ರಾಜ್ಯ

ದ್ವಿತೀಯ ಪಿಯುಸಿ ಪರೀಕ್ಷೆ ; 1 ಲಕ್ಷ ನಕಲಿ ವಿದ್ಯಾರ್ಥಿಗಳು - ಪದವಿ ಪೂರ್ವ ಶಿಕ್ಷಣ ಇಲಾಖೆ ಶಂಕೆ

Nagaraja AB

ಬೆಂಗಳೂರು :  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 1 ಲಕ್ಷ   ಶಂಕಿತ ನಕಲಿ ವಿದ್ಯಾರ್ಥಿಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪತ್ತೆ ಹಚ್ಚಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ಆರಂಭದ ನಂತರ ಈ ಪ್ರಶ್ನೆ ಎದ್ದಿದೆ.  ಪರೀಕ್ಷೆಗಾಗಿ ನೋಂದಣಿ ಮಾಡಿರುವವರು ಹಾಗೂ ಪರೀಕ್ಷೆ ಬರೆಯುತ್ತಿರುವವರು ಬೇರೆ ಬೇರೆಯಾಗಿದ್ದಾರೆ. 

6.90 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 5,60.318 ವಿದ್ಯಾರ್ಥಿಗಳು ಪರೀಕ್ಷೆಗಾಗಿ ಹಾಜರಾದ್ದರೆ, 26, 029 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ.

ಈ ವಿದ್ಯಾರ್ಥಿಗಳ ಮಾಹಿತಿ ಪರಿಶೀಲಿಸಿದಾಗ, ಅನುದಾನ ಕಾಲೇಜುಗಳು ತಮ್ಮ ಅಸ್ತಿತ್ವಕ್ಕಾಗಿ ಇಂತಹ ನಕಲಿ ವಿದ್ಯಾರ್ಥಿಗಳನ್ನುನಿರ್ವಹಣೆ ಮಾಡುತ್ತಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ವಿದ್ಯಾರ್ಥಿಗಳ ಸಂಖ್ಯೆಗಾಗಿ ಈ ರೀತಿಯ ನಿರ್ವಹಣೆ ಮಾಡುತ್ತಿರಬಹುದು , ಈ ಬಗ್ಗೆ ಯಾವುದೇ ಕಾನೂನು ಮಾಡಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ ಅನುದಾನ ರದ್ದುಗೊಳಿಸುವ ಆದೇಶವಿದೆ. ನಗರ ಪ್ರದೇಶಗಳಲ್ಲಿರುವ ಕಾಲೇಜುಗಳಲ್ಲಿ
ಇದು ಕಂಡುಬರುತ್ತಿದೆ.ಇಂತಹ ಪ್ರಕರಣಗಳಲ್ಲಿ ಕಾಗದದಲ್ಲಿ ಮಾತ್ರ ವಿದ್ಯಾರ್ಥಿಗಳಿರುವುದು ಕಂಡುಬರುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

 ಇದನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ ನಿರಾಕರಿಸಿದ್ದಾರೆ. ಆಧಾರ್ ನಂಬರ್ ಹಾಗೂ ಪೋಟೋ ಜೊತೆಗೆ ಆನ್ ಲೈನ್ನಲ್ಲಿ ಪರೀಕ್ಷೆಗೆ  ಅವಕಾಶ ಮಾಡಿಕೊಡಲಾಗಿದೆ. ಇದು  ನಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ.

SCROLL FOR NEXT