ರಾಜ್ಯ

ಈಗ ಕನ್ನಡದಲ್ಲೂ ರೈಲ್ವೆ ಟಿಕೆಟ್ ಲಭ್ಯ!

Raghavendra Adiga
ಮೈಸೂರು: ರೈಲ್ವೆ ಟಿಕೆಟ್ ಗಳಿನ್ನು ಕನ್ನಡದಲ್ಲಿ ಇರಲಿದೆ! ಇಂದಿನಿಂದ(ಮಾ.2) ಜಾರಿಗೆ ಬರುವಂತೆ ಮೈಸೂರು, ಬೆಂಗಳೂರು ಹಾಗೂ ಹುಬ್ಬಳ್ಳಿ ರೈಲು ನಿಲ್ದಾಣಗಳಲ್ಲಿ ಕನ್ನಡದಲ್ಲಿ ರೈಲ್ವೆ ಟಿಕೆಟ್ ವಿತರಣೆ ಪ್ರಾರಂಭವಾಗಿದೆ.
ಸ್ವಯಂಚಾಲಿತ ಟಿಕೆಟ್ ಮಾರಾಟ ಯಂತ್ರಗಳ (ಎಟಿವಿಎಂ) ಮೂಲಕ ಮುದ್ರಿತವಾಗುವ ದ್ವಿತೀಯ ದರ್ಜೆಯ ಟಿಕೆಟ್‌ಗಳಲ್ಲಿ ಕನ್ನಡ ಭಾಷೆಯನ್ನು ಬಳಸಲು ನೈರುತ್ಯ ರೈಲ್ವೆ ಮುಂದಾಗಿದ್ದು ಭಾರತದ  ಎಲ್ಲಾ 9,094 ನಿಲ್ದಾಣಗಳ ಹೆಸರನ್ನು ಕನ್ನಡ ಭಾಷೆಯಲ್ಲಿ ಮುದ್ರಣಗೊಳ್ಳುವಂತೆ ಸಾಫ್ಟ್ ವೇರ್ ಅಪ್ ಡೇಟ್ ಮಾಡಲಾಗಿದೆ.
ಇನ್ನು ಮು<ದೆ ಯಾವ ನಿಲ್ದಾಣದಿಂದ ಯಾವ ನಿಲ್ದಾಣದವರೆಗೆ ಎನ್ನುವ ಪ್ರಯಾಣದ ವಿವರಗಳು, ಪ್ರಯಾಣದ ದರ್ಜೆ ಮತ್ತು ರೈಲಿನ ವಿಧ (ಪ್ಯಾಸೆಂಜರ್/ಎಕ್ಸ್‌ಪ್ರೆಸ್)ಗಳ ವಿವರಗಳು ಕನ್ನಡ ಭಾಷೆಯಲ್ಲಿಯೂ ಮುದ್ರಣಗೊಂಡಿರಲಿದೆ.
ಇದುವರೆಗೆ ರೈಲ್ವೆ ಟಿಕೆಟ್ ನಲ್ಲಿ ಎಲ್ಲಿಂದ ಎಲ್ಲಿಗೆ ಎನ್ನುವ ವಿವರಗಳು ಆಂಗ್ಲ ಭಾಷೆ ಹಾಗೂ ಹಿಂದಿ ಬಾಷೆಯಲ್ಲಿ ಮಾತ್ರವೇ ವಿವರಗಳಿರುತ್ತಿದ್ದವು. ಈ ವಿವರಗಳು ಕನ್ನಡದಲ್ಲಿ ಬರಬೇಕೆಂದು ಹಲವರು ಒತ್ತಾಯಪಡಿಸಿದ್ದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಈ ಉಪಕ್ರಮ ತೆಗೆದುಕೊಂಡಿದೆ. ಇದೇನಾದರೂ ಯಶಸ್ವಿಯಾದಲ್ಲಿ ರಾಜ್ಯದ ಇತರೆ ನಿಲ್ದಾಣಗಳಲ್ಲಿ ಸಹ ಕನ್ನಡದಲ್ಲಿ ಟಿಕೆಟ್ ವಿತರಣೆ ಮಾಡಲಾಗುವುದು ಎಂದು  ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
SCROLL FOR NEXT