬ್ಬರಿಗೆ ಗಾಯಗಳಾಗಿವೆ. 
ಇದೇ ವೇಳೆ ಎತ್ತಿನ ಬಂಡಿ ಮೇಲಿಂದ ಬಿದ್ದು 35 ವರ್ಷದ ರಾಜು ಚೌಹಾನ್ ಎಂಬಾತ ಮೃತ ಪಟ್ಟಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!